ನಿರ್ಮಲ :ವೇಗವಾಗಿ ಬಂದ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರನೊಬ್ಬ ಗಾಳಿಯಲ್ಲಿ ಎಗರಿ ಮರಕ್ಕೆ ನೇತು ಬಿದ್ದು ಪ್ರಾಣ ಬಿಟ್ಟಿರುವ ಘಟನೆ ದೋಸ್ತುನಗರ್ ಸಮೀಪ ನಡೆದಿದೆ. ಸುದ್ದಿ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬುಧವಾರ ನಿರ್ಮಲ ಜಿಲ್ಲೆಯಿಂದ ಮಂಚಿರ್ಯಾಲ ಕಡೆ ಹೋಗುತ್ತಿದ್ದ ಕಾರು ಉಟ್ನೂರಿಂದ ಕಡೆಮ್ ಕಡೆ ಬರುತ್ತಿದ್ದ ಬೈಕ್ ಮಧ್ಯೆ ಅಪಘಾತ ಸಂಭವಿಸಿದೆ. ಅತಿವೇಗದಿಂದ ಕಾರು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಳಿಯಲ್ಲಿ ಎಗರಿ ಮರಕ್ಕೆ ಜೋತು ಬಿದ್ದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಬೈಕ್ ಸವಾರ ಸೋಯಂ ಮನ್ಕು (28) ಮರದಲ್ಲಿ ಜೋತು ಬಿದ್ದ ಸ್ಥಿತಿಯಲ್ಲೇ ಪ್ರಾಣ ಬಿಟ್ಟಿದ್ದಾನೆ.
ಭೀಕರ ಅಪಘಾತ: ಮೇಲಕ್ಕೆ ಎಗರಿ ಮರಕ್ಕೆ ನೇತು ಬಿದ್ದು ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ! - ನಿರ್ಮಲ ಜಿಲ್ಲೆ ಅಪರಾಧ ಸುದ್ದಿ
ಇದೊಂದು ಭಯಂಕರವಾದ ಅಪಘಾತ. ಈ ಅಪಘಾತದಲ್ಲಿ ಯುವಕನ ಪ್ರಾಣ ಗಾಳಿಯಲ್ಲೇ ಹಾರಿ ಹೋಗಿದೆ. ಈ ಘಟನೆ ತೆಲಂಗಾಣದ ನಿರ್ಮಲ ಜಿಲ್ಲೆಯಲ್ಲಿ ನಡೆದಿದೆ.
![ಭೀಕರ ಅಪಘಾತ: ಮೇಲಕ್ಕೆ ಎಗರಿ ಮರಕ್ಕೆ ನೇತು ಬಿದ್ದು ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ! Young man died, Young man died in car and bike accident, Young man died in car and bike accident at Nirmal District, Nirmal crime news, ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ, ಕಾರು ಮತ್ತು ಬೈಕ್ ರಸ್ತೆ ಅಪಘಾತದಲ್ಲಿ ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ, ನಿರ್ಮಲ ಜಿಲ್ಲೆಯ ರಸ್ತೆ ಅಪಘಾತದಲ್ಲಿ ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ, ನಿರ್ಮಲ ಜಿಲ್ಲೆ ಅಪರಾಧ ಸುದ್ದಿ,](https://etvbharatimages.akamaized.net/etvbharat/prod-images/768-512-12080530-895-12080530-1623303814853.jpg)
ಮೇಲಕ್ಕೆ ಎಗರಿ ಮರಕ್ಕೆ ನೇತು ಬಿದ್ದು ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ
ಭೀಕರ ಅಪಘಾತ: ಮೇಲಕ್ಕೆ ಎಗರಿ ಮರಕ್ಕೆ ನೇತು ಬಿದ್ದು ಗಾಳಿಯಲ್ಲೇ ಪ್ರಾಣ ಬಿಟ್ಟ ಯುವಕ!
ಅಪಘಾತದ ಬಳಿಕ ಕಾರು ರಸ್ತೆ ಪಕ್ಕದ ಗಿಡ-ಮರಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಎರಡು ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಅಪಘಾತದ ಬಳಿಕ ಕಾರು ಚಾಲಕ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಯುವಕನ ಮೃತದೇಹವನ್ನು ವಶಕ್ಕೆ ಪಡೆದು ಪೊಲೀಸರು ಖಾನಾಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಘಟನೆ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Last Updated : Jun 10, 2021, 12:47 PM IST