ಮೇಷ: 2023ರ ಆರಂಭದಲ್ಲಿ ದೃಢ ಮತ್ತು ಬಲಶಾಲಿ ಮೇಷ ರಾಶಿಯವರು ಸಾಕಷ್ಟು ಕಾರ್ಯ ಪ್ರವೃತ್ತರಾಗಲಿದ್ದಾರೆ. ವರ್ಷದ ಆರಂಭದಲ್ಲಿ, ಮಾತಿನಲ್ಲಿ ಕಹಿತನ ತೋರಿಸದೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ಕೆಲವೊಂದು ಒಳ್ಳೆಯ ಅವಕಾಶಗಳು ಕೈ ತಪ್ಪಿ ಹೋಗಬಹುದು. ನಿರಂಕುಶವಾದಿ ಎನ್ನುವ ಹಣೆಪಟ್ಟಿಯನ್ನು ಅಂಟಿಸಿಕೊಳ್ಳುವ ಬದಲಿಗೆ, ಯಾವುದು ಸರಿ ಮತ್ತು ಯಾವುದು ತಪ್ಪು ಎನ್ನುವುದನ್ನು ಗುರುತಿಸಿ ಮುಂದೆ ಸಾಗುವುದು ಒಳ್ಳೆಯದು. ಆಗ ಮಾತ್ರವೇ ನೀವು ಈ ವರ್ಷದಲ್ಲಿ ಮುಂದೆ ಸಾಗಿ ಲಾಭ ಗಳಿಸಲಿದ್ದೀರಿ. ಧಾರ್ಮಿಕವಾಗಿ ನೀವು ಖಂಡಿತವಾಗಿಯೂ ಮುಂದೆ ಸಾಗಲಿದ್ದೀರಿ. ಧಾರ್ಮಿಕ ವಿಚಾರಗಳು ಮತ್ತು ಅಧ್ಯಾತ್ಮಿಕ ಚಟುವಟಿಕೆಗಳನ್ನು ನೀವು ಸಾಕಷ್ಟು ಅನಂದಿಸಲಿದ್ದೀರಿ. ನೀವು ದೇವಸ್ಥಾನಕ್ಕೆ ದಾನ ನೀಡಬಹುದು ಅಥವಾ ಸರ್ಕಾರೇತರ ಸಂಸ್ಥೆಯೊಂದನ್ನು ಸೇರಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬಹುದು. ವರ್ಷದ ಆರಂಭದಲ್ಲಿ ಸೂರ್ಯ ಮತ್ತು ಬುಧ ನಿಮ್ಮ ಒಂಬತ್ತನೇ ಮನೆಯಲ್ಲಿ ಇರಲಿದ್ದಾರೆ. ಇದರಿಂದಾಗಿ ನಿಮ್ಮ ತಂದೆಯ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ ಹಾಗೂ ಅವರಿಂದ ನೀವು ದೊಡ್ಡ ಮಟ್ಟದ ಲಾಭವನ್ನು ಗಳಿಸಲಿದ್ದೀರಿ. ಮಾರ್ಚ್ ಮತ್ತು ಮೇ ತಿಂಗಳುಗಳ ನಡುವಿನ ಸಮಯವು ಚೆನ್ನಾಗಿರಲಿದೆ. ಮೇ ತಿಂಗಳಿನಿಂದ ಜುಲೈವರೆಗಿನ ಸಮಯವು ಏರುಪೇರಿನಿಂದ ಕೂಡಿರಲಿದೆ. ಈ ಸಂದರ್ಭದಲ್ಲಿ ಕೌಟುಂಬಿಕ ಬದುಕಿನಲ್ಲಿ ಭಿನ್ನಾಭಿಪ್ರಾಯ ಉಂಟಾಗಬಹುದು. ನಿಮ್ಮ ತಾಯಿಯ ಆರೋಗ್ಯ ಕೆಡಬಹುದು. ಆದರೂ ಈ ಸಂದರ್ಭದಲ್ಲಿ ನೀವು ದೊಡ್ಡದಾದ ಆಸ್ತಿಯನ್ನು ಖರೀದಿಸಬಹುದು ಹಾಗೂ ರಿಯಲ್ ಎಸ್ಟೇಟ್ಗೆ ಸಂಬಂಧಿಸಿದಂತೆ ಒಳ್ಳೆಯ ಯಶಸ್ಸು ದೊರೆಯಬಹುದು. ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ನಿಮ್ಮ ರಾಶಿಯ ಅಧಿಪತಿಯು ಆರನೇ ಮನೆಯಲ್ಲಿರಲಿದ್ದು, ಈ ಕಾರಣಕ್ಕಾಗಿ ಕಾನೂನಿನ ವಿಚಾರಗಳಲ್ಲಿ ನೀವು ಸಂಪೂರ್ಣ ಯಶಸ್ಸನ್ನು ಗಳಿಸಲಿದ್ದೀರಿ. ಅಲ್ಲದೆ ನ್ಯಾಯಾಲಯದ ವಿಚಾರದ ಫಲಿತಾಂಶವು ನಿಮ್ಮ ಪರವಾಗಿ ಇರಲಿದೆ. ಈ ಸಂದರ್ಭದಲ್ಲಿ ನಿಮ್ಮ ಎದುರಾಳಿಗಳನ್ನು ನೀವು ಸದೆಬಡಿಯಲಿದ್ದೀರಿ. ಈ ಸಮಯವು ನಿಮ್ಮನ್ನು ಬಲಪಡಿಸಲಿದೆ. ನವೆಂಬರ್ ಮತ್ತು ಡಿಸೆಂಬರ್ ನಡುವೆ ಒಂದಷ್ಟು ಎಚ್ಚರಿಕೆ ವಹಿಸುವುದು ಒಳ್ಳೆಯದು. ಏಕೆಂದರೆ ಈ ಸಂದರ್ಭದಲ್ಲಿ ನಿಮ್ಮ ಕೆಲಸದಲ್ಲಿ ಏರುಪೇರು ಉಂಟಾಗಬಹುದು. ನಿಮಗೆ ಯಾವುದಾದರೂ ಪುರಸ್ಕಾರ ದೊರೆಯುವ ಸಾಧ್ಯತೆ ಇದೆ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ವರ್ಷದ ಆರಂಭಿಕ ಸಮಯವು ಅನುಕೂಲಕರ.
ವೃಷಭ: ವೃಷಭ ರಾಶಿಯವರಿಗೆ 2023ರ ಆರಂಭವು ಮಿಶ್ರ ಫಲಿತಾಂಶವನ್ನು ತರಲಿದೆ. ನಿಮ್ಮ ರಾಶಿಯ ಮೇಲೆ ಮಂಗಳನು ಪ್ರಭಾವ ಉಂಟು ಮಾಡುವ ಕಾರಣ ನಿಮ್ಮ ವರ್ತನೆಯಲ್ಲಿ ಕೋಪವನ್ನು ನೋಡಬಹುದು. ಇದರಿಂದಾಗಿ ನಿಮಗೆ ಒಂದಷ್ಟು ಸಮಸ್ಯೆಗಳು ಎದುರಾಗಬಹುದು. ನಿಮಗೆ ಮಾನಸಿಕ ಒತ್ತಡವು ಕಾಡಬಹುದು. ಆದರೆ ಮೆಲ್ಲನೆ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು, ನಿಮ್ಮ ಬದುಕಿನಲ್ಲಿ ಮುಂದೆ ಸಾಗಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಹಣಕಾಸಿನ ಸ್ಥಿತಿಯಲ್ಲಿ ಏರುಪೇರು ಉಂಟಾಗಬಹುದು. ಒಂದು ಕಡೆ ನಿಮಗೆ ಅದ್ಭುತ ಆರ್ಥಿಕ ಫಲಿತಾಂಶ ದೊರೆಯಲಿದೆ ಹಾಗೂ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇನ್ನೊಂದೆಡೆ, ವರ್ಷದ ಕೊನೆಯ ಎರಡು ತಿಂಗಳುಗಳ ತನಕ ನಿಮ್ಮ ಖರ್ಚುವೆಚ್ಚಗಳ ದೀರ್ಘ ಪಟ್ಟಿಯು ಮುಂದುವರಿಯಲಿದೆ. ನಿಮಗೆ ಇಷ್ಟವಿರಲಿ, ಅಥವಾ ಇಷ್ಟವಿರದೆ ಇರಲಿ, ನೀವು ಖರ್ಚು ಮಾಡಲೇಬೇಕು. ಆದರೂ, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ನಿಮ್ಮ ಮೊಗದಲ್ಲಿ ನಗು ಕಾಣಿಸಿಕೊಳ್ಳಲಿದೆ ಹಾಗೂ ನೀವು ಸದೃಢರಾಗಲಿದ್ದೀರಿ. ಈ ವರ್ಷದಲ್ಲಿ ನಿಮ್ಮ ಆರೋಗ್ಯದ ಕುರಿತು ನೀವು ವಿಶೇಷ ಕಾಳಜಿ ವಹಿಸಬೇಕು. ಇಲ್ಲದಿದ್ದರೆ ನೀವು ಕಾಯಿಲೆಗೆ ಬೀಳಬಹುದು ಮತ್ತು ಆಸ್ಪತ್ರೆಗೆ ಹೋಗಬೇಕಾದೀತು. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ನೀವು ಈ ವರ್ಷದಲ್ಲಿ ದೀರ್ಘ ಪ್ರಯಾಣವನ್ನು ಮಾಡಬಹುದು. ವಿದೇಶಕ್ಕೆ ಪ್ರಯಾಣಿಸಲು ನಿಮಗೆ ಅವಕಾಶ ದೊರೆಯಬಹುದು. ಅಲ್ಲಿ ನಿಮಗೆ ದೀರ್ಘ ಕಾಲ ತಂಗಲು ಸಾಧ್ಯವಾಗಬಹುದು. ಅತ್ಯಂತ ದೂರದ ಊರುಗಳಿಗೆ ನೀವು ಪ್ರಯಾಣಿಸಬೇಕಾದ ಸನ್ನಿವೇಶ ಉಂಟಾಗಬಹುದು ಮತ್ತು ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣ ಮಾಡಬೇಕಾದೀತು. ವರ್ಷದ ಆರಂಭದಲ್ಲಿ ನೀವು ಒಂದಷ್ಟು ಪ್ರಯಾಣ ಮಾಡಬೇಕಾದೀತು. ನೀವು ಕಠಿಣ ಶ್ರಮಿಯಾಗಿದ್ದರೂ, ಈ ವರ್ಷ ಸಾಕಷ್ಟು ಬೆವರು ಸುರಿಸುವ ಅಗತ್ಯವಿದೆ. ನಿಮ್ಮ ಹಿಂದೆ ಇರುವ ಯಾವುದೇ ವಿಚಾರದ ಕುರಿತು ನೀವು ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದಾಗಿ ನಿಮಗೆ ದೈಹಿಕ ಆಯಾಸ ಉಂಟಾಗಲಿದ್ದು, ಪರಿಣಾಮವಾಗಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಈ ಎಲ್ಲಾ ಅಂಶಗಳನ್ನು ನೀವು ಪರಿಗಣಿಸಿದರೆ, ಈ ವರ್ಷವು ನಿಮಗೆ ಉತ್ತಮ ಸ್ಥಾನಮಾನವನ್ನು ಲಭಿಸಲಿದೆ. ನಿಮ್ಮ ಕುಟುಂಬದ ಸದಸ್ಯರ ಜೊತೆಗೆ ನೀವು ಉತ್ತಮ ಬಂಧವನ್ನು ಕಾಪಾಡಿಕೊಳ್ಳಬೇಕು. ಕೆಲಸದ ಒತ್ತಡದ ಕಾರಣ ನೀವು ಕುಟುಂಬದ ಸದಸ್ಯರಿಂದ ದೂರವುಳಿಯಬಹುದು. ಹೀಗಾಗಿ ನೀವು ಅವರೊಂದಿಗೆ ಹೆಚ್ಚು ಬೆರೆಯಲು ಸಾಧ್ಯವಾಗದು.
ಮಿಥುನ: ಮಿಥುನ ರಾಶಿಯವರಿಗೆ 2023ನೇ ವರ್ಷವು ಸಾಕಷ್ಟು ಹೊಸ ವಿಚಾರಗಳನ್ನು ಹೊತ್ತು ತರಲಿದೆ. ಜನವರಿ ತಿಂಗಳಿನಿಂದಲೇ ನಿಮ್ಮ ಅದೃಷ್ಟವು ಚೆನ್ನಾಗಿರಲಿದೆ ಹಾಗೂ ಇದರ ಪ್ರಯೋಜನ ನಿಮಗೆ ದೊರೆಯಲಿದೆ. ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ ಹಾಗೂ ಆರ್ಥಿಕವಾಗಿ ನೀವು ಪ್ರಗತಿ ಸಾಧಿಸಲಿದ್ದೀರಿ. ಈ ವರ್ಷದಲ್ಲಿ ಕೌಟುಂಬಿಕ ಬದುಕು ಚೆನ್ನಾಗಿರಲಿದೆ ಹಾಗೂ ಕುಟುಂಬದ ಯಾವುದೇ ಮಂಗಳದಾಯಕ ಕೆಲಸವು ಅನ್ಯೋನ್ಯತೆಯ ಭಾವ ಮತ್ತು ಪ್ರೇಮವನ್ನು ವೃದ್ಧಿಸಲಿದೆ. ವರ್ಷದ ಆರಂಭದಲ್ಲಿ ಮಂಗಳನ ಪ್ರಭಾವವು ನಿಮ್ಮ ಕೌಟುಂಬಿಕ ಬದುಕಿನ ಮೇಲೆ ಉಂಟಾಗಬಹುದು. ಖರ್ಚುವೆಚ್ಚಗಳಲ್ಲಿ ಹೆಚ್ಚಳ ಉಂಟಾಗಬಹುದು. ಹೀಗಾಗಿ ನೀವು ಶಾಶ್ವತ ಆದಾಯ ಮೂಲವನ್ನು ಕಂಡುಹಿಡಿಯಬೇಕಾದೀತು. ವರ್ಷದ ಆರಂಭದಲ್ಲಿ ವಿದೇಶಕ್ಕೆ ಹೋಗಲು ನಿಮಗೆ ಅವಕಾಶ ದೊರೆಯಬಹುದು. ಕೆಲ ಜನರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಆಗಾಗ್ಗೆ ಪ್ರಯಾಣಿಸಬಹುದು. ಈ ವರ್ಷದ ನಡುವಿನ ತಿಂಗಳುಗಳಲ್ಲಿ ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ನೀವು ನ್ಯಾಯಾಲಯದ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ಈ ವರ್ಷದಲ್ಲಿ ಫಲಿತಾಂಶ ದೊರೆಯಬಹುದು. ಜನವರಿಯಲ್ಲಿ ಒಂದಷ್ಟು ತಾಳ್ಮೆಯನ್ನು ಕಾಪಾಡಿ. ಏಕೆಂದರೆ ಈ ಸಂದರ್ಭದಲ್ಲಿ ಸಮಸ್ಯೆಗಳು ಎದುರಾಗಬಹುದು. ತದನಂತರ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅದ್ಭುತ ಯಶಸ್ಸು ದೊರೆಯಲಿದೆ. ನಿಮ್ಮ ಆರೋಗ್ಯದ ಕುರಿತು ನಿರ್ಲಕ್ಷ್ಯ ತೋರಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ವರ್ಷದ ಆರಂಭದಲ್ಲಿ ನಿಮ್ಮ ಗೆಳೆಯರ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. ನೀವು ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಂಡಲ್ಲಿ, ಅವರ ನೆರವು ನಿಮಗೆ ಸಾಕಷ್ಟು ಪ್ರಯೋಜನಕಾರಿ ಎನಿಸಲಿದೆ. ಅಲ್ಲದೆ ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ನೀವು ಯಶಸ್ವಿಯಾಗಲಿದ್ದೀರಿ. ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರಲಿದ್ದು, ಕಠಿಣ ಸವಾಲಿನ ಸಂದರ್ಭದಲ್ಲಿಯೂ ಅದು ನಿಮ್ಮನ್ನು ಮುಂದಕ್ಕೆ ಕೊಂಡೊಯ್ಯಲಿದೆ. ನಿಮ್ಮ ಹಿರಿಯ ಒಡಹುಟ್ಟಿದವರೊಂದಿಗೆ ನೀವು ಉತ್ತಮ ಸಂಬಂಧವನ್ನು ಕಾಪಾಡಬೇಕು. ಈ ಸಂಬಂಧವು ಈ ವರ್ಷದಲ್ಲಿ ಹದಗೆಡುವ ಸಾಧ್ಯತೆ ಇದೆ.
ಕರ್ಕಾಟಕ: ಕರ್ಕಾಟಕ ರಾಶಿಯವರಿಗೆ 2023ನೇ ವರ್ಷವು ಅನುಕೂಲಕರ ಎನಿಸಲಿದೆ. ವರ್ಷದ ಆರಂಭದಿಂದಲೇ ಅದೃಷ್ಟವು ನಿಮ್ಮ ಜೊತೆಗಿರಲಿದೆ. ಹೀಗಾಗಿ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಬಾಕಿ ಉಳಿದಿರುವ ನಿಮ್ಮ ಕೆಲಸಗಳು ಪೂರ್ಣಗೊಳ್ಳಲಿವೆ. ದೀರ್ಘ ಕಾಲದಿಂದ ನೀವು ಹೊಂದಿದ್ದ ಇಚ್ಛೆಯು ಈ ವರ್ಷದಲ್ಲಿ ಈಡೇರಲಿದೆ. ಈ ವರ್ಷದಲ್ಲಿ ನೀವು ಸಾಕಷ್ಟು ಪ್ರಯಾಣವನ್ನು ಮಾಡಬಹುದು. ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಬೆಳೆಸುವ ಅವಕಾಶಗಳು ದೊರೆಯಬಹುದು. ಇದರಿಂದ ನಿಮ್ಮ ಮನಸ್ಸಿಗೆ ಶಾಂತಿ ದೊರೆಯಲಿದೆ. ಧರ್ಮಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ನಿಮ್ಮ ನಂಬಿಕೆ ಮತ್ತು ಭಕ್ತಿಯು ಹೆಚ್ಚಲಿದೆ. ಅಲ್ಲದೆ ಇದರಲ್ಲಿ ನೀವು ಸಕ್ರಿಯರಾಗಿ ಪಾಲ್ಗೊಳ್ಳಲಿದ್ದೀರಿ. ಇದರ ಜೊತೆಗೆ ನಿಮಗೆ ಗೌರವವೂ ದೊರೆಯಲಿದೆ. ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವ ಯಾವುದಾದರೂ ಸಂಸ್ಥೆಯನ್ನು ನೀವು ಸೇರಬಹುದು. ಇದರಿಂದಾಗಿ ಏನಾದರೂ ಹೊಸ ಕೆಲಸವನ್ನು ಮಾಡಲು ನಿಮಗೆ ಅವಕಾಶ ದೊರೆಯಬಹುದು ಹಾಗೂ ನಿಮ್ಮ ಸಾಮಾಜಿಕ ಸ್ಥಾನಮಾನದಲ್ಲಿ ವೃದ್ಧಿ ಉಂಟಾಗಲಿದೆ. ಈ ವರ್ಷ ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ನೀವು ಈಗಾಗಲೇ ಅರ್ಜಿ ಸಲ್ಲಿಸದೆ ಇದ್ದಲ್ಲಿ ಈ ಕೆಲಸವನ್ನು ಬೇಗನೇ ಮಾಡಿ. ಇದರಿಂದ ನಿಮಗೆ ಯಶಸ್ಸು ದೊರೆಯಲಿದೆ. ಸದ್ಯಕ್ಕೆ ನಿಮ್ಮ ಆದಾಯವು ಚೆನ್ನಾಗಿರಲಿದೆ ಹಾಗೂ ನಿಮ್ಮ ಆತ್ಮವಿಶ್ವಾಸವು ಸದೃಢವಾಗಿರಲಿದೆ. ಇದರಿಂದಾಗಿ ನೀವು ಯಾವುದಾದರೂ ಹೊಸ ಕೆಲಸಕ್ಕೆ ಕೈ ಹಾಕಬಹುದು ಹಾಗೂ ಇದರಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಕೌಟುಂಬಿಕ ಬದುಕಿನಲ್ಲಿ ಅತೃಪ್ತಿ ನೆಲೆಸಲಿದೆ. ಕುಟುಂಬದ ನಡುವೆಯೇ ಇದ್ದರೂ ನೀವು ಪ್ರತ್ಯೇಕಗೊಂಡಂತೆ ಅಥವಾ ಸಂಬಂಧ ಕಡಿದುಕೊಂಡಂತೆ ನಿಮಗೆ ಭಾಸವಾಗಬಹುದು. ಕುಟುಂಬದ ವಿಚಾರದಲ್ಲಿ ನಿಮ್ಮ ಮನಸ್ಸು ಹೆಚ್ಚು ಓಡದೇ ಇರಬಹುದು. ಅಲ್ಲದೆ ಕೇವಲ ಔಪಚಾರಿಕತೆಯನ್ನು ಮುಗಿಸುವುದಕ್ಕಾಗಿ ನೀವು ಮನೆಗೆ ಭೇಟಿ ನೀಡಬಹುದು. ನಿಮ್ಮ ಈ ವರ್ತನೆಯು ಮನೆಯಲ್ಲಿರುವ ಜನರಿಗೆ ಕೊಂಚ ವಕ್ರವಾಗಿ ಕಾಣಿಸಿಕೊಳ್ಳಬಹುದು ಹಾಗೂ ಈ ಕುರಿತು ನಿಮಗೆ ಅವರು ದೂರು ನೀಡಬಹುದು. ಸರ್ಕಾರಿ ಕ್ಷೇತ್ರದೊಂದಿಗೆ ನೀವು ಉತ್ತಮ ಸಂಪರ್ಕವನ್ನು ಸಾಧಿಸಬಹುದು. ಕೆಲ ಗೆಳೆಯರ ನೆರವು ನಿಮಗೆ ದೊರೆಯಲಿದೆ. ಇದು ನಿಮ್ಮ ಕೆಲಸದಲ್ಲಿ ಮುಂದೆ ಸಾಗಲು ನಿಮಗೆ ನೆರವಾಗಲಿದೆ. ಕುಟುಂಬದ ವಿಚಾರದಲ್ಲಿಯೂ ಅವರಿಗೆ ನಿಮಗೆ ನೆರವು ನೀಡಲಿದ್ದಾರೆ.
ಸಿಂಹ: ಸಿಂಹ ರಾಶಿಯವರಿಗೆ ಈ ವರ್ಷವು ಸಾಕಷ್ಟು ಹೊಸ ವಿಚಾರಗಳನ್ನು ಹೊತ್ತು ತರಲಿದೆ. ವರ್ಷದ ಆರಂಭದಿಂದಲೇ ನಿಮ್ಮ ಆತ್ಮವಿಶ್ವಾಸವು ಚೆನ್ನಾಗಿರಲಿದೆ. ದೇವರ ಮೇಲಿನ ನಿಮ್ಮ ನಂಬಿಕೆಯು ಹೆಚ್ಚಲಿದೆ ಹಾಗೂ ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಇಡೀ ವರ್ಷದಲ್ಲಿ ನೀವು ಒಂದಷ್ಟು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಬಹುದು. ಹೀಗಾಗಿ ಸಮಾಜದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ಅಲ್ಲದೆ ಅನೇಕ ಗಣ್ಯರನ್ನು ಭೇಟಿಯಾಗುವ ಅವಕಾಶ ನಿಮಗೆ ಲಭಿಸಬಹುದು. ಕೆಲವೊಂದು ಪ್ರಬಲ ವ್ಯಕ್ತಿಗಳೊಂದಿಗೆ ನೀವು ಸಂಪರ್ಕ ಸಾಧಿಸಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ನೀವು ಒಳ್ಳೆಯ ಲಾಭವನ್ನು ಪಡೆಯಬಹುದು. ಈ ವರ್ಷವು ಹೂಡಿಕೆಗೆ ಅನುಕೂಲಕರ. ಹೂಡಿಕೆಯ ಮೇಲೆ ನೀವು ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ಆದರೆ ದಿನದ ವ್ಯವಹಾರಕ್ಕಿಂತಲೂ ದೀರ್ಘಕಾಲೀನ ಹೂಡಿಕೆಯು ಹೆಚ್ಚಿನ ಲಾಭ ನೀಡಲಿದೆ. ಹೀಗಾಗಿ ಅಂತಹ ವಿಚಾರಗಳಿಗೆ ಮಾತ್ರವೇ ಗಮನ ನೀಡಿ. ವರ್ಷದ ಆರಂಭಿಕ ದಿನಗಳಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು. ನಿಮ್ಮ ಆತ್ಮೀಯರೊಂದಿಗೆ ನೀವು ಕಾಲ ಕಳೆಯಬಹುದು. ಇದು ನಿಮಗೆ ಹೊಸ ಚೈತನ್ಯವನ್ನು ನೀಡಲಿದೆ. ಬದುಕಿನ ಎಲ್ಲಾ ಸಮಸ್ಯೆಗಳನ್ನು ಮರೆತು ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಇದು ಸಹಾಯ ಮಾಡಲಿದೆ. ಈ ವರ್ಷದಲ್ಲಿ ಸಾಕಷ್ಟು ಪ್ರಯಾಣ ಮಾಡುವ ಅವಕಾಶ ನಿಮಗೆ ಲಭಿಸಬಹುದು. ದೀರ್ಘ ಪ್ರಯಾಣ (ಮುಖ್ಯವಾಗಿ ವಿದೇಶಿ ಪ್ರಯಾಣ) ಮಾಡಲು ನಿಮಗೆ ಅವಕಾಶ ಲಭಿಸಬಹುದು. ಆರೋಗ್ಯದ ವಿಚಾರದಲ್ಲಿ ನಿಮಗೆ ಒಂದಷ್ಟು ದೌರ್ಬಲ್ಯ ಕಾಡಬಹುದು. ಹೀಗಾಗಿ ಆರೋಗ್ಯದ ಕುರಿತು ನೀವು ಸಾಕಷ್ಟು ಕಾಳಜಿ ವಹಿಸಬೇಕು. ಸಣ್ಣ ಸಮಸ್ಯೆಗಳು ದೊಡ್ಡ ಮಟ್ಟದಲ್ಲಿ ಉಲ್ಬಣಗೊಳ್ಳಬಹುದು. ಹೀಗಾಗಿ ನಿಮ್ಮ ಕುರಿತು ಕಾಳಜಿ ವಹಿಸಿ. ವೈಯಕ್ತಿಕ ಆರೈಕೆಗೆ ಗಮನ ನೀಡಿ. ವರ್ಷದ ನಡುವಿನ ತಿಂಗಳುಗಳಲ್ಲಿ ಶಾಪಿಂಗ್ ಮಾಡಲು ನಿಮಗೆ ಒಳ್ಳೆಯ ಅವಕಾಶಗಳು ಲಭಿಸಲಿವೆ. ರಿಯಾಯಿತಿ ದರದಲ್ಲಿ ದುಬಾರಿ ವಸ್ತುಗಳು ನಿಮಗೆ ಲಭಿಸಿದಾಗ ನೀವು ಅದನ್ನು ಖರೀದಿಸಲಿದ್ದೀರಿ. ದೀರ್ಘ ಕಾಲದಿಂದ ನೀವು ಹೊಂದಿದ್ದ ಬಯಕೆಗಳು ಈ ವರ್ಷದಲ್ಲಿ ಈಡೇರಲಿವೆ. ಹೀಗಾಗಿ ನಿಮ್ಮ ಸಂತಸಕ್ಕೆ ಪಾರವೇ ಇರದು.
ಕನ್ಯಾ: ಕನ್ಯಾ ರಾಶಿಯವರಿಗೆ 2023ನೇ ವರ್ಷವು ಮಿಶ್ರ ಫಲಿತಾಂಶ ತರಲಿದೆ. ನಿಮ್ಮ ಕುಟುಂಬದ ಕುರಿತು ನಿಮ್ಮನ್ನು ಚಿಂತೆಯು ಕಾಡಬಹುದು. ನಿಮ್ಮ ಕುಟುಂಬದ ವಾತಾವರಣವನ್ನು ಕೆಡಿಸುವ ಅನೇಕ ಘಟನೆಗಳು ಸಂಭವಿಸಬಹುದು. ನಿಮ್ಮ ವರ್ತನೆಯು ಜನರಿಗೆ ಅರ್ಥವಾಗದೇ ಇರಬಹುದು. ನೀವು ಏನನ್ನು ಹೇಳಲು ಮತ್ತು ಮಾಡಲು ಇಚ್ಛಿಸುತ್ತೀರಿ ಎನ್ನುವುದು ಅವರಿಗೆ ಅರ್ಥವಾಗದೇ ಇರಬಹುದು. ನಿಮ್ಮ ಮಾತುಗಳು ಮತ್ತು ಕೃತಿಯ ನಡುವೆ ವ್ಯತ್ಯಾಸ ಇರಬಹುದು. ಹೀಗಾಗಿ ನಿಮ್ಮ ಕುಟುಂಬದ ಸಂಬಂಧವು ಹದಗೆಡುವ ಸಾಧ್ಯತೆ ಇದೆ. ಈ ಎಲ್ಲಾ ವಿಚಾರಗಳಿಗೆ ಗಮನ ನೀಡಿ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ದೊಡ್ಡ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ವರ್ಷದ ನಡುವೆ, ಜೀವನ ಸಂಗಾತಿಯ ನೆರವಿನಿಂದ ದೊಡ್ಡ ವಾಹನವನ್ನು ಖರೀದಿಸುವ ಅವಕಾಶ ದೊರೆಯಬಹುದು. ಅತ್ತೆ ಮಾವಂದಿರೊಂದಿಗೆ ವಾಗ್ವಾದ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ವರ್ಷದ ಆರಂಭವನ್ನು ಸಾಕಷ್ಟು ಸಹನೆ ಮತ್ತು ತಾಳ್ಮೆಯಿಂದ ಕಳೆಯಿರಿ. ಪ್ರಯಾಣದ ವಿಚಾರದಲ್ಲಿ ಹೇಳುವುದಾದರೆ, ಏಪ್ರಿಲ್ ತಿಂಗಳು ಈ ವಿಚಾರದಲ್ಲಿ ಅತ್ಯುತ್ತಮ. ತದನಂತರ, ಅಕ್ಟೋಬರ್ ಮತ್ತು ನವಂಬರ್ ತಿಂಗಳುಗಳ ಪ್ರಯಾಣವು ನಿಮಗೆ ಸಾಕಷ್ಟು ಸಂತಸ ನೀಡಲಿದೆ. ನೀವು ಈ ಪ್ರಯಾಣದಿಂದ ಸಾಕಷ್ಟು ಸಂತಸ ಪಡೆಯಲಿದ್ದೀರಿ. ವರ್ಷದ ಆರಂಭದಿಂದಲೇ ನೀವು ಗೆಳೆಯರ ನೆರವನ್ನು ಪಡೆಯಲಿದ್ದೀರಿ. ವರ್ಷದ ಆರಂಭದಲ್ಲಿ ಸರ್ಕಾರದಿಂದ ಒಂದಷ್ಟು ಪ್ರಯೋಜನ ಲಭಿಸಬಹುದು. ನಿಮ್ಮ ತಂದೆಯೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿ. ಏಕೆಂದರೆ ಈ ವರ್ಷದಲ್ಲಿ ಅವರೊಂದಿಗಿನ ಸಂಬಂಧ ಹದಗೆಡುವ ಸಾಧ್ಯತೆ ಇದೆ. ಸದ್ಯಕ್ಕೆ ನಿಮ್ಮ ಆರೋಗ್ಯದ ಕುರಿತು ನೀವು ನಿರ್ಲಕ್ಷ್ಯ ತೋರಬಹುದು. ಹೀಗಾಗಿ ಎಚ್ಚರಿಕೆ ವಹಿಸಿ. ಈ ವರ್ಷದಲ್ಲಿ ನೀವು ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ಹೊಸ ವಿಚಾರಗಳು ಹೊಳೆಯಬಹುದು. ಇದರಿಂದಾಗಿ ನಿಮ್ಮ ವ್ಯವಹಾರದಲ್ಲಿ ಪ್ರಗತಿ ಸಾಧಿಸಲು ನಿಮಗೆ ಸಾಧ್ಯವಾಗುತ್ತದೆ. ಉದ್ಯೋಗದಲ್ಲಿರುವ ಜನರು ವ್ಯವಹಾರಕ್ಕೆ ಕಾಲಿಡಲು ಯತ್ನಿಸಬಹುದು. ಆದರೆ ಸದ್ಯಕ್ಕೆ ಕೆಲಸದಲ್ಲೇ ಮುಂದುವರಿಯಿರಿ. ನೀವು ವ್ಯವಹಾರವನ್ನು ನಡೆಸಲು ಆಸಕ್ತಿ ಹೊಂದಿದ್ದರೆ, ಕೆಲಸದ ಜೊತೆಗೆಯೇ ವ್ಯವಹಾರವನ್ನು ನಡೆಸಿ.