ಕರ್ನಾಟಕ

karnataka

ETV Bharat / bharat

ಯುಪಿ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ: ಮೋದಿ ಭೇಟಿ ಮಾಡಿದ ಯೋಗಿ - ಉತ್ತರ ಪ್ರದೇಶ

ಕೋವಿಡ್‌ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿಚಾರದಲ್ಲಿ ಉತ್ತರ ಪ್ರದೇಶದ ಪಕ್ಷದ ಸ್ಥಳೀಯ ನಾಯಕರು ಹಾಗೂ ಯೋಗಿ ಆದಿತ್ಯನಾಥ್ ನಡುವೆ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಮುಂದಿನ ಚುನಾವಣೆಗೆ ಸಿಎಂ ಬದಲಾವಣೆಯ ವಿಷಯ ಪ್ರಸ್ತಾಪವಾಗಿರುವುದರಿಂದ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿವೆ.

Yogi Adityanath Meets PM Modi In Delhi Amid UP Tumult
ಯುಪಿ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ; ಸಿಎಂ ಯೋಗಿ ಅವರಿಂದ ಪ್ರಧಾನಿ ಮೋದಿ ಭೇಟಿ

By

Published : Jun 11, 2021, 1:22 PM IST

ನವದೆಹಲಿ: ಉತ್ತರ ಪ್ರದೇಶದ ಬಿಜೆಪಿಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ದೆಹಲಿಯಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಸುಮಾರು 1 ತಾಸು ಮಾತುಕತೆ ನಡೆಸಿದ್ದಾರೆ. ನಿನ್ನೆಯಷ್ಟೇ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ್ದ ಸಿಎಂ ಯೋಗಿ ಆದಿತ್ಯನಾಥ 90 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದರು.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ಇರುವುದರಿಂದ ನಾಯಕರ ಈ ಭೇಟಿ ಭಾರಿ ಮಹತ್ವ ಪಡೆದುಕೊಂಡಿದೆ. ಕೋವಿಡ್‌ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿಚಾರದಲ್ಲಿ ಸ್ಥಳೀಯ ಕೇಸರಿ ನಾಯಕರು ಹಾಗೂ ಯೋಗಿ ಆದಿತ್ಯನಾಥ್ ನಡುವೆ ವೈಮನಸ್ಸು ಮೂಡಿದೆ ಎನ್ನಲಾಗಿದೆ. ಮುಂದಿನ ಚುನಾವಣೆಗೆ ಸಿಎಂ ಬದಲಾವಣೆಯ ವಿಷಯ ಪ್ರಸ್ತಾಪವಾಗಿರುವುದರಿಂದ ರಾಜಕೀಯ ಬೆಳವಣಿಗೆಗಳು ಬಿರುಸುಗೊಂಡಿವೆ. ಆದ್ರೆ ಕೇಂದ್ರದ ನಾಯಕರಿಗೆ ಮಾತ್ರ ಸಿಎಂ ಯೋಗಿ ಆದಿತ್ಯನಾಥ ಅವರನ್ನು ಬದಲಾಯಿಸುವ ಮನಸ್ಸಿಲ್ಲ.

ಇದನ್ನೂ ಓದಿ: ರಾವಣನ ರಾಜ್ಯದಲ್ಲಿ ಪೆಟ್ರೋಲ್‌ಗೆ 59 ರೂ., ರಾಮನ ರಾಜ್ಯದಲ್ಲಿ 100, ನಾಚಿಕೆ ಆಗಲ್ವಾ?: ಸಿದ್ದರಾಮಯ್ಯ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಸರ್ಕಾರದ ಕಾರ್ಯವೈಖರಿ ಬಗ್ಗೆ ಶಾಸಕರು, ಸಂಸದರು ಮತ್ತು ಮುಖ್ಯಮಂತ್ರಿ ಅವರಿಂದ ಅಭಿಪ್ರಾಯ ಪಡೆದಿದ್ದರು. ಇದಾದ ವಾರದ ಬಳಿಕ ಸಿಎಂ ದೆಹಲಿಗೆ ದೌಡಾಯಿಸಿದ್ದಾರೆ.

ಜಿತಿನ್ ಪ್ರಸಾದ್ ಪ್ರಮುಖ ಸ್ಥಾನ ಸಾಧ್ಯತೆ

ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಜಿತಿನ್‌ ಪ್ರಸಾದ್‌ ಅವರಿಗೆ ಪ್ರಮುಖ ಸ್ಥಾನ ನೀಡುವ ಸಾಧ್ಯತೆ ಇದೆ. ಬ್ರಾಹ್ಮಣ ಸಮುದಾಯದ ಜಿತಿನ್‌ ಪ್ರಸಾದ್‌ಗೆ ಉನ್ನತ ಜವಾಬ್ದಾರಿ ನೀಡುವ ಮೂಲಕ ಯುಪಿಯಲ್ಲಿರುವ ಶೇ 13 ರಷ್ಟು ಬ್ರಾಹ್ಮಣರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ ಎನ್ನಲಾಗುತ್ತಿದೆ.

ABOUT THE AUTHOR

...view details