ಚೆನ್ನೈ:ಇತ್ತೀಚೆಗೆ ನಡೆದ ಫಿಡೆ ಚೆಸ್ ಒಲಿಂಪಿಯಾಡ್ ಈ ಒಳಾಂಗಣ ಆಟದ ಬಗ್ಗೆ ಯುವಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ ಎಂದು ತಮಿಳುನಾಡು ಸಿಎಂ ಸ್ಟಾಲಿನ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಪ್ರಯತ್ನದಿಂದಾಗಿ ಡಬ್ಲ್ಯುಟಿಎ ಚೆನ್ನೈ ಓಪನ್ 2022 ಕ್ರೀಡಾಕೂಟವನ್ನೂ ಆಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸ್ಟಾಲಿನ್ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಧನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ರೀಡೆ ಸೇರಿದಂತೆ ದ್ರಾವಿಡ ನಾಡಿನ ಎಲ್ಲರೂ ಸರ್ವಾಂಗೀಣ ಅಭಿವೃದ್ಧಿಹೊಂದಿ, ತಮಿಳುನಾಡಿನ ಕ್ರೀಡಾಪಟುಗಳು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ, ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತರಬೇಕು ಎಂದು ಸಿಎಂ ಸ್ಟಾಲಿನ್ ಇದೇ ವೇಳೆ ಕ್ರೀಡಾಪಟುಗಳಿಗೆ ಹಾಗೂ ರಾಜ್ಯದ ಯುವಕರಿಗೆ ಕರೆ ನೀಡಿದರು. ಡಬ್ಲ್ಯುಟಿಎ ಚೆನ್ನೈ ಓಪನ್ ಪಂದ್ಯಗಳು ಇಂದಿನಿಂದ ಆರಂಭವಾಗಿವೆ.
ಕ್ರೀಡೆಯ ಬೆಳವಣಿಗೆ ಪ್ರೋತ್ಸಾಹ:1,000ಕ್ಕೂ ಹೆಚ್ಚು ಕ್ರೀಡಾ ಪಟುಗಳಿಗೆ 16.28 ಕೋಟಿ ರೂ.ಗಳ ವರ್ಧಿತ ನಗದು ಪ್ರೋತ್ಸಾಹ ಧನ ನೀಡಲಾಯಿತು. ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಸಮರ ಕಲೆಗಳಾದ ‘ಸಿಲಂಬಂ’ಗೆ ನೀಡುವ ಪ್ರೋತ್ಸಾಹದಂತೆಯೇ ರಾಜ್ಯದ ಬುಡಕಟ್ಟು ಕ್ರೀಡೆಗಳನ್ನು ಗುರುತಿಸಿ ಬೆಳೆಸಲಾಗುವುದು ಎಂದು ಸ್ಟಾಲಿನ್ ಇದೇ ವೇಳೆ ಘೋಷಣೆ ಮಾಡಿದರು.
ಸಿಎಂ ಎಂ ಕೆ ಸ್ಟಾಲಿನ್ ಅವರು ವಿವಿಧ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಈವೆಂಟ್‌ಗಳಲ್ಲಿ ಪದಕಗಳನ್ನು ಗೆದ್ದ ಒಟ್ಟು 1,130 ತಮಿಳುನಾಡಿನ ಕ್ರೀಡಾ ಪಟುಗಳಿಗೆ ಪ್ರೋತ್ಸಾಹದನ ಹಾಗೂ ಸತ್ಕಾರ ಮಾಡಿ ಗೌರವಿಸಿದರು. 19 ಅತ್ಯುತ್ತಮ ಕ್ರೀಡಾಪಟುಗಳು, ತರಬೇತುದಾರರು, ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ತೀರ್ಪುಗಾರರಿಗೆ ಮುಖ್ಯಮಂತ್ರಿಗಳ ಪ್ರಶಸ್ತಿ ಮತ್ತು 16.30 ಲಕ್ಷ ರೂ. ಪ್ರೋತ್ಸಾಹಧನ ನೀಡಿ ಸನ್ಮಾನ ಮಾಡಲಾಯಿತು.
ಇದನ್ನು ಓದಿ:ಪಶ್ಚಿಮ ಬಂಗಾಳ ವಿಶ್ವದಲ್ಲೇ ಅತ್ಯುತ್ತಮ ರಾಜ್ಯವಾಗಲಿದೆ: ಮಮತಾ ಬ್ಯಾನರ್ಜಿ ವಿಶ್ವಾಸ