ಕರ್ನಾಟಕ

karnataka

ETV Bharat / bharat

ರಾಹುಲ್​, ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಆಂಧ್ರ ಸಿಎಂ ಜಗನ್​ ಸಹೋದರಿ ಶರ್ಮಿಳಾ

ವೈಎಸ್ಆರ್ ತೆಲಂಗಾಣ ಪಕ್ಷದ ನಾಯಕಿ, ಆಂಧ್ರ ಸಿಎಂ ಜಗನ್​ ಸಹೋದರಿ ಶರ್ಮಿಳಾ ಅವರು ಇಂದು ದೆಹಲಿಯಲ್ಲಿ ಕಾಂಗ್ರೆಸ್​ ಸೇರ್ಪಡೆಯಾದರು.

ಶರ್ಮಿಳಾ
ಶರ್ಮಿಳಾ

By ETV Bharat Karnataka Team

Published : Jan 4, 2024, 10:48 AM IST

Updated : Jan 4, 2024, 3:38 PM IST

ಕಾಂಗ್ರೆಸ್ ಸೇರಿದ ಆಂಧ್ರ ಸಿಎಂ ಜಗನ್​ ಸಹೋದರಿ ಶರ್ಮಿಳಾ

ನವದೆಹಲಿ:ಆಂಧ್ರಪ್ರದೇಶದ ಸಿಎಂ ಜಗನ್ ​ಮೋಹನ್ ​ರೆಡ್ಡಿ ಅವರ ಕಿರಿಯ ಸಹೋದರಿ, ವೈಎಸ್ಆರ್ ತೆಲಂಗಾಣ ಪಕ್ಷದ ಸಂಸ್ಥಾಪಕಿ ವೈ.ಎಸ್. ಶರ್ಮಿಳಾ ಅವರು ಇಲ್ಲಿ ಗುರುವಾರ ಕಾಂಗ್ರೆಸ್ ಸೇರ್ಪಡೆಯಾದರು. ಜೊತೆಗೆ ತಮ್ಮ ಪಕ್ಷವನ್ನೂ ಕಾಂಗ್ರೆಸ್​ನಲ್ಲಿ ವಿಲೀನ ಮಾಡಿದರು.

ಇಲ್ಲಿನ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ಬೆಳಗ್ಗೆ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ವೈಎಸ್​ ಶರ್ಮಿಳಾ ಅವರಿಗೆ ಕಾಂಗ್ರೆಸ್​ ಶಾಲನ್ನು ಹಾಕುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ ಮತ್ತು ರಾಹುಲ್​ ಗಾಂಧಿ ಅವರು ಸ್ವಾಗತಿಸಿದರು.

ಜಾತ್ಯತೀತ ತತ್ವ ಮೆಚ್ಚಿ ಕಾಂಗ್ರೆಸ್​ ಸೇರ್ಪಡೆ:ಬಳಿಕ ಮಾತನಾಡಿದ ಶರ್ಮಿಳಾ, ಇಂದು ವೈಎಸ್​ಆರ್​ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್​ನಲ್ಲಿ ವಿಲೀನ ಮಾಡಿದ್ದೇವೆ. ಇಂದಿನಿಂದ ಅದು ಕಾಂಗ್ರೆಸ್ ಪಕ್ಷವಾಗಿ ಮುಂದುವರೆಯಲಿದೆ. ತೆಲಂಗಾಣದ ಅಭಿವೃದ್ಧಿಗೆ ಸರ್ಕಾರದ ಜೊತೆಗೂಡಿ ಕೆಲಸ ಮಾಡಲಿದ್ದೇವೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್​ ದೇಶದ ಅತಿದೊಡ್ಡ ಜಾತ್ಯತೀತ ಪಕ್ಷವಾಗಿದೆ. ಸಮಾಜದ ಎಲ್ಲ ವರ್ಗದ ಜನರಿಗಾಗಿ ನಾವು ಶ್ರಮಿಸುತ್ತೇವೆ. ದೇಶದಲ್ಲಿ ನಡೆಯುತ್ತಿರುವ ಕೆಲ ಘಟನೆಗಳು ನನ್ನನ್ನು ಬೇಸರಗೊಳಿಸಿದವು. ಹೀಗಾಗಿ ನಾನು ಕಾಂಗ್ರೆಸ್​ ಸೇರಿ ಹೋರಾಟ ಮಾಡಲು ಬಯಸಿದೆ ಎಂದರು. ಇದೇ ವೇಳೆ ರಾಹುಲ್​ ಗಾಂಧಿ ಅವರು ನಡೆಸಿದ ಭಾರತ್​ ಜೋಡೋ ಯಾತ್ರೆ ಬಗ್ಗೆಯೂ ಪ್ರಸ್ತಾಪಿಸಿ, ಕರ್ನಾಟಕ ತೆಲಂಗಾಣದಲ್ಲಿ ಅದು ಬೀರಿದ ಪ್ರಭಾವಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮೊದಲು ಶರ್ಮಿಳಾ ಅವರು, ಬುಧವಾರ ರಾತ್ರಿ ದೆಹಲಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಕಾಂಗ್ರೆಸ್ ಸೇರುವ ಬಗ್ಗೆ ಸುಳಿವು ನೀಡಿದ್ದರು. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು 'ಹೌದು, ಹಾಗೆಯೇ ಇರಬಹುದು' ಎಂದಿದ್ದರು.

ಕಾಂಗ್ರೆಸ್​ನಲ್ಲಿ ವೈಎಸ್‌ಆರ್‌ಟಿಪಿ ವಿಲೀನ:ತೆಲಂಗಾಣದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಆರಂಭಿಸಿದ್ದ ವೈಎಸ್​ಆರ್​ ತೆಲಂಗಾಣ ಪಕ್ಷವನ್ನು ಕಾಂಗ್ರೆಸ್​ನಲ್ಲಿ ವಿಲೀನ ಮಾಡಿದರು. ಈಚೆಗೆ ನಡೆದ ವಿಧಾನಸಭೆ ಚುನಾವಣೆಗೂ ಮೊದಲೇ ಅವರು ಕಾಂಗ್ರೆಸ್​ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅಂತಿಮ ನಿರ್ಣಯ ಕೈಗೊಂಡಿರಲಿಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಬೆಂಬಲ ಘೋಷಿಸಿ, ತಮ್ಮ ಪಕ್ಷದಿಂದ ಯಾರನ್ನೂ ಚುನಾವಣಾ ಅಖಾಡಕ್ಕೆ ನಿಲ್ಲಿಸಿರಲಿಲ್ಲ.

ಕೆ. ಚಂದ್ರಶೇಖರ್ ರಾವ್ ನೇತೃತ್ವದ ಭಾರತ ರಾಷ್ಟ್ರ ಸಮಿತಿ(ಬಿಆರ್‌ಎಸ್‌) ವಿರುದ್ಧ ತೀವ್ರ ಹೋರಾಟ ನಡೆಸಿದ್ದರು. ಹಲವು ಪ್ರತಿಭಟನೆಗಳಲ್ಲಿ ಶರ್ಮಿಳಾ ಅವರನ್ನು ಬಿಆರ್​ಎಸ್​ ಸರ್ಕಾರ ಬಂಧಿಸಿತ್ತು. ಕಾಂಗ್ರೆಸ್​ನ ಕೆಲ ನಾಯಕರ ಮೇಲೆ ಐಟಿ ದಾಳಿ ನಡೆದಾಗ ಬಹಿರಂಗವಾಗಿ ಟೀಕಿಸಿದ್ದರು.

ಇದನ್ನೂ ಓದಿ:ಡಿಸಿಎಂ ಡಿಕೆಶಿ ಭೇಟಿಯಾದ ಆಂಧ್ರ ಸಿಎಂ ಸಹೋದರಿ ವೈ.ಎಸ್.ಶರ್ಮಿಳಾ ರೆಡ್ಡಿ- ವಿಡಿಯೋ

Last Updated : Jan 4, 2024, 3:38 PM IST

ABOUT THE AUTHOR

...view details