ಕರ್ನಾಟಕ

karnataka

ETV Bharat / bharat

Horoscope-2022: ಮಕರ ರಾಶಿಯವರಿಗೆ ಕಠಿಣ ಶ್ರಮಕ್ಕೆ ಫಲ ದೊರೆಯಲಿದೆ; ಆದರೆ!? - 2022ರ ರಾಶಿ ಭವಿಷ್ಯ

ಈ ವರ್ಷ ನಿಮಗೆ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ, ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಂಡು ಬರುವ ಸಾಧ್ಯತೆ ಇರುವುದರಿಂದ ನೀವು ಈ ಕುರಿತು ಒಂದಷ್ಟು ಗಮನ ನೀಡಬೇಕಾದೀತು.

Yearly horoscope 2022; You are going to get a good result
Yearly horoscope 2022; You are going to get a good result

By

Published : Jan 1, 2022, 4:47 PM IST

2022ರ ಈ ವರ್ಷವು ಮಕರ ರಾಶಿಯವರಿಗೆ ಸಾಧಾರಣಕ್ಕಿಂತ ಚೆನ್ನಾಗಿರಲಿದೆ. ಅನೇಕ ಸ್ಥಳಗಳಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಏಪ್ರಿಲ್‌ನಿಂದ ಅಕ್ಟೋಬರ್‌ ತನಕದ ಈ ಅವಧಿಯು ನಿಮ್ಮಲ್ಲಿ ಕೆಲವು ಹೊಸ ಬದಲಾವಣೆಗಳನ್ನು ತರಲಿದೆ.

ಉದ್ಯೋಗದಲ್ಲಿರುವ ಜನರ ಕೆಲಸದಲ್ಲಿ ಹೆಚ್ಚಳ ಉಂಟಾಗಲಿದೆ. ಆದರೂ, ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಹೊಸ ಉದ್ಯೋಗ ಅಥವಾ ವ್ಯವಹಾರದಲ್ಲಿರುವವರು ಕೆಲವು ಹೊಸ ಅವಕಾಶಗಳನ್ನು ಪಡೆಯಲಿದ್ದಾರೆ. ನಿಮ್ಮ ಏಳೂವರೆಯ ಇನ್ನೊಂದು ಹಂತ ಕಾಣಿಸಿಕೊಳ್ಳಬಹುದು. ಈ ಹಂತದಲ್ಲಿ ನಿಮ್ಮ ಅನೇಕ ಕೆಲಸಗಳು ಪೂರ್ಣಗೊಳ್ಳಲಿವೆ. ಆದರೂ, ನಿಮ್ಮ ಕಠಿಣ ಶ್ರಮಕ್ಕೆ ಫಲ ದೊರೆಯಲಿದೆ. ಆದರೆ ಅದೃಷ್ಟ ಬೆಂಬಲ ಸಿಗುವುದು ಕಷ್ಟಕರ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ.

ನಿಮ್ಮ ಆದಾಯವನ್ನು ಹೇಗೆ ಹೆಚ್ಚಿಸಬಹುದು ಎನ್ನುವ ಕುರಿತು ನೀವು ಗಮನ ಹರಿಸಲಿದ್ದೀರಿ. ನೀವು ಇದೇ ರೀತಿ ಕೆಲಸ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ವಿದೇಶಕ್ಕೆ ಹೋಗಲು ಇಚ್ಛಿಸುವವರು ತಮ್ಮ ಪ್ರಯತ್ನಕ್ಕೆ ಉತ್ತಮ ಯಶಸ್ಸು ಪಡೆಯಲಿದ್ದಾರೆ.

ಕುಟುಂಬದ ಎಳೆಯ ಸದಸ್ಯರು ನಿಮ್ಮನ್ನು ಸಾಕಷ್ಟು ಪ್ರೀತಿಸಲಿದ್ದಾರೆ ಹಾಗೂ ನಿಮ್ಮ ಜೊತೆಗೆ ಸಾಮರಸ್ಯದಿಂದ ಬದುಕಲಿದ್ದಾರೆ. ಜುಲೈ ಮತ್ತು ಅಕ್ಟೋಬರ್‌ ನಡುವೆ ಅತಿಯಾದ ಆತ್ಮವಿಶ್ವಾಸ ತೋರಿಸಬೇಡಿ. ಇಲ್ಲದಿದ್ದರೆ ನೀವು ಕೆಲವು ಪ್ರಮುಖ ಅವಕಾಶಗಳನ್ನು ಕಳೆದುಕೊಳ್ಳಬಹುದು. ಈ ವರ್ಷದಲ್ಲಿ ನಿಮ್ಮ ತಾಯಿ ಮತ್ತು ತಂದೆಯ ಆರೋಗ್ಯವು ನಿಮ್ಮ ಚಿಂತೆಗೆ ಕಾರಣವಾಗಲಿದೆ. ವರ್ಷದ ಮಧ್ಯ ಭಾಗದಲ್ಲಿ, ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಏರುಪೇರು ಕಂಡು ಬರುವ ಸಾಧ್ಯತೆ ಇರುವುದರಿಂದ ನೀವು ಈ ಕುರಿತು ಒಂದಷ್ಟು ಗಮನ ನೀಡಬೇಕಾದೀತು. ನೀವು ಅನಾರೋಗ್ಯಕ್ಕೆ ತುತ್ತಾಗಬಹುದು. ಆದರೆ ಈ ವರ್ಷದ ಕೊನೆಯ ನಾಲ್ಕು ತಿಂಗಳುಗಳು ನಿಮ್ಮ ಪಾಲಿಗೆ ಫಲಪ್ರದ ಎನಿಸಲಿವೆ.

ದೀರ್ಘ ಕಾಲದಿಂದ ನೀವು ಪೂರ್ಣಗೊಳಿಸಲು ಇಚ್ಛಿಸುತ್ತಿದ್ದ ಹಾಗೂ ಬಾಕಿ ಇರುವ ಕೆಲಸವು ಪೂರ್ಣಗೊಳ್ಳಲಿದೆ. ಹಣಕಾಸಿನ ವಿಚಾರದಲ್ಲಿಯೂ ಈ ವರ್ಷವು ನಿಮಗೆ ಲಾಭದಾಯಕ ಎನಿಸಲಿದೆ. ಹೀಗಾಗಿ ನಿಮ್ಮ ಹಣಕಾಸಿನ ಸ್ಥಿತಿಯನ್ನು ಸುಧಾರಿಸಲು ನೀವು ಯತ್ನಿಸಬೇಕು. ಕಾನೂನಿನ ವಿಚಾರಗಳಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ.

ಇದನ್ನೂ ಓದಿ:2022ರ ಏಪ್ರಿಲ್‌ನಲ್ಲಿ ಸಿನಿ ಪ್ರಿಯರಿಗೆ ಹಬ್ಬದೂಟ; ಕೆಜಿಎಫ್‌-2, ಲಾಲ್ ಸಿಂಗ್ ಛಡ್ಡಾ ನಡುವಿನ ರೇಸ್‌ಗೆ RRR ಎಂಟ್ರಿ!

ABOUT THE AUTHOR

...view details