ಕರ್ನಾಟಕ

karnataka

ETV Bharat / bharat

ಹಾಡಹಗಲೇ ಕೈಯಲ್ಲಿ ಡ್ರಗ್ಸ್​​ ಇಂಜೆಕ್ಷನ್ ಹಿಡಿದು ಓಡಾಡಿದ ಯುವಕ: ವಿಡಿಯೋ ವೈರಲ್​ - ಡ್ರಗ್ಸ್

ಪಂಜಾಬ್​ನಲ್ಲಿ ಹಾಡಹಗಲೇ ರಾಜಾರೋಷವಾಗಿಯೇ ಡ್ರಗ್ಸ್​​ ಇಂಜೆಕ್ಷನ್ ಕೈಯಲ್ಲಿ ಹಿಡಿದುಕೊಂಡು ಯುವಕ ಸುತ್ತಾಡುತ್ತಿರುವ ವಿಡಿಯೋ ವೈರಲ್​ ಆಗಿದೆ.

young-man-holding-a-drug-injection-in-amritsar-video-goes-viral
ಹಾಡಹಗಲೇ ಕೈಯಲ್ಲಿ ಡ್ರಗ್ಸ್​​ ಇಂಜೆಕ್ಷನ್ ಹಿಡಿದು ಓಡಾಡಿದ ಯುವಕ

By

Published : Sep 30, 2022, 3:11 PM IST

ಅಮೃತಸರ (ಪಂಜಾಬ್​): ಪಂಜಾಬ್​ನಲ್ಲಿ ಮತ್ತೊಂದು ಆತಂಕಕಾರಿ ದೃಶ್ಯ ಬೆಳಕಿಗೆ ಬಂದಿದೆ. ನಡುರಸ್ತೆಯಲ್ಲೇ ಯುವಕನೊಬ್ಬ ಕೈಯಲ್ಲಿ ಡ್ರಗ್ಸ್​​ ಇಂಜೆಕ್ಷನ್ ಹಿಡಿದು ಓಡಾಡುತ್ತಿರುವ ಘಟನೆ ಅಮೃತಸರದ ಮಕ್ಬುಲ್​ ಪೂರ್ಣ ಪ್ರದೇಶದಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಡಹಗಲೇ ಕೈಯಲ್ಲಿ ಡ್ರಗ್ಸ್​​ ಇಂಜೆಕ್ಷನ್ ಹಿಡಿದು ಓಡಾಡಿದ ಯುವಕ

ಪಂಜಾಬ್ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮಾದಕವಸ್ತು ಕಳ್ಳಸಾಗಣೆದಾರರ ವಿರುದ್ಧ ಬೃಹತ್​ ಕಾರ್ಯಾಚರಣೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳುತ್ತಿದೆ. ಆದರೆ, ಒಂದೆಡೆ ಯುವಕರು ಹಾಡಹಗಲೇ ರಾಜಾರೋಷವಾಗಿಯೇ ಡ್ರಗ್ಸ್​​ ಕೈಯಲ್ಲಿ ಹಿಡಿದುಕೊಂಡು ಸುತ್ತಾಡುತ್ತಿದ್ದಾರೆ. ಜೊತೆಗೆ ನಶೆಯಲ್ಲಿ ತೇಲಾಡುತ್ತಿರುವ ಯುವಕರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದೀಗ ಮಕ್ಬುಲ್​ ಪೂರ್ಣ ಪ್ರದೇಶದಲ್ಲಿ ಯುವಕನೊಬ್ಬ ಕೈಯಲ್ಲಿ ಡ್ರಗ್ಸ್​​ ಇಂಜೆಕ್ಷನ್ ಓಡಾಡುತ್ತಿರುವುದು ಬೆಳಕಿಗೆ ಬಂದಿದೆ. ತಾಯಿ ಮತ್ತು ಮಗಳು ಡ್ರಗ್ಸ್ ಮಾರಾಟ ಮಾಡುತ್ತಿದ್ದು, ಅವರಿಂದ ಈ ಡ್ರಗ್ಸ್ ತಂದಿರುವುದಾಗಿ ವಿಡಿಯೋದಲ್ಲಿ ಯುವಕ ಹೇಳಿದ್ದಾರೆ. ಅಲ್ಲದೇ, ಕಳೆದ ಎರಡ್ಮೂರು ತಿಂಗಳಿಂದ ಡ್ರಗ್ಸ್ ತರುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ:ಮದ್ಯದ ಅಮಲಿನಲ್ಲಿ ದಾರಿ ಮಧ್ಯೆ ತೇಲಾಡಿದ ನಾರಿ: ವಿಡಿಯೋ ವೈರಲ್

ABOUT THE AUTHOR

...view details