ಕರ್ನಾಟಕ

karnataka

ETV Bharat / bharat

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಗ್ರ್ಯಾಂಡ್‌ ಮಾಸ್ಟರ್ ಪ್ರಜ್ಞಾನಂದ - ಭಾರತದ ಯುವ ಚೆಸ್ ಆಟಗಾರ ಆರ್ ಪ್ರಜ್ಞಾನಂದ

ಭಾರತದ ಯುವ ಚೆಸ್ ಆಟಗಾರ ಆರ್ ಪ್ರಜ್ಞಾನಂದ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

R Praggnanandhaa meets PM Narendra Modi
ಗ್ರ್ಯಾಂಡ್‌ ಮಾಸ್ಟರ್ ಪ್ರಜ್ಞಾನಂದ

By ETV Bharat Karnataka Team

Published : Sep 1, 2023, 6:57 AM IST

ನವದೆಹಲಿ : ವಿಶ್ವ ಚೆಸ್ ಚಾಂಪಿಯನ್ ಶಿಪ್​ನಲ್ಲಿ ರನ್ನರ್​ ಅಪ್​ ಆಗಿರುವ ಭಾರತದ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರು ಕುಟುಂಬ ಸದಸ್ಯರೊಂದಿಗೆ ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ಕುರಿತು ಎಕ್ಸ್​ ಆ್ಯಪ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಪಿಎಂ "ಇಂದು ಲೋಕ ಕಲ್ಯಾಣ್ ಮಾರ್ಗ್​ನಲ್ಲಿರುವ ನನ್ನ ನಿವಾಸಕ್ಕೆ ವಿಶೇಷ ಅತಿಥಿಗಳು ಆಗಮಿಸಿದ್ದರು. ಪ್ರಜ್ಞಾನಂದ ಮತ್ತು ಅವರ ಕುಟುಂಬದವರನ್ನು ಖುದ್ದಾಗಿ ಭೇಟಿ ಮಾಡಿರುವುದು ಖುಷಿ ತಂದಿದೆ" ಎಂದು ಹೇಳಿದ್ದಾರೆ.

"ಅವರ ಕುಟುಂಬದ ಜೊತೆ ಪ್ರಜ್ಞಾನಂದ ಅವರನ್ನು ಭೇಟಿಯಾಗಿದ್ದು ಸಂತೋಷವಾಯಿತು. ನಿಮ್ಮ ಉತ್ಸಾಹ ಮತ್ತು ಪರಿಶ್ರಮವನ್ನು ನಿರೂಪಿಸಿದ್ದೀರಿ. ಭಾರತದ ಯುವಕರು ಯಾವುದೇ ಕ್ಷೇತ್ರದಲ್ಲಾದರೂ ಹೇಗೆ ಜಯಿಸಬಹುದು ಎಂಬುದಕ್ಕೆ ನೀವು ಉದಾಹರಣೆಯಾಗಿದ್ದೀರಿ. ನಿಮ್ಮ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಪ್ರಧಾನಿ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದ ಪ್ರಜ್ಞಾನಂದ ಅವರು ಮೋದಿ ಅವರೊಂದಿಗೆ ತೆಗೆಸಿಕೊಂಡ ಕೆಲವು ಫೋಟೋಗಳನ್ನು 'ಎಕ್ಸ್' ನಲ್ಲಿ ಹಂಚಿಕೊಂಡಿದ್ದರು. "ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದು ಗೌರವದ ಸಂಗತಿ. ನನಗೆ ಮತ್ತು ನನ್ನ ಪೋಷಕರಿಗೆ ನೀವು ಪ್ರೋತ್ಸಾಹದ ಮಾತುಗಳನ್ನು ಹೇಳಿದ್ದು, ಧನ್ಯವಾದಗಳು ಸರ್​. ನಿಮ್ಮ ಜೊತೆಗಿನ ಈ ಸಂಭಾಷಣೆ ತುಂಬಾ ಚೆನ್ನಾಗಿತ್ತು" ಎಂದಿದ್ದಾರೆ.

ಆಗಸ್ಟ್ 30 ರಂದು ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಜ್ಞಾನಂದ ಅವರಿಗೆ ಸರ್ಕಾರ ಹಾಗೂ ಸಾರ್ವಜನಿಕರಿಂದ ಅದ್ಧೂರಿ ಸ್ವಾಗತ ನೀಡಲಾಯಿತು. ಈ ಹಿನ್ನೆಲೆಯಲ್ಲಿ ಪ್ರಜ್ಞಾನಂದ ಅವರು ಕುಟುಂಬ ಸಮೇತ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿದ್ದರು. ನಂತರ ಈ ಕುರಿತು 'ಎಕ್ಸ್' ಆ್ಯಪ್​ನಲ್ಲಿ ಪೋಸ್ಟ್ ಮಾಡಿದ್ದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, 'ಅಜರ್ ಬೈಜಾನ್​ನಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಚಾಂಪಿಯನ್​ಶಿಪ್ ಟೂರ್ನಿಯ ಫೈನಲ್‌ನಲ್ಲಿ ಉತ್ತಮ ಆಟವಾಡಿ ದ್ವಿತೀಯ ಸ್ಥಾನ ಪಡೆದ ಚೆಸ್ ಗ್ರ್ಯಾಂಡ್ ಮಾಸ್ಟರ್ ಪ್ರಜ್ಞಾನಂದ ಅವರಿಗೆ ಪ್ರೋತ್ಸಾಹ ಧನವಾಗಿ 30 ಲಕ್ಷ ರೂ. ಮತ್ತು ಸ್ಮರಣಾರ್ಥವಾಗಿ ಉಡುಗೊರೆ ನೀಡಿ ಅಭಿನಂದಿಸಲಾಯಿತು' ಎಂದು ತಿಳಿಸಿದ್ದರು.

ಭಾರತದ ಚೆಸ್​ ಆಟಗಾರ ಆರ್.ಪ್ರಜ್ಞಾನಂದ ಅವರು ವಿಶ್ವದ ನಂ.1 ಚೆಸ್ ಆಟಗಾರ ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಫೈನಲ್‌ನಲ್ಲಿ ಎದುರಿಸಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ ಮೊದಲ ಸುತ್ತಿನ ಟೈ ಬ್ರೇಕರ್‌ನಲ್ಲಿ ನಾರ್ವೆಯ ಕಾರ್ಲ್ಸನ್ ಜಯಗಳಿಸಿದ್ದರು. ಫೈನಲ್​ ಪಂದ್ಯ ಎರಡು ದಿನಕ್ಕೂ ಹೆಚ್ಚು ಕಾಲ ನಡೆದಿದ್ದು, ಎರಡೂ ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿದ್ದರಿಂದ ಟ್ರೈ ಬ್ರೇಕರ್​ ಪಂದ್ಯ ನಡೆಸಲಾಯಿತು. ಅಂತಿಮವಾಗಿ 0.5 - 1.5 ಅಂಕಗಳಿಂದ ಕಾರ್ಲಸನ್ ಚಾಂಪಿಯನ್‌ ಆದರು. ಆದರೆ, 18 ವರ್ಷದ ಹುಡುಗ ಪ್ರಜ್ಞಾನಂದ ವಿಶ್ವದ ಚೆಸ್​ಪಟುಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ :'ಸದಾ ಬೆಂಬಲಿಸುವ ನನ್ನ ಅಮ್ಮನೊಂದಿಗೆ..': ಭಾರತದ ಚೆಸ್‌ ಪ್ರತಿಭೆ ಪ್ರಜ್ಞಾನಂದ ಪೋಸ್ಟ್‌

ABOUT THE AUTHOR

...view details