ಕರ್ನಾಟಕ

karnataka

ETV Bharat / bharat

ಸರ್ಕಾರಿ ಕೆಲಸ ಸಿಗಲಿಲ್ಲ; ಪುಷ್ಪ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಮಾದರಿಯಾದ ಯುವ ರೈತ! - etv bharat karnataka

ತೆಲಂಗಾಣದ ಯುವ ರೈತರೊಬ್ಬರು ಪುಷ್ಪ ಕೃಷಿ ಮಾಡಿ ಲಕ್ಷಾಂತರ ರೂಪಾಯಿ ಆದಾಯಗಳಿಸಿ ಇತರರಿಗೆ ಮಾದರಿಯಾಗುವ ಮೂಲಕ ಮಿಲಿಯನೇರ್ ರೈತ ಪ್ರಶಸ್ತಿ ಪಡೆದುಕೊಂಡಿದ್ದಾರೆ.

Etv Bharatyoung-farmer-earning-millions-of-rupees-from-flower-farming-in-suryapet
ಸರ್ಕಾರಿ ಕೆಲಸ ಸಿಗಲಿಲ್ಲ.. ಪುಷ್ಪ ಕೃಷಿಯಿಂದ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ ಮಾದರಿಯಾದ ಯುವ ರೈತ!

By ETV Bharat Karnataka Team

Published : Dec 19, 2023, 9:05 PM IST

ಸೂರ್ಯಪೇಟ್(ತೆಲಂಗಾಣ): ಪ್ರಸ್ತುತ ದಿನಗಳಲ್ಲಿ ಯವಕರು ಕೃಷಿ ಕೆಲಸ ಮಾಡುವುದಕ್ಕೆ ಮೂಗು ಮುರಿಯುತ್ತಾರೆ. ಆದರೆ ಇಲ್ಲೊಬ್ಬ ಯುವ ರೈತ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಪುಷ್ಪ ಕೃಷಿ ಮಾಡಿ, ಲಕ್ಷಾಂತರ ರೂಪಾಯಿ ಆದಾಯಗಳಿಸಿದ್ದಾರೆ. ಈ ಮೂಲಕ ಅವರು ದೆಹಲಿಯಲ್ಲಿ ನಡೆದ ಐಸಿಎಆರ್ ಕೃಷಿ ಜಾಗರಣ ಮೇಳದಲ್ಲಿ ಮಿಲಿಯನೇರ್ ರೈತ ಪ್ರಶಸ್ತಿಯನ್ನು ಪಡೆದ್ದಾರೆ. ಹೌದು, ಸೂರ್ಯಪೇಟ್ ಜಿಲ್ಲೆಯ ತಿರುಮಲಗಿರಿಯ ತುಮ್ಮಲಕುಂಟಾ ತಾಂಡಾದ ಭೂಕ್ಯ ಬಿಚ್ಚು ಎಂಬ ಯುವ ರೈತ ಕೃಷಿಯಲ್ಲಿ ಉತ್ತಮ ಆದಾಯ ಗಳಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.

2012ರಲ್ಲಿ ಬಿ.ಟೆಕ್ ಬಯೋಟೆಕ್ನಾಲಜಿ ಮುಗಿಸಿದ್ದ ಇವರು, 2018ರ ವರೆಗೆ ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದರು. ಆದರೆ, ಅವರ ಪ್ರಯತ್ನ ಫಲಿಸಲಿಲ್ಲ. ಇದರಿಂದ ಹತಾಶರಾಗದ ಭೂಕ್ಯ ಬಿಚ್ಚು ಅವರು, ಕೃಷಿ ಕ್ಷೇತ್ರದತ್ತ ಹೆಜ್ಜೆ ಹಾಕಿದರು. ವಿವಿಧ ಪ್ರದೇಶಗಳಲ್ಲಿ ರೈತರು ಬೆಳೆದ ಬೆಳೆಗಳು ಮತ್ತು ಇಳುವರಿಯ ಬಗ್ಗೆ ಅಧ್ಯಯನ ನಡೆಸಿದರು. ವಿನೂತನವಾಗಿ ಕೃಷಿ ಮಾಡಲು ಹಲವು ರೈತರಿಂದ ಮಾಹಿತಿ ಸಂಗ್ರಹಿಸಿದರು. ತೋಟಗಾರಿಕಾ ಇಲಾಖೆ ನೀಡುವ ಸಹಾಯಧನದ ಬಗ್ಗೆ ತಿಳಿದುಕೊಂಡರು. ನಂತರ ತಮ್ಮ 13 ಎಕರೆ ಜಮೀನಿನಲ್ಲಿ ಕೃಷಿಯನ್ನು ಪ್ರಾರಂಭಿಸಿದರು.

ಯುವ ರೈತ ಭೂಕ್ಯ ಬಿಚ್ಚು ಮಾತನಾಡಿ, "ನಾನು ತೋಟಗಾರಿಕೆ ಇಲಾಖೆಯಿಂದ ಶೇ.95ರಷ್ಟು ಅಂದರೆ 33 ಲಕ್ಷ ರೂ. ಸಹಾಯಧನ ಪಡೆದುಕೊಂಡು ಒಂದು ಎಕರೆ ಜಮೀನಿನಲ್ಲಿ ಪಾಲಿಹೌಸ್​ ಸ್ಥಾಪಿಸಿದೆ. ವಿವಿಧ ಬಣ್ಣಗಳ ಕ್ಯಾಮೊಮೈಲ್ ಬೀಜಗಳನ್ನು ಮಹಾರಾಷ್ಟ್ರದ ನಾಸಿಕ್ ನಿಂದ ತರಿಸಿ, ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ 90 ರಿಂದ 120 ದಿನಗಳವರೆಗೆ ಬೆಳೆಸಿದೆ. ಕ್ಯಾಮೊಮೈಲ್ ಹೂವುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ 15 ಲಕ್ಷ ಆದಾಯ ಗಳಿಸಿದೆ. ಪ್ರಸ್ತುತ ವಾರ್ಷಿಕವಾಗಿ 2 ಬೆಳೆಗಳನ್ನು ಬೆಳೆಯುತ್ತಿದ್ದೇನೆ" ಎಂದರು.

ವಿನೂತನವಾಗಿ ಯೋಚಿಸಿದರೆ ಕೃಷಿಯಲ್ಲಿ ಉತ್ತಮ ಲಾಭ ಸಿಗುತ್ತದೆ:"ಕೃಷಿಯನ್ನು ಆರಂಭಿಸಿದ ಪ್ರಾರಂಭದಲ್ಲಿ ಕೊರೊನಾದಿಂದಾಗಿ ಸಾಕಷ್ಟು ತೊಂದರೆಗಳನ್ನು ಅನುಭವಿಸಿದೆ. ನಂತರ ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಪುಷ್ಪ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಿದ್ದೇನೆ. ಇತ್ತೀಚೆಗೆ ನನ್ನ ಶ್ರಮವನ್ನು ಪರಿಗಣಿಸಿ ನನಗೆ ದೆಹಲಿಯಲ್ಲಿ ನಡೆದ ಐಸಿಎಆರ್ ಕೃಷಿ ಜಾಗರಣ ಮೇಳದಲ್ಲಿ ಅತ್ಯುತ್ತಮ ಮಿಲಿಯನೇರ್ ರೈತ ಪ್ರಶಸ್ತಿ ನೀಡಿರುವುದಕ್ಕೆ ಸಂತಸವಾಗಿದೆ. ಉದ್ಯೋಗ ಸಿಕ್ಕಿಲ್ಲ ಎಂದು ಯುವಕರು ನಿರಾಶರಾಗಬಾರದು. ನಾವೇ ಉದ್ಯೋಗ ನೀಡುವ ಬಗ್ಗೆ ಯೋಚಿಸಬೇಕು. ವಿನೂತನವಾಗಿ ಯೋಚಿಸಿದರೆ ಕೃಷಿಯಲ್ಲಿ ಉತ್ತಮ ಲಾಭ ಸಿಗುತ್ತದೆ. ನಾನು ಕೃಷಿಯ ಮೂಲಕ ಇತರರಿಗೂ ಉದ್ಯೋಗ ನೀಡುತ್ತಿದ್ದೇನೆ" ಎಂದು ಹೇಳಿದರು.

ಇದನ್ನೂ ಓದಿ:ಕಡಿಮೆ ಜಮೀನಿನಲ್ಲಿ 21 ಬಗೆಯ ಮಾವು ಬೆಳೆದ ರೈತ: ಯಾರು ಈ ಮಾದರಿ ರೈತ?

ABOUT THE AUTHOR

...view details