ದಿಂಡಿಗಲ್(ತಮಿಳುನಾಡು): ಧಾರಾಕಾರ ಮಳೆ ಹಿನ್ನೆಲೆಯಲ್ಲಿ ದಿಂಡಿಗಲ್ನ ಪುಲ್ಲವೇಲಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ. ಜಲಪಾತದ ಸೌಂದರ್ಯ ಕಣ್ತುಂಬಿಕೊಳ್ಳಲು ಸ್ಥಳೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಅಪಾಯ ಲೆಕ್ಕಿಸದೆ ಫೋಟೋ, ವಿಡಿಯೋಗೆ ಪೋಸ್ ಕೊಡಲು ಮುಂದಾದ ಯುವಕನೋರ್ವ ಆಯತಪ್ಪಿ ಪ್ರಪಾತಕ್ಕೆ ಬಿದ್ದು ನೀರು ಪಾಲಾಗಿದ್ದಾನೆ.
ಕ್ಯಾಮರಾಗೆ ಪೋಸ್ ಕೊಡುವಾಗ ಆಯತಪ್ಪಿ ಜಲಪಾತಕ್ಕೆ ಬಿದ್ದ ಯುವಕ- ವೈರಲ್ ವಿಡಿಯೋ - selfie tragedy
ತಮಿಳುನಾಡಿನ ಪುಲ್ಲವೇಲಿ ಜಲಪಾತ ಬಳಿ ವಿಡಿಯೋಗೆ ಪೋಸ್ ನೀಡಲು ಹೋಗಿ ಯುವಕನೋರ್ವ ನೂರು ಅಡಿ ಆಳಕ್ಕೆ ಬಿದ್ದಿದ್ದಾನೆ.
ಪರಮಕುಡಿಯ ಅಜಯ್ ಪಾಂಡಿಯನ್ ನಿನ್ನೆ ತನ್ನ ಸ್ನೇಹಿತನೊಂದಿಗೆ ಪುಲ್ಲವೇಲಿ ಜಲಪಾತ ನೋಡಲು ಬಂದಿದ್ದ. ಜಲಧಾರೆಯ ರುದ್ರ ರಮಣೀಯ ಸೌಂದರ್ಯ ನೋಡುತ್ತಾ ಮೈಮರೆತ ಆತ ಜಲಪಾತ ತುದಿಯಲ್ಲಿ ನಿಂತು ತನ್ನ ಸ್ನೇಹಿತನಿಗೆ ವಿಡಿಯೋ ತೆಗೆಯಲು ಹೇಳಿ ಪೋಸ್ ಕೊಟ್ಟಿದ್ದಾನೆ. ಹೀಗೆ ಪೋಸ್ ನೀಡುತ್ತಿದ್ದಂತೆ ಕಾಲು ಜಾರಿದ್ದು, ನೂರು ಅಡಿ ಆಳಕ್ಕೆ ಬಿದ್ದಿದ್ದಾನೆ. ಈ ದೃಶ್ಯ ಸ್ನೇಹಿತನ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿದು ಸ್ಥಳದಲ್ಲಿದ್ದ ಪ್ರವಾಸಿಗರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯುವಕನ ಪತ್ತೆಗೆ ಶೋಧ ಕಾರ್ಯ ಮುಂದುವರಿದಿದೆ.
ಇದನ್ನೂ ಓದಿ:ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ಬಚಾವ್ ಮಾಡಿದ ಸಾಹಸಿಗರು..ಕಲಾಂಬ್ ಬೀಚ್ನಲ್ಲಿ ಯುವಕ ಸಾವು