ಕರ್ನಾಟಕ

karnataka

ETV Bharat / bharat

ಮೇ ಡೇ: ಕಾರ್ಮಿಕ ಚಳವಳಿಯ ಸ್ಮರಣೆಗಾಗಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ - ಕಾರ್ಮಿಕರ ಮೇಲೆ ಕೋವಿಡ್ ಪರಿಣಾಮ

ಕಾರ್ಮಿಕರ ಹಿತಾಸಕ್ತಿಯ ಉದ್ದೇಶದಿಂದ ಪ್ರಥಮ ಬಾರಿಗೆ 1890ರ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು. ಫ್ರಾನ್ಸ್​ನ ಪ್ಯಾರಿಸ್​ನಲ್ಲಿ 1889ರ ಜುಲೈ 14 ರಂದು ಸೋಶಿಯಲಿಸ್ಟ್​ ಪಕ್ಷಗಳ ಮೊದಲ ಅಂತಾರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿಯೇ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ಒಗ್ಗಟ್ಟಿನ ದಿನವನ್ನಾಗಿ ಆಚರಿಸಲು ಕರೆ ನೀಡಲಾಗಿತ್ತು.

International Labour Day 2021: May 1
ಮೇ ಡೇ; ಇಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ

By

Published : Apr 30, 2021, 11:09 PM IST

Updated : May 1, 2021, 8:13 AM IST

ಹೈದರಾಬಾದ್:ಮೇ ಡೇ ಅಥವಾ ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಮೇ 1 ರಂದು ಆಚರಿಸಲಾಗುತ್ತಿದೆ. ಮೇ ಡೇ ಕುರಿತಾಗಿ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ವಿಭಿನ್ನ ಕತೆಗಳಿವೆ. ಮೇ 1 ರಂದು ಮೇ ಡೇ ಅಂಗವಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರಿಗೆ ರಜೆ ನೀಡಲಾಗುತ್ತದೆ. ಮುಖ್ಯವಾಗಿ ಕಾರ್ಮಿಕ ಚಳವಳಿಯ ಸ್ಮರಣೆಗಾಗಿ ಮೇ ಡೇ ಆಚರಿಸಲಾಗುತ್ತದೆ.

ವಿಶ್ವದ 80 ರಾಷ್ಟ್ರಗಳಲ್ಲಿ ಕಾರ್ಮಿಕ ದಿನಾಚರಣೆಯಂದು ಸಾರ್ವತ್ರಿಕ ರಜೆ ಘೋಷಿಸಲಾಗಿರುತ್ತದೆ. ವಿಶ್ವಾದ್ಯಂತ ಇಂದಿನ ದಿನವನ್ನು ಮೇ ಡೇ ಎಂದು ಕರೆಯಲಾಗುತ್ತದೆ. ಚೀನಾ, ನಾರ್ತ್ ಕೊರಿಯಾ, ಕ್ಯೂಬಾ ಮತ್ತು ರಷ್ಯಾ ದೇಶಗಳಲ್ಲಿ ಈ ದಿನದಂದು ಅಧಿಕೃತವಾಗಿ ಸಾರ್ವತ್ರಿಕ ರಜೆ ಇರುತ್ತದೆ.

ಕಾರ್ಮಿಕ ದಿನಾಚರಣೆಯ ಇತಿಹಾಸ

  • ಕಾರ್ಮಿಕರ ಹಿತಾಸಕ್ತಿಯ ಉದ್ದೇಶದಿಂದ ಪ್ರಥಮ ಬಾರಿಗೆ 1890ರ ಮೇ 1 ರಂದು ಅಂತಾರಾಷ್ಟ್ರೀಯ ಕಾರ್ಮಿಕ ದಿನ ಆಚರಿಸಲಾಯಿತು. ಫ್ರಾನ್ಸ್​ನ ಪ್ಯಾರಿಸ್​ನಲ್ಲಿ 1889ರ ಜುಲೈ 14 ರಂದು ಸೋಶಿಯಲಿಸ್ಟ್​ ಪಕ್ಷಗಳ ಮೊದಲ ಅಂತಾರಾಷ್ಟ್ರೀಯ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿಯೇ ಮೇ 1ರಂದು ಅಂತಾರಾಷ್ಟ್ರೀಯ ಕಾರ್ಮಿಕರ ಒಗ್ಗಟ್ಟಿನ ದಿನವನ್ನಾಗಿ ಆಚರಿಸಲು ಕರೆ ನೀಡಲಾಗಿತ್ತು.
  • ಅಮೆರಿಕನ್ ಫೆಡರೇಶನ್ ಆಫ್ ಆರ್ಗನೈಸ್ಡ್​ ಟ್ರೇಡರ್ಸ್​ ಆ್ಯಂಡ್​ ಲೇಬರ್ಸ್​ ಯೂನಿಯನ್, ದಿನದಲ್ಲಿ ಕೆಲಸದ ಅವಧಿಯನ್ನು 8 ತಾಸುಗಳಿಗೆ ಸೀಮಿತಗೊಳಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಸಿತ್ತು. ಈ ಬೇಡಿಕೆಗೆ ಮನ್ನಣೆ ದೊರಕಿ ಈ ನಿಯಮವು ಮೇ 1, 1886 ರಲ್ಲಿ ಜಾರಿಗೆ ಬಂದಿತು. ಹೀಗಾಗಿ ಮೇ 1ನೇ ತಾರೀಕಿನಂದೇ ಕಾರ್ಮಿಕ ದಿನ ಆಚರಿಸಲು ನಿರ್ಧರಿಸಲಾಗಿತ್ತು.

ಭಾರತದಲ್ಲಿ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ

  • ಲೇಬರ್​ ಕಿಸಾನ್ ಪಾರ್ಟಿ ಆಫ್ ಹಿಂದುಸ್ತಾನ್ ವತಿಯಿಂದ ಮೇ 1, 1923 ರಂದು ಮದ್ರಾಸ್​ನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಕಾರ್ಮಿಕ ದಿನ ಆಚರಿಸಲಾಗಿತ್ತು.
  • ಇದೇ ದಿನದಂದು ಐತಿಹಾಸಿಕ ಕೆಂಪು ಧ್ವಜವನ್ನು ಅನಾವರಣಗೊಳಿಸಲಾಗಿತ್ತು.
  • ಆಗಿನ ಖ್ಯಾತ ಕಮ್ಯುನಿಸ್ಟ್ ನೇತಾರ ಮಲಯಾಪುರಂ ಸಿಂಗಾರವೇಲು ಚೆಟ್ಟಿಯಾರ್ ಇವರು ಕೆಂಪು ಧ್ವಜವನ್ನು ಹಾರಿಸಿ ಪ್ರಥಮ ಬಾರಿಗೆ ದಿನಾಚರಣೆಯ ಸಭೆ ಮಾಡಿದ್ದರು.

ಕಾರ್ಮಿಕರ ಮೇಲೆ ಕೋವಿಡ್ ಪರಿಣಾಮ

ಜಾಗತಿಕವಾಗಿ ಕೋವಿಡ್​-19 ಲಾಕ್​ಡೌನ್​ಗಳಿಂದ 114 ಮಿಲಿಯನ್ ಜನತೆ ನೌಕರಿ ಕಳೆದುಕೊಂಡಿದ್ದಾರೆ. ಸುಮಾರು 3.7 ಟ್ರಿಲಿಯನ್ ಡಾಲರ್​ಗಳಷ್ಟು ಕಾರ್ಮಿಕರ ವೇತನ ನಷ್ಟವಾಗಿದೆ.

ಭಾರತದಲ್ಲಿ ಕಾರ್ಮಿಕರ ಸ್ಥಿತಿಗತಿ

ಲಾಕ್​ಡೌನ್ ಮುಂಚೆ ಹಾಗೂ ಲಾಕ್​ಡೌನ್​ ನಂತರ ಅಸಂಘಟಿತ ಕಾರ್ಮಿಕ ವಲಯದಲ್ಲಿನ ಸ್ಥಿತಿಗತಿ ಹೀಗಿದೆ:

ವಲಯ ಲಾಕ್​ಡೌನ್ ಮುಂಚೆ ಲಾಕ್​​ಡೌನ್ ನಂತರ
ನಿರುದ್ಯೋಗಿಗಳು

ಕೆಲಸ

ಹುಡುಕುತ್ತಿರುವವರು

ಉದ್ಯೋಗಿಗಳು ನಿರುದ್ಯೋಗಿಗಳು

ಕೆಲಸ

ಹುಡುಕುತ್ತಿರುವವರು

ಉದ್ಯೋಗಿಗಳು
ಕೃಷಿ 6.14 10.75 83.08 69.92 20.43 9.65
ಕಟ್ಟಡ ನಿರ್ಮಾಣ 4.55 7.69 87.76 83.85 10.84 5.31
ಉತ್ಪಾದನೆ 2.22 5.12 92.66 79.96 13.07 9.97
ಸೇವಾ ವಲಯ 2.72 7.42 89.86 76.32 14.2 9.47
Source: ActionAid India 2020
Last Updated : May 1, 2021, 8:13 AM IST

ABOUT THE AUTHOR

...view details