ಕೆಲವೇ ದಿನಗಳಲ್ಲಿ 2022ನೇ ವರ್ಷ ಪ್ರಾರಂಭವಾಗಲಿದೆ. 2021 ರಲ್ಲಿ ನಡೆದ ಘಟನಾವಳಿಗಳನ್ನು ಮೆಲುಕು ಹಾಕಿದರೆ, ಕೋವಿಡ್ ನಿಯಂತ್ರಿಸಿದ್ದು, ನೂರು ಕೋಟಿ ಕೊರೊನಾ ಲಸಿಕಾಕರಣ ಮಾಡಿದ್ದು ದೇಶದ ಸಾಧನೆ ಆಯಿತು. ಭಾರತದ ಮೂರು ಪಡೆಗಳ ಮುಖ್ಯಸ್ಥರಾಗಿದ್ದ(ಸಿಡಿಎಸ್) ಬಿಪಿನ್ ರಾವತ್ ಸೇರಿದಂತೆ ಸೇನಾಧಿಕಾರಿಗಳ ದುರಂತ ಅಂತ್ಯ ಕಹಿ ಘಟನೆಯಾಗಿಯೇ ಉಳಿದಿದೆ.
ದೇಶದಲ್ಲಿ ಕೊರೊನಾ ಲಸಿಕಾಕರಣ ಪ್ರಾರಂಭ..
ದೇಶವನ್ನೇ ತಲ್ಲಣಗೊಳಿಸಿದ್ದ ಕೊರೊನಾ ವೈರಸ್ಗೆ ದೇಶೀಯವಾಗಿ ತಯಾರಿಸಿದ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಅನ್ನು ಜನವರಿ 16 ರಿಂದ ದೇಶದ ನಾಗರಿಕರಿಗೆ ನೀಡುವ ಬೃಹತ್ ಲಸಿಕಾ ಅಭಿಯಾನವನ್ನು ಆರಂಭಿಸಲಾಯಿತು. ಇದು ವಿಶ್ವದಲ್ಲಿಯೇ ಅತಿದೊಡ್ಡ ಲಸಿಕೆ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇದರಲ್ಲಿ 141 ಕೋಟಿಗೂ ಹೆಚ್ಚು ಜನರಿಗೆ ಲಸಿಕೆ ಒದಗಿಸಲಾಗಿದೆ.
ದೇಶದ ಅತಿದೊಡ್ಡ ಕ್ರಿಕೆಟ್ ಮೈದಾನ ಉದ್ಘಾಟನೆ..
ಗುಜರಾತ್ನ ಅಹಮದಾಬಾದ್ನಲ್ಲಿ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಉದ್ಘಾಟನೆ ಮಾಡಲಾಯಿತು. ಈ ಕ್ರೀಡಾಂಗಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಡಲಾಗಿದೆ. ಇದನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿದರು. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ 1.3 ಲಕ್ಷ ಜನರು ಕುಳಿತುಕೊಳ್ಳಬಹುದಾಗಿದೆ.
ಕೊರೊನಾ 2 ನೇ ಅಲೆ ಅಟ್ಟಹಾಸ..
ಕೊರೊನಾದ ಎರಡನೇ ಮತ್ತು ಮೂರನೇ ಅಲೆ ಪ್ರಪಂಚದಾದ್ಯಂತ ಕಾಣಿಸಿಕೊಂಡಿತು. ಈ ವೇಳೆ ಮಾರ್ಚ್ ಅಂತ್ಯದ ವೇಳೆಗೆ ಭಾರತದಲ್ಲಿ ಕೊರೊನಾದ ಎರಡನೇ ಅಲೆ ಕಂಡುಬಂತು. ಕೊರೊನಾ ಅಟ್ಟಹಾಸಕ್ಕೆ ಅಪಾರ ಪ್ರಮಾಣದ ಜನರು ಪ್ರಾಣ ಕಳೆದುಕೊಂಡರು. ಇದು ದೇಶದ ಇತಿಹಾಸದಲ್ಲಿಯೇ ಕರಾಳ ಅಧ್ಯಾಯವಾಗಿದೆ.
ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ದಾಖಲೆ..
ಜಪಾನ್ನ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದರು. ಇದು ಭಾರತಕ್ಕೆ ಅತ್ಯಂತ ಹೆಮ್ಮೆಯ ಕ್ಷಣವಾಗಿತ್ತು. ಇದು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಸಿಕ್ಕ ಏಕೈಕ ಚಿನ್ನದ ಪದಕವಾಗಿತ್ತು. ಈ ಮೂಲಕ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ಚಿನ್ನ ಗೆದ್ದ ಭಾರತದ ಎರಡನೇ ಆಟಗಾರ ನೀರಜ್ ಛೋಪ್ರಾ ಆಗಿದ್ದಾರೆ.
ಟಾಟಾ ಸನ್ಸ್ಗೆ ಏರ್ ಇಂಡಿಯಾ ಸ್ವಾಮ್ಯ..