ನವದೆಹಲಿ:ರಾಷ್ಟ್ರ ರಾಜಧಾನಿ ಶಹಬಾದ್ ಡೈರಿಯಲ್ಲಿ ಪ್ರೀತಿಸಿದವಳನ್ನು 24 ಬಾರಿ ಇರಿದು ಕೊಂದ ಘಟನೆ ಘಟನೆ ನಡೆದು ಕೆಲವೇ ದಿನಗಳಾಗಿದ್ದು, ಅಂಥಹದ್ದೇ ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಬೆಳಕಿಗೆ ಬಂದಿದೆ. ತನ್ನನ್ನು ಪ್ರೀತಿಸಲಿಲ್ಲ ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿಯೊಬ್ಬ ಯುವತಿಯ ಕತ್ತು ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಯುವತಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಳು. ಪ್ರೀತಿಗಾಗಿ ಪೀಡಿಸುತ್ತಿದ್ದ ಯುವಕ ಆಕೆಯ ಕಚೇರಿಗೆ ಆಗಮಿಸಿದ್ದಾನೆ. ಈ ವೇಳೆ ತಗಾದೆ ತೆಗೆದು ಒತ್ತಾಯಿಸಿದ್ದಾನೆ. ಯುವತಿ ಒಪ್ಪದಿದ್ದಾಗ ಚಾಕುವಿನಿಂದ ಕತ್ತು ಸೀಳಿದ್ದಾನೆ. ಅಲ್ಲಿದ್ದ ಸಿಬ್ಬಂದಿ ಆತನನ್ನು ಹಿಡಿದಾಗ, ಯುವತಿ ತಪ್ಪಿಸಿಕೊಂಡಿದ್ದಾಳೆ. ಬಳಿಕ ಯುವಕ ಕೋಣೆಯೊಂದರಲ್ಲಿ ಹೋಗಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಯುವಕನ ಒನ್ಸೈಡ್ ಪ್ರೇಮ್ ಕಹಾನಿ:ದೆಹಲಿಯ ರೋಹಿಣಿ ಜಿಲ್ಲೆಯ ಬೇಗಂಪುರದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, 20 ವರ್ಷದ ಅಮಿತ್ ಕೊಲೆಗೆ ಯತ್ನಿಸಿ, ಆತ್ಮಹತ್ಯೆ ಮಾಡಿಕೊಂಡವ. ಉದ್ಯೋಗಸ್ಥೆಯಾಗಿದ್ದ ಯುವತಿಗೆ ಅಮಿತ್ ದಿನವೂ ಪ್ರೀತಿಗಾಗಿ ಪ್ರಾಣ ಹಿಂಡುತ್ತಿದ್ದ. ಆದರೆ, ಇದನ್ನು ಆಕೆ ನಿರಾಕರಣೆ ಮಾಡಿದ್ದಳು. ಇಷ್ಟಾದರೂ ಬಿಡದ ಅಮಿತ್, ನೇರವಾಗಿ ಯುವತಿಯ ಆಫೀಸಿಗೆ ಬಂದಿದ್ದಾನೆ. ಶುಕ್ರವಾರ ಮಧ್ಯಾಹ್ನ ಕಚೇರಿಯಲ್ಲಿ ಅಮಿತ್ ಹಾಗೂ ಆತನ ಇಬ್ಬರು ಸಹಚರರು ಹಾಜರಿದ್ದರು.
ಕಚೇರಿ ಬಂದ ಯುವತಿಯನ್ನು ಪ್ರೀತಿಸಲು ಮತ್ತೆ ಕಾಡಿದ್ದಾನೆ. ಆದರಾಕೆ ನಿರಾಕರಣೆ ಮಾಡುತ್ತಲೇ ಇದ್ದಳು. ಇದರಿಂದ ರೊಚ್ಚಿಗೆದ್ದ ಯುವಕ ಹೊರಗೆ ತೆರಳಿ ಚಾಕುವನ್ನು ತಂದು ಆಕೆಯ ಕತ್ತು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಯುವತಿಯನ್ನು ಕಂಡ ಸಹ ಸಿಬ್ಬಂದಿ ಅಮಿತ್ನನ್ನು ಹಿಡಿದಿದ್ದಾರೆ. ಆಗ ಯುವತಿ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಓಡಿದ್ದಾಳೆ.