ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ 841 ಜನ ಸರ್ಕಾರಿ ವಕೀಲರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ವಜಾಗೊಳಿಸಿ ಆದೇಶಿಸಿದೆ. ಆದರೆ, ಸರ್ಕಾರದ ಆದೇಶದಲ್ಲಿ ಇಷ್ಟೊಂದು ಸಂಖ್ಯೆಯ ವಕೀಲರ ವಜಾಕ್ಕೆ ಕಾರಣ ಕೊಟ್ಟಿಲ್ಲ. ಕಾನೂನು ಮತ್ತು ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿಕುಂಜ್ ಈ ಆದೇಶ ಹೊರಡಿಸಿದ್ದಾರೆ.
ಅಲಹಾಬಾದ್ ಹೈಕೋರ್ಟ್ನಲ್ಲಿ ನೇಮಕವಾದ ಎಲ್ಲ ಸಾರ್ವಜನಿಕ ಅಭಿಯೋಜಕರನ್ನೂ ವಜಾ ಮಾಡಲಾಗಿದೆ. ಹೈಕೋರ್ಟ್ನ ಮುಖ್ಯ ಪೀಠದ 505 ಜನ ರಾಜ್ಯ ನ್ಯಾಯಾಂಗ ಅಧಿಕಾರಿಗಳು ಮತ್ತು ಲಖನೌ ಹೈಕೋರ್ಟ್ ಪೀಠದ 336 ಜನ ಸರ್ಕಾರಿ ವಕೀಲರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಇದರ ಭಾಗವಾಗಿಯೇ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿನೋದ್ ಕಾಂತ್ ಅವರನ್ನೂ ಕೆಲಸದಿಂದ ತೆಗೆದು ಹಾಕಿದ್ದಾರೆೆ. ಇದರ ಜೊತೆಗೆ ಪ್ರಯಾಗ್‌ರಾಜ್ ನ್ಯಾಯಪೀಠದಿಂದ 26 ಹೆಚ್ಚುವರಿ ಮುಖ್ಯ ಕಾಯಂ ವಕೀಲರನ್ನೂ ವಜಾಗೊಳಿಸಿದ್ದಾರೆ. ಅಷ್ಟೇ ಅಲ್ಲ, 179 ಜನ ಕಾಯಂ ವಕೀಲರಿಗೆ ಕಡ್ಡಾಯ ರಜೆ ನೀಡಲಾಗಿದೆ.