ಆಂಧ್ರಪ್ರದೇಶ: ನೋಡ ನೋಡುತ್ತಿದ್ದಂತೆ ಯುವಕನೊಬ್ಬ ವೇಗವಾಗಿ ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆ ಪೂರ್ವ ಗೋದಾವರಿ ಜಿಲ್ಲೆಯ ತುನಿ ರೈಲು ನಿಲ್ದಾಣದಲ್ಲಿ ನಡೆದಿದೆ.
ಪ್ಲಾಟ್‌ಫಾರ್ಮ್‌ನಲ್ಲಿ ಕಾದು ಕುಳಿತಿದ್ದ ಯುವಕನೋರ್ವ ನಾಂದೇಡ್ ಎಕ್ಸ್‌ಪ್ರೆಸ್ ರೈಲು ಬರುತ್ತಿದ್ದಂತೆಯೇ ವೇಗವಾಗಿ ಹೋಗಿ ರೈಲು ಕೆಳಗೆ ಬಿದ್ದಿದ್ದಾನೆ. ಈ ಅಪರಿಚಿತ ಯುವಕ 25 ವರ್ಷದವನು ಎಂದು ಅಂದಾಜಿಸಲಾಗಿದ್ದು, ಘಟನೆ ದೃಶ್ಯ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ 1ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.