ಚೆನ್ನೈ (ತಮಿಳುನಾಡು): ಗಾಂಜಾ ಮಾರಾಟ ಮಾಡುತ್ತಿದ್ದ ಯೋಗ ಶಿಕ್ಷಕನನ್ನು ಚೆನ್ನೈನ ಪೆರುಂಗಲತ್ತೂರಿನಲ್ಲಿ ಬಂಧಿಸಲಾಗಿದೆ. ಕೇರಳದ ತಿರುವನಂತಪುರಂ ಮೂಲದ ದಿನೇಶ್ ಎಂಬುವರನ್ನು ಬಂಧಿಸಿ, 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಇಲ್ಲಿನ ಪೆರುಂಗಲತ್ತೂರ್ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿದ್ದು, ತಕ್ಷಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯು ಯೋಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಚೆನ್ನೈನ ಪಾಲವಕ್ಕಂನಲ್ಲಿ ವಾಸವಾಗಿದ್ದನು. ಅಲ್ಲದೆ ವೆಲಚೇರಿ, ನೀಲಂಗರೈ ಮತ್ತು ದುರೈಪಾಕಂ ಜಿಮ್‌ಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.