ಕೋಟಾ/ರಾಜಸ್ಥಾನ:ಪ್ರೇಮಿಯೊಬ್ಬ ತನ್ನ ಪ್ರೇಯಸಿ ಹೆಸರನ್ನು ಕೈಮೇಲೆ ಬರೆದುಕೊಂಡು ನಂತರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಸ್ಥಾನದ ಕೋಟಾದ ರೈಲ್ವೆ ಕಾಲೋನಿ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.
ಪ್ರೇಯಸಿ ಹೆಸರು ಕೈಮೇಲೆ ಬರೆದುಕೊಂಡು ಪ್ರೇಮಿಗಳ ದಿನದಂದೇ ಪ್ರಿಯಕರ ಆತ್ಮಹತ್ಯೆ! - boy suicide in lovers days
ರಾಜಸ್ಥಾನದ ಕೋಟಾ ವ್ಯಾಪ್ತಿಯಲ್ಲಿ ಲವರ್ ಹೆಸರನ್ನು ಕೈಯಲ್ಲಿ ಬರೆದುಕೊಂಡು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನೆ ಬಗ್ಗೆ ಪೊಲೀಸರ ಮಾಹಿತಿ
ಇಂದು ಪ್ರೇಮಿಗಳ ದಿನವಾದ ಹಿನ್ನೆಲೆ ಕೈಯಲ್ಲಿ ತಾನು ಪ್ರೀತಿಸುತ್ತಿದ್ದ ಹುಡುಗಿಯ ಹೆಸರು ಬರೆಸಿಕೊಂಡು ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ಪ್ರಕರಣದ ಕುರಿತು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಟೂಲ್ಕಿಟ್ ಪ್ರಕರಣ: ಬೆಂಗಳೂರಿನ ಯುವತಿಯನ್ನು ಬಂಧಿಸಿದ ದೆಹಲಿ ಪೊಲೀಸರು