ಲಖನೌ(ಉತ್ತರ ಪ್ರದೇಶ): ಇತರ ಧರ್ಮಗಳಲ್ಲಿ ಮಹಿಳೆಯರು ತಮ್ಮ ಪತಿಯಿಂದ ದೂರವಾಗಬೇಕಾದರೆ ಬಹಳ ತೊಡಕುಗಳು ಅಡ್ಡ ಬರುತ್ತವೆ. ವಿಚ್ಛೇದನ ಪಡೆಯಲು ವರ್ಷಗಳು ಕಾಯಬೇಕಾಗುತ್ತದೆ. ಆದರೆ, ಇಸ್ಲಾಂ ಧರ್ಮ ಪತಿಯಿಂದ ದೂರವಾಗಲು ತಲಾಖ್ ಎಂಬ ಸುಲಭ ಮಾರ್ಗವನ್ನು ನೀಡಿದೆ. ತಲಾಖ್ ಮೂಲಕ ಗಂಡನಿಂದ ಮಹಿಳೆ ಸುಲಭವಾಗಿ ಬೇರ್ಪಡಬಹುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಹೇಳಿಕೆ ನೀಡಿದ್ದಾರೆ.
ಸರ್ಕಾರ ತ್ರಿವಳಿ ತಲಾಖ್ ಕುರಿತು ಕಾನೂನು ರೂಪಿಸಿರುವುದು ಸಮಾಜದ ಮೇಲೆ ತಪ್ಪು ಪರಿಣಾಮ ಬೀರಿದೆ. ತಲಾಖ್ ಕ್ರಿಮಿನಲ್ ಕಾನೂನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಪುರುಷರು ಮಹಿಳೆಯರಿಗೆ ತ್ರಿವಳಿ ತಲಾಖ್ ಮೂಲಕ ವಿಚ್ಛೇದನ ನೀಡುವುದು ಕಡಿಮೆಯಾದೆ, ಆದರೆ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.