ನಳಂದ(ಬಿಹಾರ್):ಹಳಿ ತಪ್ಪಿದ ಗೂಡ್ಸ್ ರೈಲು ಬೋಗಿಗಳ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ಯುವಕನಿಗೆ ಹೈಟೆನ್ಷನ್ ವೈರ್ ತಗುಲಿ ಸಾವನ್ನಪ್ಪಿರುವ ಘಟನೆ ನಳಂದಾದಲ್ಲಿ ನಡೆದಿದೆ. ಮತ್ತೋರ್ವ ಯುವಕ ತೀವ್ರವಾಗಿ ಗಾಯಗೊಂಡಿದ್ದಾನೆ.
ನೆಲಕ್ಕುರುಳಿ ಬಿದ್ದ ಬೋಗಿಗಳ ಮೇಲೆ ನಿಂತು ಸೆಲ್ಫಿ; ಯುವಕರಿಬ್ಬರಿಗೆ ತಾಗಿದ ಹೈಟೆನ್ಷನ್ ವೈರ್! - ನಳಂದದಲ್ಲಿ ನೆಲಕ್ಕುರುಳಿ ಬಿದ್ದ ಬೋಗಿಗಳ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ಯುವಕರು
ಬಿಹಾರದ ನಳಂದಾದಲ್ಲಿ ಅಪಘಾತಕ್ಕೀಡಾಗಿ ನೆಲಕ್ಕುರುಳಿ ಬಿದ್ದ ಬೋಗಿಗಳ ಮೇಲೆ ನಿಂತು ಸೆಲ್ಫಿ ತೆಗೆಯುತ್ತಿದ್ದ ಯುವಕನೊಬ್ಬ ಪ್ರಾಣ ಕಳೆದುಕೊಂಡಿದ್ದಾರೆ.
ಬುಧವಾರ ಜಾರ್ಖಂಡ್‌ನಿಂದ ಕಲ್ಲಿದ್ದಲು ಸಮೇತ ಪಾಟ್ನಾಗೆ ಹೋಗುತ್ತಿದ್ದ ಗೂಡ್ಸ್ ರೈಲಿನ 8 ಬೋಗಿಗಳು ನಳಂದಾದ ಫತುಹಾ ರೈಲ್ವೆ ವಿಭಾಗದ ಏಕಾಂಗರಸರೈ ರೈಲು ನಿಲ್ದಾಣದ ಬಳಿ ಪಲ್ಟಿಯಾಗಿದೆ. ಘಟನೆಯ ನಂತರ ಸಾವಿರಾರು ಜನರು ಸ್ಥಳದಲ್ಲಿ ಜಮಾಯಿಸಿದ್ದರು. ಕೆಲವರು ರೈಲಿನ ಬಳಿ ನಿಂತು ಫೋಟೋ ತೆಗೆಯುತ್ತಿದ್ದರೆ, ಇನ್ನೂ ಕೆಲವರು ಬೋಗಿ ಮೇಲೆ ಹತ್ತಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಹೀಗೆ ಸೆಲ್ಫಿ ತೆಗೆಯುವ ಭರದಲ್ಲಿ ಇಬ್ಬರು ಯುವಕರ ಕೈಗಳಿಗೆ ಹೈಟೆನ್ಷನ್ ವೈರ್ ತಾಗಿದೆ. ಈ ವೇಳೆ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಇನ್ನೊಬ್ಬ ಯುವಕನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಆತನ ಪರಿಸ್ಥಿತಿ ಗಂಭೀರವಾಗಿದೆ.