ಕರ್ನಾಟಕ

karnataka

ETV Bharat / bharat

ಹೋಟೆಲ್‌ನಲ್ಲಿ ಅವಿವಾಹಿತ ಜೋಡಿಯ ಶವ ಪತ್ತೆ.. ಪೊಲೀಸರಿಂದ ತನಿಖೆ - ಈಟಿವಿ ಭಾರತ್ ಕನ್ನಡ ಸುದ್ದಿ

ದೆಹಲಿಯ ಬವನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯುವಕ ಹಾಗೂ ಯುವತಿ ಅನುಮಾನಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ.

ಬವನಾ ಪೊಲೀಸ್ ಠಾಣೆ
ಬವನಾ ಪೊಲೀಸ್ ಠಾಣೆ

By

Published : Jan 11, 2023, 10:53 PM IST

ನವದೆಹಲಿ: ದಿಲ್ಲಿಯ ಬವಾನಾ ಪೊಲೀಸ್ ಠಾಣಾ ವ್ಯಾಪ್ತಿಯ ಹೋಟೆಲ್​ನಲ್ಲಿ ಯುವಕ ಮತ್ತು ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ. ಮೃತ ಯುವತಿಯ ಕತ್ತಿನ ಮೇಲೆ ಗಾಯದ ಗುರುತುಗಳಿದ್ದು, ಯುವತಿಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೀಗ ದೆಹಲಿ ಪೊಲೀಸರು ಪ್ರಕರಣದ ತನಿಖೆಯಲ್ಲಿ ನಿರತರಾಗಿದ್ದಾರೆ.

ಮೃತ ಯುವಕ ಯುವತಿಯರ ವಯಸ್ಸು (21 ವರ್ಷ). ಮೃತರಿಬ್ಬರೂ ಮಂಗಳವಾರ ಬೆಳಗ್ಗೆ 10 ಗಂಟೆಗೆ ಒಟ್ಟಿಗೆ ಹೋಟೆಲ್‌ಗೆ ಬಂದಿದ್ದರು. ಕೊಠಡಿಯ ಬುಕ್ಕಿಂಗ್ ಸಮಯ ಮುಗಿದು ಬಹಳ ಹೊತ್ತಾದರೂ ಇಬ್ಬರೂ ಹೊರಗೆ ಬರದಿದ್ದಾಗ ಹೋಟೆಲ್ ಸಿಬ್ಬಂದಿ ಕೊಠಡಿ ತಟ್ಟಿದ್ದಾರೆ. ಆದರೆ ಒಳಗಿನಿಂದ ಯಾರೂ ಕೊಠಡಿಯನ್ನು ತೆರೆದಿರಲಿಲ್ಲ. ಇದಾದ ಬಳಿಕ ಹೋಟೆಲ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ ಅನುಮಾನಾಸ್ಪದ ಸ್ಥಿತಿಯಲ್ಲಿ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿತ್ತು.

ಈ ಬಗ್ಗೆ ಪೊಲೀಸರಿಗೆ ಹೋಟೆಲ್​ ಸಿಬ್ಬಂದಿ ಮಾಹಿತಿ ನೀಡಿದ್ದರು. ಹೋಟೆಲ್​ ಸಿಬ್ಬಂದಿ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಪೊಲೀಸರು ಎರಡೂ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಾಲಕಿಯ ಕುತ್ತಿಗೆಯ ಮೇಲೂ ಕೆಲವು ಗಾಯದ ಗುರುತುಗಳು ಪತ್ತೆಯಾಗಿದ್ದು, ಕೊಠಡಿಯೊಳಗೆ ಸಲ್ಫಾಸ್ ಪೌಡರ್ ಮತ್ತು ಮದ್ಯದ ಬಾಟಲಿಗಳು ಪತ್ತೆಯಾಗಿವೆ.

ಮೃತರ ಗುರುತಿನ ಚೀಟಿಯ ಮೂಲಕ ಮೃತದೇಹಗಳನ್ನು ಗುರುತಿಸಿದ ಪೊಲೀಸರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಮೃತ ಯುವಕನನ್ನು ವಿಮಲ್ ಎಂದು ಗುರುತಿಸಲಾಗಿದ್ದು, ಇವರು ಬವಾನಾ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ, ಬವಾನಾ ಪೊಲೀಸ್ ಠಾಣೆಯು ಸಂಪೂರ್ಣ ಪ್ರಕರಣದ ತನಿಖೆ ನಡೆಸುತ್ತಿದೆ. ಮತ್ತು ಉಳಿದ ಸಾಕ್ಷ್ಯಗಳನ್ನು ಸಂಗ್ರಹಿಸಲು ಅಪರಾಧ ತಂಡ ಮತ್ತು ಪೊಲೀಸರ ಫೋರೆನ್ಸಿಕ್ ಅಂದರೆ ಎಫ್‌ಎಸ್‌ಎಲ್ ತಂಡವೂ ಸ್ಥಳಕ್ಕೆ ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಂತರ ತನಿಖೆ ನಡೆಯುತ್ತಿದೆ.

ಪತ್ನಿ ಮತ್ತು ಮಗಳನ್ನು ಕತ್ತರಿಸಿದ್ದ ಕೊಲೆ ಮಾಡಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ:ಗುಜರಾತ್​ನಲ್ಲಿ ಪತ್ನಿ ಮತ್ತು ಮಗಳನ್ನು 21 ಭಾಗಗಳಾಗಿ ಕತ್ತರಿಸಿ ಕೊಲೆ ಮಾಡಿ ಬಾವಿಗೆ ಎಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್​ ರಾಜ್ಯ ಮೀಸಲು ಪೊಲೀಸ್​ ಪಡೆಯ ಮಾಜಿ ಸಿಬ್ಬಂದಿಯೊಬ್ಬರಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ. ಅರವಿಂದ್ ಮಾರ್ತಾಭಾಯಿ ದಾಮೋರ್ ಎಂಬಾತನೇ ಶಿಕ್ಷೆಗೆ ಒಳಗಾದ ಆರೋಪಿ ಎಂಬುದು ತಿಳಿದು ಬಂದಿದೆ.

ಆರೋಪಿ ಅರವಿಂದ್​ ಮಾರ್ತಾಭಾಯಿ ಭಿಲೋದಾ ತಾಲೂಕಿನ ವಾಂಕಾನೇರ್ ನಿವಾಸಿ. ಈತ ಗಾಂಧಿನಗರ ಮತ್ತು ಡಾಮೋರ್​ನಲ್ಲಿ ರಾಜ್ಯ ಮೀಸಲು ಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದನು. ಈ ವೇಳೆ, ಆರೋಪಿಗೆ ಹಸುಮತಿ ಎಂಬ ಮಹಿಳೆಯ ಪರಿಚಯವಾಗಿದೆ. ಬಳಿಕ ಪರಿಚಯ ಪ್ರೀತಿಗೆ ತಿರುಗಿ ಅವರನ್ನೇ ಮದುವೆಯಾಗಿದ್ದ. ಬಳಿಕ ಇಬ್ಬರೂ ಗಾಂಧಿನಗರದ ಸರ್ಕಾರಿ ಕ್ವಾಟ್ರಸ್​​ನಲ್ಲಿ ವಾಸಿಸುತ್ತಿದ್ದರು. ಆದರೆ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಈ ಜಗಳ ವಿಕೋಪಕ್ಕೆ ಹೋಗಿ ಆರೋಪಿ ಅರವಿಂದ್​, ಹಸುಮತಿ ಮತ್ತು ಆಕೆಯ 5 ವರ್ಷದ ಮಗಳನ್ನು ಕೊಲೆ ಮಾಡಿದ್ದಾನೆ.

ಓದಿ:ಮೂವರು ಒಡಹುಟ್ಟಿದವರ ಅನುಮಾನಾಸ್ಪದ ಸಾವು.. ಸಾಲದ ಸಮಸ್ಯೆಯಿಂದ ಆತ್ಮಹತ್ಯೆ ಶಂಕೆ

ABOUT THE AUTHOR

...view details