ಕಾನ್ಪುರ (ಉತ್ತರಪ್ರದೇಶ):ಕಾನ್ಪುರದ ದೇಹತ್‌ನಲ್ಲಿಯ ಮಂಗಲ್‌ಪುರ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿದ ಆರೋಪಿ ಕತ್ತು ಕುಯ್ದುಕೊಂಡು ಗಂಭೀರವಾಗಿ ಗಾಯಾಗೊಂಡಿರುವ ಘಟನೆ ನಡೆದಿದೆ. ಅಲೋಕ್ ಗುಪ್ತಾ ಗಾಯಗೊಂಡಿರುವ ಆರೋಪಿ. ಸದ್ಯ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಂಧಿತ ಅಲೋಕ್ ಗುಪ್ತಾನನ್ನು ಅಪ್ರಾಪ್ತ ಬಾಲಕಿಯನ್ನ ಅಪಹರಿಸಿದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಸೋಮವಾರ ಪೊಲೀಸ್ ಕಸ್ಟಡಿಯಲ್ಲಿ ಕತ್ತು ಕೊಯ್ದುಕೊಂಡಿದ್ದಾನೆ. ಇದಕ್ಕೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಪೊಲೀಸ್ ಕಸ್ಟಡಿಯಲ್ಲಿರುವ ಅಲೋಕ್ಗೆ ಹರಿತವಾದ ವಸ್ತು ಹೇಗೆ ಸಿಕ್ಕಿತು? ಮತ್ತು ಸ್ವತಃ ಆರೋಪಿಯೇ ಕತ್ತು ಕುಯ್ದುಕೊಂಡಿದ್ದಾ ಅಥವಾ ಬೇರೆಯವರ ಕೈವಾಡವಿದೆಯಾ ಎಂಬ ಪ್ರಶ್ನೆಗಳು ಹುಟ್ಟುಕೊಂಡಿವೆ. ಘಟನೆ ಬಳಿಕ ಪೊಲೀಸ್ ಅಧಿಕಾರಿಗಳು ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಮಧ್ಯಪ್ರದೇಶದ ಸತ್ನಾ ಟಿಕುರಿಯಾ ಟೋಲಾ ನರ್ವಾನ್ ಇಂಟರ್‌ಸೆಕ್ಷನ್ ಬಳಿ ವಾಸಿಸುತ್ತಿದ್ದ 32 ವರ್ಷದ ಅಲೋಕ್ ಗುಪ್ತಾ ಎಂಬ ಯುವಕ 15 ವರ್ಷದ ಬಾಲಕಿಯನ್ನು ಆಮಿಷಕ್ಕೆ ಒಳಪಡಿಸಿ ಅಪಹರಿಸಿದ್ದ ಎಂದು ಮಂಗಳಪುರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ತಂದೆ ಆರೋಪಿ ಅಲೋಕ್ ಗುಪ್ತಾ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಸಿಕೊಂಡಿದ್ದರು. ಸುಮಾರು 15 ದಿನಗಳ ನಂತರ ಮಂಗಳಾಪುರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಅಲೋಕ್ ಗುಪ್ತಾನನ್ನು ಬಂಧಿಸಿದ್ದಾರೆ.
ಸೋಮವಾರ ಆರೋಪಿಯ ವಿಚಾರಣೆ ನಡೆಸಿದ ನಂತರ ಅಲೋಕ್‌ನನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿತ್ತು. ಅಲ್ಲದೇ ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಆರೋಪಿ ಅಲೋಕ್ ಕತ್ತು ಕೊಯ್ದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾನೆ. ಕೂಡಲೇ ಗಾಯಾಳು ಆರೋಪಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರದ ಹಲಾತ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲೋಕ್ ಕುತ್ತಿಗೆಯ ರಕ್ತನಾಳಗಳು ಕಟ್ ಆಗಿದ್ದು ಚಿಕಿತ್ಸೆ ಮುಂದುವರೆದಿದೆ. ಇನ್ನು ಘಟನೆ ಕುರಿತು ವಿಧಿವಿಜ್ಞಾನ ತಂಡದ ಸಿಬ್ಬಂದಿ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.