ತೆಲಂಗಾಣ:ಯುವಕನೊಬ್ಬ ತನ್ನ ಮುದ್ದಿನ ನಾಯಿಮರಿಯೊಂದಿಗೆ ಸೈಕಲ್ ಮೂಲಕ ಹೈದರಾಬಾದಿನಿಂದ ಚೀನಾ ಗಡಿ ಪ್ರಯಾಣ ಆರಂಭಿಸಿದ್ದಾನೆ.
ವಾರಂಗಲ್ ನಗರದ ಕರಿಮಾಬಾದಿನ ಯುವ ಸೈಕ್ಲಿಸ್ಟ್ ರಂಜಿತ್ ದಗಾರ ಎಂಬುವವರು ಪ್ರವಾಸ ಕೈಗೊಂಡಿದ್ದು, ಈತ ಎಂ.ಫಾರ್ಮಸಿ ವ್ಯಾಸಂಗ ಮಾಡಿದ್ದಾರೆ. ಕಳೆದ ವರ್ಷ ಕೊರೊನಾದಿಂದ ರಂಜಿತ್ ಅವರ ತಂದೆ ನಿಧನರಾಗಿದ್ದು, ಇದೆಲ್ಲದರಿಂದ ಬೇಸತ್ತ ಯುವಕ, ತಮ್ಮ ಆರೋಗ್ಯವನ್ನು ಇನ್ನಷ್ಟು ಸುಧಾರಿಸಲು ಮತ್ತು ಸೈಕ್ಲಿಂಗ್ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.