ಕರ್ನಾಟಕ

karnataka

By

Published : May 6, 2021, 8:33 PM IST

Updated : May 6, 2021, 9:02 PM IST

ETV Bharat / bharat

ಸ್ಮಾರ್ಟ್ ಯುಗಕ್ಕೆ ಸ್ಮಾರ್ಟ್ ಕನ್ನಡಿ ಅನ್ವೇಷಿಸಿದ ಯುವ ಇಂಜಿನಿಯರ್

ಸಾಮಾನ್ಯವಾಗಿ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಸ್ಮಾರ್ಟ್ ಕನ್ನಡಿಯನ್ನು ಯುವ ಇಂಜಿನಿಯರ್ ಮುಖೇಶ್ ಸಿಂಗ್ ರೂಪಿಸಿದ್ದಾರೆ. ಶೀಘ್ರದಲ್ಲೇ ಜಗತ್ತಿಗೆ ಪರಿಚಯವಾಗಲಿದೆ.

young-engineer-designs-a-unique-mirror-for-smart-use
ಸ್ಮಾರ್ಟ್ ಯುಗಕ್ಕೆ ಸ್ಮಾರ್ಟ್ ಕನ್ನಡಿ ಅನ್ವೇಷಿಸಿದ ಯುವ ಇಂಜಿನಿಯರ್

ಭುವನೇಶ್ವರ( ಒಡಿಶಾ): ಸಾಮಾನ್ಯವಾಗಿ ಕನ್ನಡಿಗಳಲ್ಲಿ ಪ್ರತಿಬಿಂಬ ಮೂಡುತ್ತದೆ ಎಂಬ ಉದ್ದೇಶದಿಂದ ಹೆಚ್ಚು ಬಳಸಲಾಗುತ್ತದೆ. ವಾಹನಗಳಲ್ಲಿ ಹಿಂಬದಿಯ ವಾಹನಗಳ ಬಗ್ಗೆ ಜಾಗ್ರತೆ ವಹಿಸಲೂ ಕನ್ನಡಿಯ ಬಳಕೆ ಇದೆ. ಮಹಿಳೆಯರು ಮೇಕಪ್​ಗಾಗಿ ಹೆಚ್ಚಾಗಿ ಕನ್ನಡಿ ಬಳಸುತ್ತಾರೆ.

ಸ್ಮಾರ್ಟ್​ ಕನ್ನಡಿ

ಆದರೆ, ಇಲ್ಲೊಬ್ಬ ಯುವ ಇಂಜಿನಿಯರ್ ಸ್ಮಾರ್ಟ್​ ಕನ್ನಡಿಯನ್ನು ಅನ್ವೇಷಿಸಿದ್ದು, ಈ ಕನ್ನಡಿಯಲ್ಲಿ ವಿಡಿಯೋ, ಸುದ್ದಿಗಳನ್ನೂ ನೋಡಬಹುದಾಗಿದೆ. ಹೌದು ಬಹುಪಾಲು ಸ್ಮಾರ್ಟ್​ ಫೋನ್​ನಂತೆ ಕಾರ್ಯನಿರ್ವಹಿಸುತ್ತದೆ ಈ ಸ್ಮಾರ್ಟ್ ಕನ್ನಡಿ. ಸಾಮಾನ್ಯವಾಗಿ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಈ ಕನ್ನಡಿಯನ್ನು ರೂಪಿಸಿದ್ದಾರೆ ಯುವ ಇಂಜಿನಿಯರ್ ಮುಖೇಶ್ ಸಿಂಗ್.

ಇದನ್ನೂ ಓದಿ:ತಮಿಳುನಾಡು ಸಿಎಂ ಆಗಿ ನಾಳೆ ಸ್ಟಾಲಿನ್ ಪದಗ್ರಹಣ: ಸಚಿವ ಸಂಪುಟದಲ್ಲಿ ಗಾಂಧಿ, ನೆಹರು!

ರೊಬೋಜೆನೆಸಿಸ್ ಎಂಬ ಸ್ಟಾರ್ಟ್​ಅಪ್​ನಲ್ಲಿರುವ ಮುಖೇಶ್ ಸಿಂಗ್ ಈ ಕನ್ನಡಿಯನ್ನು ಅನ್ವೇಷಣೆ ಮಾಡಿದ್ದು, ಇವರಿಗೆ ರೊಬೊಜೆನೆಸಿಸ್ ಕಂಪನಿಯ ಸಹದ್ಯೋಗಿಗಳೂ ಕೂಡಾ ಸಾಥ್ ನೀಡಿದ್ದಾರೆ. ಈ ಕನ್ನಡಿಯನ್ನು ಐಷಾರಾಮಿ ಕೊಠಡಿ ಮಾತ್ರವಲ್ಲದೇ ಅಡುಗೆ ಮನೆ, ಸಲೂನ್, ಮಾಲ್​​ಗಳಲ್ಲಿಯೂ ಬಳಸಬಹುದಾಗಿದೆ.

ಈ ಆವಿಷ್ಕೃತ ಕನ್ನಡಿಯನ್ನು ಜಗತ್ತಿನ ಮುಂದೆ ತರಲು ಈ ಇಂಜಿಯರ್​ಗಳು ನಿರ್ಣಯಿಸಿದ್ದು, ಜನರ ಅಮೂಲ್ಯ ಸಲಹೆ ಉಳಿಸಬಹುದು ಎಂದು ಈ ಯುವ ಇಂಜಿನಿಯರ್​ಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Last Updated : May 6, 2021, 9:02 PM IST

ABOUT THE AUTHOR

...view details