ಚೆನ್ನೈ (ತಮಿಳುನಾಡು):ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಯಾದ ಯಶವಂತ್ ಸಿನ್ಹಾ ಇಂದು ಚೆನ್ನೈಗೆ ಆಗಮಿಸಿದ್ದು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಚುನಾವಣೆಯಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದ ಬೆಂಬಲ ಯಾಚನೆ ಮಾಡಿದ್ದಾರೆ.
ತಮಿಳುನಾಡು ಸಿಎಂ ಭೇಟಿಯಾಗಿ ಬೆಂಬಲ ಕೋರಿದ ಯಶವಂತ್ ಸಿನ್ಹಾ
ಕೇರಳದ ತಿರುವನಂತಪುರದಿಂದ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿನ್ಹಾರನ್ನು ಡಿಎಂಕೆ ಎಂಪಿ ಕನಿಮೋಳಿ ಕರುಣಾನಿಧಿ ಮತ್ತು ತಮಿಳುನಾಡು ಸಚಿವರಾದ ಎಂ.ಎ.ಸುಬ್ರಮಣಿಯನ್ ಮತ್ತು ಪಿ.ಕೆ.ಶೇಕರ ಬಾಬು ಬರಮಾಡಿಕೊಂಡರು.
Yashwant Sinha meets Tamil Nadu CM MK Stalin
ರಾಷ್ಟ್ರಪತಿ ಚುನಾವಣೆಯ ಮತದಾನವು ಜುಲೈ 18 ರಂದು ನಡೆಯಲಿದೆ. 21ರಂದು ಮತ ಎಣಿಕೆ ಜರುಗಲಿದೆ. ಕಳೆದ ಸೋಮವಾರ ಯಶವಂತ್ ಸಿನ್ಹಾ ನಾಮಪತ್ರ ಸಲ್ಲಿಸಿದ್ದರು.