ನವದೆಹಲಿ/ಗಾಜಿಯಾಬಾದ್: ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ತಮ್ಮ ಮಕ್ಕಳಿಗೆ ಜೊತೆಗಾರರನ್ನು ಹುಡುಕುವ ಪೋಷಕರು ಬಹಳ ಎಚ್ಚರವಾಗಿರಬೇಕಿದೆ. ಉತ್ತರ ಪ್ರದೇಶ - ನವದೆಹಲಿ ಗಡಿಭಾಗವಾದ ಗಾಜಿಯಾಬಾದ್ನಲ್ಲಿ ನಡೆದ ಪ್ರಕರಣವೊಂದು ಎಚ್ಚರಿಕೆಯ ಸಂದೇಶ ನೀಡುತ್ತಿದೆ.
ಗಾಜಿಯಾಬಾದ್ನ ಕವಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಯುವತಿಗೆ ಆಕೆಯ ಪೋಷಕರು ಶಾದಿ.ಕಾಮ್ (Shaadi.com) ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ವರನನ್ನು ಹುಡುಕಿದ್ದರು. ಯುವತಿಯ ಭೇಟಿಗೆ ಆಕೆಯ ಮನೆಗೆ ಬಂದಿದ್ದ ಯುವಕ ಮನೆಯಲ್ಲಿದ್ದ ಎರಡು ಮೊಬೈಲ್ ಫೋನ್ ಮತ್ತು ಲಕ್ಷಾಂತರ ರೂ. ಮೌಲ್ಯದ ಆಭರಣಗಳನ್ನು ಕದ್ದು ಪರಾರಿಯಾಗಿದ್ದಾನೆ.