ಲಕ್ನೋ:ಉತ್ತರ ಪ್ರದೇಶದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ಇದೀಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ರಿಗೂ ಅದರ ಭಯ ಶುರುವಾಗಿದೆ.
ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಪಿ.ಗೋಯಲ್, ಒಎಸ್ಡಿ ಅಭಿಷೇಕ್ ಕೌಶಿಕ್, ವಿಶೇಷ ಕಾರ್ಯದರ್ಶಿ ಅಮಿತ್ ಸಿಂಗ್ ಸೇರಿದಂತೆ ಕೆಲ ಅಧಿಕಾರಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಕಾರಣ ಮುಖ್ಯಮಂತ್ರಿ ಸೆಲ್ಫ್ ಐಸೋಲೇಷನ್ಗೊಳಗಾಗಿದ್ದಾರೆ.