ಭುವನೇಶ್ವರ್ (ಒಡಿಶಾ):ಕಲೆ ಅನ್ನೋದು ಯಾರೊಬ್ಬರ ಸ್ವತ್ತಲ್ಲ. ಶ್ರದ್ಧೆಯಿಂದ ಕೆಲಸ ಮಾಡಿದರೆ ಕಲಾ ಸರಸ್ವತಿಯನ್ನು ಒಲಿಸಿಕೊಳ್ಳಬಹುದು ಅಂತ ಈ ಕಲಾವಿದ ನಿರೂಪಿಸಿದ್ದಾನೆ. ಕೈಯಲ್ಲಿ ಕುಂಚ ಹಿಡಿದು ಕುಳಿತರೆ ಮಹಾನ್ ವ್ಯಕ್ತಿಗಳ ಚಿತ್ರ ಮೂಡಿಬರುತ್ತದೆ. ಕಾಗದದ ಮೇಲಷ್ಟೇ ಅಲ್ಲ, ಮರಗಳು, ಪೆನ್ನಿನ ಮೇಲೂ ಪ್ರಖ್ಯಾತ ವ್ಯಕ್ತಿಗಳ ಚಿತ್ರ ಮೂಡಿಸಿದ್ದಾರೆ. ಒಡಿಶಾದ ಈ ಯುವ ಕಲಾವಿದ ಸಾಹಿತ್ಯ ಲೋಕದ ದಿಗ್ಗಜ ಮನೋಜ್ ದಾಸ್, ಶಿಲ್ಪಿ ಮೊಹಾಪಾತ್ರ ಅನೇಕ ಸಾಧಕರ ಚಿತ್ರವನ್ನು ಚಿತ್ರಿಸಿ ಸೈ ಎನಿಸಿಕೊಂಡಿದ್ದಾರೆ.
ಮಯೂರ್ಭಂಜ್ ಜಿಲ್ಲೆಯ ಅಗಡಾ ಗ್ರಾಮದ ನಿವಾಸಿ ಸಮರೇಂದ್ರ ಬೆಹೆರಾ, ಇದೀಗ ಒಡಿಶಾದಲ್ಲಿ ಮನೆಮಾತಾಗಿದ್ದಾರೆ. ಪ್ರಸಿದ್ಧ ವ್ಯಕ್ತಿಗಳ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ಮರಗಳ ಮೇಲೆ ಮಹಾನ್ ವ್ಯಕ್ತಿಗಳ ಚಿತ್ರಗಳ ಕೆತ್ತಲು ಆರಂಭಿಸಿದ್ದರಂತೆ. ವಿಶೇಷವಾಗಿ ದೀಪದ ಕರಿಯ ಮೂಲಕವೂ ಚಿತ್ರ ಬಿಡಿಸುವ ಕಲೆ ಇವರಲ್ಲಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.