ಕರ್ನಾಟಕ

karnataka

ETV Bharat / bharat

20 ರೂಪಾಯಿಗೆ 50 ಕಿ.ಮೀ.​ ಪ್ರಯಾಣ​.. ವಿಶೇಷ ಬೈಕ್​​ ತಯಾರಿಸಿದ ಯುವಕ! - ರಾಜಸ್ಥಾನದ ಯುವಕನಿಂದ ವಿಶೇಷ ಬೈಕ್

ಇಂದಿನ ದುಬಾರಿ ದುನಿಯಾದಲ್ಲಿ ನಮ್ಮಿಷ್ಟದ ಬೈಕ್​ ಖರೀದಿ ಮಾಡಿ, ದೂರದ ಪ್ರಯಾಣ ಮಾಡುವುದು ಅಷ್ಟು ಸುಲಭವಲ್ಲ. ಆದರೆ, ರಾಜಸ್ಥಾನದ ಯುವಕನೋರ್ವ ಇಂತಹ ಕನಸನ್ನು ನನಸು ಮಾಡಿದ್ದಾರೆ. ಹಳೆಯ ಬೈಕ್​ಗೆ ಹೊಸ ರೂಪ ನೀಡಿದ್ದಾರೆ.

young Man made Electronic Bike
young Man made Electronic Bike

By

Published : Apr 30, 2022, 7:44 PM IST

ಪಾಲಿ(ರಾಜಸ್ಥಾನ):ದಿನದಿಂದ ದಿನಕ್ಕೆ ಪೆಟ್ರೋಲ್​, ಡಿಸೇಲ್​ ಬೆಲೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ಕನಸಿನ ಬೈಕ್​ ಖರೀದಿಸಿ ದೂರದ ಪ್ರಯಾಣ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾ ದುಬಾರಿಯಾಗ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್​ ಹಾಕ್ಬೇಕು ಎಂದು ಸಂಕಲ್ಪ ತೊಟ್ಟ ರಾಜಸ್ಥಾನದ ಯುವಕನೋರ್ವ ಕೇವಲ 15ರಿಂದ 20 ರೂಪಾಯಿ ವೆಚ್ಚದಲ್ಲಿ 50 ಕಿಲೋ ಮೀಟರ್​ ಕ್ರಮಿಸಬಲ್ಲ ಎಲೆಕ್ಟ್ರಾನಿಕ್​ ಬೈಕ್​ ತಯಾರಿಸಿದ್ದಾರೆ.

ದಿನೇಶ್ ಮಾಳವೀಯ ಈ ಬೈಕ್​​ಗೋಸ್ಕರ 50 ರಿಂದ 60 ಸಾವಿರ ರೂಪಾಯಿ ಖರ್ಚು ಮಾಡಿದ್ದು, ಹಳೆಯ ಬೈಕ್​ಗೆ ಹೊಸ ವಿನ್ಯಾಸ ನೀಡಿದ್ದಾರೆ. ಇದೀಗ ಕೇವಲ 15-20 ರೂಪಾಯಿಯಲ್ಲಿ 50 ರಿಂದ 55 ಕಿಲೋ ಮೀಟರ್​ ದೂರವನ್ನು ಇದರ ಮೇಲೆ ಕ್ರಮಿಸಬಹುದಾಗಿದೆ. ಈ ವಿಶೇಷ ಬೈಕ್ ನೋಡಲು ಅನೇಕ ಹಳ್ಳಿಯ ಜನ್ರು ತಂಡೋಪತಂಡವಾಗಿ ಆಗಮಿಸ್ತಿದ್ದಾರೆ.

ಕೇವಲ ಮೂರು ತಿಂಗಳಲ್ಲಿ ಈ ಬೈಕ್ ತಯಾರಿಸಲಾಗಿದ್ದು, ಇದಕ್ಕಾಗಿ ಸಾಕಷ್ಟು ಸಂಶೋಧನೆ ಸಹ ಮಾಡಲಾಗಿದೆ. ಫಾರ್ಮಸಿಯಲ್ಲಿ ಡಿಪ್ಲೋಮಾ ಮಾಡ್ತಿರುವ 26 ವರ್ಷದ ದಿನೇಶ್​ಗೆ ತಂದೆ ಸಹ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಬೈಕ್​ಗೆ ಜೋಡಿಸಿರುವ ಕೆಲವೊಂದು ಬಿಡಿ ಭಾಗಗಳನ್ನ ಆನ್​ಲೈನ್ ಮೂಲಕ ಆರ್ಡರ್ ಮಾಡಲಾಗಿದ್ದು, ಯೂಟ್ಯೂಬ್​​ನಲ್ಲಿ ಇದರ ಜೋಡಣೆ ಬಗ್ಗೆ ತಿಳಿದುಕೊಂಡು ವಿಶೇಷವಾದ ದ್ವಿಚಕ್ರ ವಾಹನ ತಯಾರಿಸಿದ್ದಾನೆ.

ಇದನ್ನೂ ಓದಿ:ಸಾವಿರ ಕೋಟಿ ಕ್ಲಬ್​​ ಸೇರಿದ ಕೆಜಿಎಫ್​​ 2: ಹಿಂದಿ ಅವತರಣಿಕೆಯಲ್ಲೇ ₹416 ಕೋಟಿ ಗಳಿಕೆ

ಹೊಸದಾಗಿ ವಿನ್ಯಾಸಗೊಂಡಿರುವ ಬೈಕ್​​ನಲ್ಲಿ ಚಾರ್ಜರ್​, ಲೈಟ್​​, ಬ್ರೇಕ್​ಗಳ ಜೊತೆಗೆ ಮೂರು ಗೇರ್​ಗಳಿವೆ. ಸ್ಪೀಡೋಮೀಟರ್​ ಸಹ ಇದ್ದು, ಸಾಮಾನ್ಯ ಬೈಕ್​ಗಳ ರೀತಿಯಲ್ಲೇ ಹೆಡ್​​ಲೈಟ್​​ ಜೋಡಿಸಲಾಗಿದೆ. ಗೇರ್​ ಬದಲಾಯಿಸಲು ಕಾಲುಗಳ ಬದಲಾಗಿ ಹೆಬ್ಬೆರಳು ಸಾಕು. ಒಂದು ಸಲ ಚಾರ್ಜ್ ಮಾಡಿದರೆ ಸುಮಾರು 50 ಕಿಲೋ ಮೀಟರ್ ಪ್ರಯಾಣ ಮಾಡಬಹುದು. ಬರುವ ದಿನಗಳಲ್ಲಿ ಮತ್ತಷ್ಟು ಹೊಸ ಆವಿಷ್ಕಾರ ಮಾಡುವ ಆಶಯ ಇದೆ ಎಂದು ದಿನೇಶ್ ಹೇಳಿಕೊಂಡಿದ್ದಾರೆ.

ABOUT THE AUTHOR

...view details