ಕರ್ನಾಟಕ

karnataka

ETV Bharat / bharat

ಬಿಜೆಪಿಯ ತಿರಂಗಯಾತ್ರೆ ರೈತರೊಂದಿಗಿನ ಘರ್ಷಣೆಯ ಒಂದು 'ತಂತ್ರ' : ಯೋಗೇಂದ್ರ ಯಾದವ್

ನಾನು ರೈತರಿಗೆ ತಿರಂಗ ಯಾತ್ರೆಯನ್ನು ಎಲ್ಲಿಯೂ ವಿರೋಧಿಸಬಾರದು ಎಂದು ಮನವಿ ಮಾಡುತ್ತೇನೆ. ಆದರೆ, ಬಿಜೆಪಿ ಮತ್ತು ಜೆಜೆಪಿ ನಾಯಕರು, ಮಂತ್ರಿಗಳ ಬಹಿಷ್ಕಾರವನ್ನು ಮುಂದುವರಿಸಬೇಕು. ಈ ಯಾತ್ರೆಯು ರೈತರ ಸಾಮಾಜಿಕ ಪ್ರತ್ಯೇಕತೆಯನ್ನು ಅಪಖ್ಯಾತಿಗೊಳಿಸುವ ಹತಾಶ ಪ್ರಯತ್ನವಾಗಿದೆ ಎಂದಿದ್ದಾರೆ..

ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್

By

Published : Aug 1, 2021, 8:54 PM IST

Updated : Aug 1, 2021, 10:53 PM IST

ನವದೆಹಲಿ: ಸಂಯುಕ್ತ ಕಿಸಾನ್ ಮೋರ್ಚಾ ನಾಯಕ ಯೋಗೇಂದ್ರ ಯಾದವ್ ಭಾರತೀಯ ಜನತಾ ಪಕ್ಷದ ಹದಿನೈದು ದಿನಗಳ ‘ತಿರಂಗ ಯಾತ್ರೆ’ಯನ್ನು ಇದೊಂದು ತಂತ್ರ ಎಂದು ಉಲ್ಲೇಖಿಸಿದ್ದಾರೆ.

ಸ್ವಾತಂತ್ರ್ಯದ ನಂತರದ 30 ವರ್ಷಗಳವರೆಗೂ ಆರ್​​ಎಸ್​ಎಸ್​​ ತನ್ನ ಕಚೇರಿಯಲ್ಲಿ ತ್ರಿವರ್ಣ ಧ್ವಜ ಹಾರಿಸಲಿಲ್ಲ. ಆದರೆ, ಈಗ ಸ್ವಾತಂತ್ರ್ಯದ 74ನೇ ವಾರ್ಷಿಕೋತ್ಸವದಂದು ಹಮ್ಮಿಕೊಂಡಿರುವ ಈ 'ತಿರಂಗ ಯಾತ್ರೆ' ರೈತರೊಂದಿಗಿನ ಘರ್ಷಣೆಯ ತಂತ್ರವಾಗಿದೆ ಎಂದು ಹರಿಹಾಯ್ದರು.

ಯೋಗೇಂದ್ರ ಯಾದವ್

ನಾನು ರೈತರಿಗೆ ತಿರಂಗ ಯಾತ್ರೆಯನ್ನು ಎಲ್ಲಿಯೂ ವಿರೋಧಿಸಬಾರದು ಎಂದು ಮನವಿ ಮಾಡುತ್ತೇನೆ. ಆದರೆ, ಬಿಜೆಪಿ ಮತ್ತು ಜೆಜೆಪಿ ನಾಯಕರು, ಮಂತ್ರಿಗಳ ಬಹಿಷ್ಕಾರವನ್ನು ಮುಂದುವರಿಸಬೇಕು. ಈ ಯಾತ್ರೆಯು ರೈತರ ಸಾಮಾಜಿಕ ಪ್ರತ್ಯೇಕತೆಯನ್ನು ಅಪಖ್ಯಾತಿಗೊಳಿಸುವ ಹತಾಶ ಪ್ರಯತ್ನವಾಗಿದೆ ಎಂದಿದ್ದಾರೆ.

ಮೂರು ವಿವಾದಾತ್ಮಕ ಭೂ ಕಾನೂನುಗಳು ಆರಂಭವಾದಾಗಿನಿಂದಲೂ ಬಿಜೆಪಿ ನಾಯಕರ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವುದು ಎಲ್ಲರಿಗೂ ತಿಳಿದಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಈ ಯಾತ್ರೆ ಕೈಗೊಂಡಿದೆ.

Last Updated : Aug 1, 2021, 10:53 PM IST

ABOUT THE AUTHOR

...view details