ಕರ್ನಾಟಕ

karnataka

ETV Bharat / bharat

ಸೋಂಕಿನಿಂದ ಗುಣಮುಖರಾದ ವೃದ್ಧಿಮಾನ್ ಸಾಹಾ ; ಇಂಗ್ಲೆಂಡ್​ ಪ್ರವಾಸಕ್ಕೆ ಫಿಟ್ - ವೃದ್ಧಿಮಾನ್ ಸಾಹಾ ಫಿಟ್

ಅನುಭವಿ ಆಟಗಾರನಾದ ವೃದ್ಧಿಮಾನ ಸಾಹಾ ಈವರೆಗೆ ಒಟ್ಟು 38 ಟೆಸ್ಟ್ ಮ್ಯಾಚ್​ ಆಡಿದ್ದು, 29.09 ಸರಾಸರಿಯಲ್ಲಿ 1251 ರನ್ ಗಳಿಸಿದ್ದಾರೆ. 52 ಇನ್ನಿಂಗ್ಸ್​ಗಳಲ್ಲಿ ಮೂರು ಶತಕ ಹಾಗೂ ಐದು ಅರ್ಧ ಶತಕಗಳನ್ನು ಸಾಹಾ ಬಾರಿಸಿದ್ದಾರೆ..

Wriddhiman Saha recovers, fit for England tour
ಸೋಂಕಿನಿಂದ ಗುಣಮುಖರಾದ ವೃದ್ಧಿಮಾನ್ ಸಾಹಾ; ಇಂಗ್ಲೆಂಡ್​ ಪ್ರವಾಸಕ್ಕೆ ಫಿಟ್

By

Published : May 18, 2021, 7:03 PM IST

ನವದೆಹಲಿ: ವಿಕೆಟ್​ ಕೀಪರ್ ಹಾಗೂ ಬ್ಯಾಟ್ಸಮನ್ ವೃದ್ಧಿಮಾನ್ ಸಾಹಾ ಕೊರೊನಾ ವೈರಸ್​ ಕಾಯಿಲೆಯಿಂದ ಚೇತರಿಸಿಕೊಂಡಿದ್ದು, ಮುಂದಿನ ತಿಂಗಳ ತೆರಳುವ ಇಂಗ್ಲೆಂಡ್​ ಪ್ರವಾಸಕ್ಕೆ ಫಿಟ್​ ಆಗಿದ್ದಾರೆ.

ದೆಹಲಿಯ ಹೋಟೆಲೊಂದರಲ್ಲಿ 15 ದಿನಗಳ ಕಾಲ ಪ್ರತ್ಯೇಕವಾಸದಲ್ಲಿದ್ದ ಸಾಹಾ, ಸದ್ಯ ಕೋಲ್ಕತಾಗೆ ಬಂದಿದ್ದಾರೆ. ಅವರು ಮುಂದಿನ ದಿನಗಳಲ್ಲಿಯೂ ಫಿಟ್​ ಆಗಿರಬೇಕೆಂಬ ಷರತ್ತಿನ ಮೇಲೆ ಅವರನ್ನು ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

36 ವರ್ಷದ ಸಾಹಾ, ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದರಾಬಾದ್ ತಂಡದ ಪರವಾಗಿ ಆಡುತ್ತಿರುವ ಸಮಯದಲ್ಲಿ ಅವರಿಗೆ ಸೋಂಕು ತಗುಲಿತ್ತು.

ಭಾರತ ಕ್ರಿಕೆಟ್ ತಂಡವು ಸೌತಾಂಪ್ಟನ್​ನಲ್ಲಿ ಜೂನ್ 18ರಂದು ನ್ಯೂಜಿಲೆಂಡ್ ವಿರುದ್ಧ ವಿಶ್ವ ಟೆಸ್ಟ್​ ಚಾಂಪಿಯನ್‌ಶಿಪ್ ಫೈನಲ್ನಲ್ಲಿ ಆಡಲಿದೆ. ನಂತರ ಆಗಸ್ಟ್​ನಲ್ಲಿ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಾಲ್ಗೊಳ್ಳಲಿದೆ.

ಅನುಭವಿ ಆಟಗಾರನಾದ ವೃದ್ಧಿಮಾನ ಸಾಹಾ ಈವರೆಗೆ ಒಟ್ಟು 38 ಟೆಸ್ಟ್ ಮ್ಯಾಚ್​ ಆಡಿದ್ದು, 29.09 ಸರಾಸರಿಯಲ್ಲಿ 1251 ರನ್ ಗಳಿಸಿದ್ದಾರೆ. 52 ಇನ್ನಿಂಗ್ಸ್​ಗಳಲ್ಲಿ ಮೂರು ಶತಕ ಹಾಗೂ ಐದು ಅರ್ಧ ಶತಕಗಳನ್ನು ಸಾಹಾ ಬಾರಿಸಿದ್ದಾರೆ.

ABOUT THE AUTHOR

...view details