ಅಲ್ವಾರ್(ರಾಜಸ್ಥಾನ) :ಪೋಷಕರ ವಿರೋಧದ ನಡುವೆಯೂ ಯುವಕ ತನ್ನ ಪ್ರೇಯಸಿಯೊಂದಿಗೆ ನಾಲ್ಕು ವರ್ಷಗಳಿಂದ ಲಿವಿಂಗ್ ಟು ಗೆದರ್ನಲ್ಲಿದ್ದ. ಆದರೆ, ಇಬ್ಬರ ಮಧ್ಯೆ ಮನಸ್ತಾಪವುಂಟಾಗಿ ಶುರುವಾದ ಜಗಳ ಯುವಕನ ಹತ್ಯೆಯಲ್ಲಿ ಅಂತ್ಯವಾಗಿದೆ.
ಜಿಲ್ಲೆಯ ಶಿವಾಜಿ ಪಾರ್ಕ್ ಪೊಲೀಸ್ ಠಾಣೆ ವ್ಯಾಪ್ತಿಯ ಬುದ್ಧ ವಿಹಾರದಲ್ಲಿ ಕರಣ್ ಎಂಬಾತ ತನ್ನ ಪೂನಂ ಜತೆಗೆ ನಾಲ್ಕು ವರ್ಷಗಳಿಂದ ಲಿವಿಂಗ್ ಟು ಗೆದರ್ನಲ್ಲಿದ್ದ. ಇಬ್ಬರೂ ಕೊಟ್ವಾಲಿ ಪೊಲೀಸ್ ಠಾಣಾ ವ್ಯಾಪ್ತಿಯ ದರ್ವಾಜಾ ನಿವಾಸಿಗಳು. ಕೆಲವು ವಿಚಾರಗಳಲ್ಲಿ ಇಬ್ಬರಿಗೂ ಆಗಾಗ್ಗೆ ಜಗಳ ಉಂಟಾಗುತ್ತಿತ್ತು. ಆದರೆ, ಶುಕ್ರವಾರ ರಾತ್ರಿ ವಿವಾದವು ತಾರಕಕ್ಕೇರಿದ್ದು, ಪ್ರೇಯಸಿಯೇ ದೊಣ್ಣೆಯಿಂದ ಹೊಡೆದು ಪ್ರಿಯತಮನ ಹತ್ಯೆಗೈದಿದ್ದಾಳೆ.