ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಈಗಾಗಲೇ ಅನಿರ್ದಿಷ್ಟವಾಗಿ ಮುಂದೂಡುವುದರೊಂದಿಗೆ, ಎಲ್ಲಾ ಕಣ್ಣುಗಳು ಈಗ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನತ್ತ ಮುಖ ಮಾಡಿವೆ.
ಚೊಚ್ಚಲ ಚಾಂಪಿಯನ್ಶಿಪ್ಗಾಗಿ ಟೀಮ್ ಇಂಡಿಯಾ ಸೆಲೆಕ್ಟರ್‌ಗಳು ಜಂಬೋ ತಂಡವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ. ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು 22-24 ಆಟಗಾರರನ್ನು ಆಯ್ಕೆ ಮಾಡಲು ಆಲೋಚಿಸುತ್ತಿದ್ದು, ಅದಕ್ಕಾಗಿ ಈಗಾಗಲೇ 35 ಸಂಭವನೀಯ ಆಟಗಾರರ ಪಟ್ಟಿಯನ್ನು ಬಿಸಿಸಿಐ ಮುಂದಿಟ್ಟಿದೆ ಎಂದು ತಿಳಿದುಬಂದಿದೆ.
ಮುಂದಿನ ವಾರದ ಅಂತ್ಯದ ವೇಳೆಗೆ ಅಂತಿಮ ತಂಡವನ್ನು ನಿರ್ಧರಿಸುವ ಸಾಧ್ಯತೆ ಇದೆ. ಪ್ರಸ್ತುತ, ಭಾರತದಿಂದ ವಿಮಾನ ಪ್ರಯಾಣದ ಮೇಲೆಯೇ ನಿರ್ಬಂಧ ಹೇರಿರುವುದರಿಂದ ಬಿಸಿಸಿಐ ಭಾರತ ತಂಡವನ್ನು ವಿಶೇಷ ವಿಮಾನದಲ್ಲಿ ಇಂಗ್ಲೆಂಡ್‌ಗೆ ಕಳುಹಿಸಲಿದೆ. ಅಲ್ಲಿಗೆ ತೆರಳಿದ ನಂತರ ಆಟಗಾರರು ಬ್ರಿಟನ್‌ನಲ್ಲಿ ಹತ್ತು ದಿನಗಳ ಕಾಲ ಕ್ವಾರಂಟೈನ್ ಮಾಡಲಿದ್ದಾರೆ.