ಕರ್ನಾಟಕ

karnataka

ETV Bharat / bharat

ಬೈಕ್​​ನಲ್ಲಿ ಅಪಾಯಕಾರಿ ಸ್ಟಂಟ್​: 15 ದಿನ ಜೀವನ್ಮರಣದ ಹೋರಾಟ, ಬದುಕಲಿಲ್ಲ ಯುವಕ - ಅಪಘಾತದಲ್ಲಿ ಯುವಕ ಸಾವು

ಗೌರಿ ಸಾಯಿಕೃಷ್ಣ ಎಂಬ ಯುವಕ ಬೈಕ್​ನಲ್ಲಿ ಸ್ಟಂಟ್​ ಮಾಡಲು ಹೋಗಿ ಆಯತಪ್ಪಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.

young man died while doing  Stunt with a bike
ಬೈಕ್​​ನಲ್ಲಿ ಸ್ಟಂಟ್​

By

Published : Nov 22, 2022, 1:28 PM IST

Updated : Nov 22, 2022, 2:21 PM IST

ಅಮರಾವತಿ:ಸಿನಿಮಾದಲ್ಲಿ ತೋರಿಸುವಂತೆ ಬೈಕ್​ನಲ್ಲಿ ಸ್ಟಂಟ್​ ಮಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ಆಂಧ್ರ ಪ್ರದೇಶದ ಉಯ್ಯೂರು ಪಟ್ಟಣದಲ್ಲಿ ನಡೆದಿದೆ.

ಗೌರಿ ಸಾಯಿಕೃಷ್ಣ (18) ಎಂಬಾತ ವಿಜಯವಾಡ- ಮಚಲಿಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್​ ರಸ್ತೆಯಲ್ಲಿ ಸ್ಟಂಟ್​ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್​ನಿಂದ ರಸ್ತೆಗೆ ಬಿದ್ದಿದ್ದಾನೆ. ಪರಿಣಾಮ ಆತನ ಮೆದುಳಿಗೆ ತೀವ್ರವಾಗಿ ಹಾನಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. 15 ದಿನ ಸಾವು-ಬದುಕಿನೊಂದಿಗೆ ಹೋರಾಡಿದ ಆತ ಸೋಮವಾರ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ.

ಬೈಕ್​​ನಲ್ಲಿ ಅಪಾಯಕಾರಿ ಸ್ಟಂಟ್

ಎಂಟನೇ ತರಗತಿವರೆಗೆ ಓದಿದ ಬಳಿಕ ಯುವಕ ಸ್ಥಳೀಯ ಬೈಕ್ ಮೆಕ್ಯಾನಿಕ್ ಬಳಿ ಉದ್ಯೋಗಕ್ಕೆ ಸೇರಿಕೊಂಡಿದ್ದ. ಆಗಾಗ್ಗೆ ತನ್ನ ಸ್ನೇಹಿತರೊಂದಿಗೆ ಇಂತಹ ದುಸ್ಸಾಹಸಗಳನ್ನು ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪೊಲೀಸರು ಆತನಿಗೆ ಎಚ್ಚರಿಕೆಯನ್ನೂ ನೀಡಿದ್ದರು.

ಇದನ್ನೂ ಓದಿ:ಪ್ರಾಣಕ್ಕೆ ಕುತ್ತು ತಂದ ಸ್ಟಂಟ್​​.. ಸಮ್ಮರ್​ಸಾಲ್ಟ್​ ಮಾಡಿ ಜೀವ ಕಳೆದುಕೊಂಡ ಕಬಡ್ಡಿ ಪಟು

ಬೈಕ್​ನಲ್ಲಿ ಈ ರೀತಿ ಸ್ಟಂಟ್​ ಮಾಡಬೇಡ ಎಂದು ಹಲವು ಬಾರಿ ಹೇಳಿದ್ದೆ. ಕೊನೆಗೂ ಆ ಸ್ಟಂಟ್​ ನನ್ನ ಮಗನ ಪ್ರಾಣವನ್ನು ತೆಗೆದುಕೊಂಡಿತು. ಇಂತಹ ಸಾಹಸವನ್ನು ಯಾರೂ ಮಾಡಬೇಡಿ ಎಂದು ಮೃತ ಯುವಕನ ತಂದೆ ನಟರಾಜಶೇಖರ್ ಮನವಿ ಮಾಡಿದ್ದಾರೆ.

Last Updated : Nov 22, 2022, 2:21 PM IST

ABOUT THE AUTHOR

...view details