ಭಾರತ್ಪುರ(ರಾಜಸ್ಥಾನ):ಹಾಡಹಗಲೇ ಆರರಿಂದ ಏಳು ಮಂದಿ ಅಪರಿಚಿತ ದಷ್ಕರ್ಮಿಗಳ ಗುಂಪೊಂದು ಭರತ್ಪುರ ನಗರದ ಕಾಲಿ ಬಿಗಿಚಿ ಪ್ರದೇಶದಲ್ಲಿ 40 ವರ್ಷದ ಕುಸ್ತಿಪಟು ಗಜೇಂದ್ರ ಅಲಿಯಾಸ್ ಲಾಲಾ ಎಂಬವರ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಕುಸ್ತಿಪಟು ಗಜೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಾಲೀಮು ಮುಗಿಸಿ ಜಿಮ್‌ನಿಂದ ಹೊರಬರುತ್ತಿದ್ದ ವೇಳೆ ಈ ಆಘಾತಕಾರಿ ಘಟನೆ ನಡೆದಿದೆ.
ಸ್ಥಳದಲ್ಲಿದ್ದವರು ಗುಂಡಿನ ದಾಳಿಯ ವಿಡಿಯೋವನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ವಿಡಿಯೋದಲ್ಲಿ, ಬೆತ್ತವನ್ನು ಹಿಡಿದ ವ್ಯಕ್ತಿಯೊಬ್ಬ ಗಾಯಾಳುವಿನ ತೊಡೆಯ ಮೇಲೆ ಹೊಡೆಯುತ್ತಿರುವುದು ಕಂಡುಬಂದಿದೆ. ಸಂತ್ರಸ್ತರಿಗೆ ಐದು ಗುಂಡೇಟಿನ ಗಾಯಗಳಾಗಿವೆ.
ಇದನ್ನು ಓದಿ:ಟ್ರ್ಯಾಕ್ಟರ್ಗೆ ಮಿನಿ ಬಸ್ ಡಿಕ್ಕಿ: 3 ತಿಂಗಳ ಮಗು ಸೇರಿದಂತೆ 5 ಜನರ ಸಾವು
'ಕಾರಿನಲ್ಲಿ ಕನಿಷ್ಠ ಆರರಿಂದ ಏಳು ಜನರು ಸ್ಥಳಕ್ಕೆ ಬಂದಿದ್ದು, ತಾಲೀಮು ಮುಗಿಸಿ ಜಿಮ್‌ನಿಂದ ಹೊರಗೆ ಬರುತ್ತಿದ್ದ ಗಜೇಂದ್ರ ಅವರ ಮೇಲೆ ಗುಂಡು ಹಾರಿಸಿದ್ದಾರೆ' ಎಂದು ನಗರ ವೃತ್ತ ಅಧಿಕಾರಿ ಸತೀಶ್ ವರ್ಮಾ ತಿಳಿಸಿದ್ದಾರೆ. 'ಗಜೇಂದ್ರ ಅಲಿಯಾಸ್ ಲಾಲಾ (40) ಅನಾಹ ಗ್ರಾಮದ ನಿವಾಸಿಯಾಗಿದ್ದು, ನಗರದ ಕಾಲಿ ಬಗಿಚಿ ಪ್ರದೇಶದಲ್ಲಿರುವ ಜಿಮ್‌ನಿಂದ ಹೊರಗೆ ಬರುತ್ತಿದ್ದರು. ಆರರಿಂದ ಏಳು ಜನರ ತಂಡವು ಸ್ಥಳಕ್ಕೆ ಆಗಮಿಸಿ ಅವರ ಮೇಲೆ ಗುಂಡು ಹಾರಿಸಿದೆ. ಗಜೇಂದ್ರ ಅವರ ಕೈಗಳಿಗೆ ಮತ್ತು ದೇಹದ ಮೇಲೆ ಐದು ಗುಂಡುಗಳು ತಗುಲಿವೆ. ಅವರನ್ನು ಆರ್‌ಬಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ' ಎಂದು ವರ್ಮಾ ಹೇಳಿದ್ದಾರೆ.