ಹೈದರಾಬಾದ್:ಸರಿ ಸುಮಾರು ರಾತ್ರಿ 11 ಗಂಟೆಗೆ ಕೆಲ ದುಷ್ಕರ್ಮಿಗಳು ಯುವಕನೊಬ್ಬನನ್ನು ಬೇಟೆಗಾರರಂತೆ ಬೆನ್ನತ್ತಿ ಬೇಟೆಗೆ ಬಳಸುತ್ತಿದ್ದ ಕೊಯ್ತಾದಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಜೇಂದ್ರನಗರದಲ್ಲಿ ನಡೆದಿದೆ.
ಇಲ್ಲಿನ ಪಿಲ್ಲರ್ ನಂ.248 ಬಳಿಯ ಹೆಚ್ಎಫ್ ಫಂಕ್ಷನ್ ಹಾಲ್ ಹತ್ತಿರ ಈ ಘಟನೆ ಜರುಗಿದೆ. ಎಲ್ಲರೂ ನೋಡುತ್ತಿದ್ದಂತೆ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಕರ್ಮಿಗಳು ಘಟನೆ ಬಳಿಕ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮೃತ ಯುವಕ ಎಂಐಎಂ ಪಕ್ಷದ ಕಾರ್ಯಕರ್ತ ಮೊಹಮ್ಮದ್ ಖಲೀಲ್ ಎಂದು ಗುರುತಿಸಲಾಗಿದೆ.