ಕುಂಭ ರಾಶಿಯವರು ತಮ್ಮ ಅನುರಾಗದ ವಿಚಾರದಲ್ಲಿ ದೃಢತೆಯನ್ನು ಹೊಂದಿರುತ್ತಾರೆ. ಮನಸ್ಸನ್ನು ಗಟ್ಟಿಗೊಳಿಸಿದರೆ ಅವುಗಳನ್ನು ಪೂರ್ಣಗೊಳಿಸಿ ನಿಟ್ಟುಸಿರು ಬಿಡಬಹುದು. ನೀವು ನಿಮ್ಮದೇ ಆದ ನಿಯಮಗಳನ್ನು ರೂಪಿಸಿ ಅದನ್ನು ಪಾಲಿಸಲಿದ್ದೀರಿ.
ಹೀಗಾಗಿ ಬೇಗನೆ ನಿಮ್ಮ ಮನಸ್ಸನ್ನು ಬದಲಾಯಿಸಬೇಡಿ. ಈ ವರ್ಷದಲ್ಲಿ ಕುಂಭ ರಾಶಿಯವರು ಎರಡು ವಿಚಾರಗಳ ಮೇಲೆ ಆದಷ್ಟು ಗಮನ ನೀಡಬೇಕು. ಮೊದಲನೆಯದು ಆರೋಗ್ಯ ಮತ್ತು ಎರಡನೆಯದಾಗಿ ನಿಮ್ಮ ಖರ್ಚುವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಬೇಕು. ಆದರೂ, ಈ ವರ್ಷದ ಮೊದಲ 4 ತಿಂಗಳುಗಳು ನಿಮಗೆ ಕಷ್ಟಕರವೆನಿಸಲಿವೆ.
ಅದೃಷ್ಟ ನಿಮ್ಮ ಜೊತೆಗಿಲ್ಲ ಎಂದು ನಿಮಗೆ ಭಾಸವಾಗಬಹುದು. ಆದರೆ ಏಪ್ರಿಲ್ ನಂತರ ಗುರುವಿನ ಸ್ಥಾನ ಬದಲಾವಣೆಯು ನಿಮ್ಮ ಪಾಲಿಗೆ ಶುಭ ಸುದ್ದಿಯನ್ನು ತರಬಹುದು. ಶನಿಯು ಸಹ ಏಪ್ರಿಲ್ನಲ್ಲಿ ಕುಂಭದಲ್ಲಿ ಸ್ಥಾನ ಬದಲಾವಣೆ ಮಾಡಲಿದೆ. ಇದು ನಿಮ್ಮ ಪಾಲಿಗೆ ಒಂದಷ್ಟು ಆಲಸ್ಯವನ್ನು ಹೊತ್ತು ತರಲಿದೆ.
ಆದರೆ, ನಿಮ್ಮ ಶಕ್ತಿಯು ವೃದ್ಧಿಸಲಿದೆ. ಈ ವರ್ಷದಲ್ಲಿ ಮೇ ತಿಂಗಳ ನಂತರ ನೀವು ಧಾರ್ಮಿಕ ಅಥವಾ ದೀರ್ಘ ಪ್ರವಾಸವನ್ನು ಕೈಗೊಳ್ಳಬಹುದು. ಅಲ್ಲದೆ ನೀವು ಸರ್ಕಾರಿ ಕೆಲಸದಿಂದ ಲಾಭವನ್ನು ಪಡೆಯಲಿದ್ದೀರಿ. ಕಾರ್ಯಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ನಯವಿನಯದಿಂದ ವರ್ತಿಸಲಿದ್ದೀರಿ. ಅವರೊಂದಿಗಿನ ನಿಮ್ಮ ಸಂಬಂಧ ಹದಗೆಟ್ಟರೆ ಇದು ನಿಮ್ಮ ಕೆಲಸವನ್ನು ಬಾಧಿಸಲಿದೆ. ಈ ವರ್ಷದ ಮಧ್ಯ ಭಾಗದಲ್ಲಿ ನಿಮ್ಮ ಗೆಳೆಯರಿಂದ ಸಾಕಷ್ಟು ಬೆಂಬಲವನ್ನು ಪಡೆಯಲಿದ್ದೀರಿ.
ಈ ಕಾರಣದಿಂದಾಗಿ ನಿಮ್ಮ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳು ಅಧ್ಯಯನದ ವಿಚಾರದಲ್ಲಿ ಸಾಕಷ್ಟು ಗಂಭೀರವಾಗಿ ಕೆಲಸ ಮಾಡಬೇಕು. ಕೌಟುಂಬಿಕ ಜೀವನದಲ್ಲಿ ಒಂದಷ್ಟು ಒತ್ತಡ ಎದುರಾಗಬಹುದು. ಆದರೆ ಕಾಲ ಕಳೆದಂತೆ ಇದು ಬಗೆಹರಿಯುತ್ತದೆ. ಈ ವರ್ಷದಲ್ಲಿ ನೀವು ಮುಂದೆ ಸಾಗಿ ಹಳೆದ ಯೋಜಿತ ಕೆಲಸಗಳನ್ನು ಪೂರ್ಣಗೊಳಿಸಿ ಇದರಲ್ಲಿ ಯಶಸ್ಸನ್ನು ಗಳಿಸಲಿದ್ದೀರಿ.
ಇದನ್ನೂ ಓದಿ: ಅನಾವಶ್ಯಕ ವೆಚ್ಚ ಕಡಿಮೆ ಮಾಡಿ, ಅಧಿಕಾರಿಗಳಿಗೆ ಸಿಎಂ ತಾಕೀತು.. ಒಗ್ಗಟ್ಟಿನಿಂದ ಸವಾಲು ಎದುರಿಸುವ ಅಭಯ