ಮಾಧೇಪುರ( ಬಿಹಾರ): ಹೋಳಿ ಸಂದರ್ಭದಲ್ಲಿ ಗೋಧಿಯಾರಿಯ ಸಾಂಪ್ರದಾಯಿಕ ಜಾತ್ರೆ ನಡೆಯುತ್ತೆ. ಈ ವೇಳೆ ಕುಸ್ತಿ ಸ್ಪರ್ಧೆ ಆಯೋಜಿಸಲಾಗಿತ್ತು. ಜಾತ್ರೆಯಲ್ಲಿ ಲಾಲು ಪ್ರಸಾದ್‌ಗೆ ಸಂಬಂಧಿಸಿದ ಹಾಡು ಮೊಳಗತೊಡಗಿದಾಗ ಅಖಾಡದಲ್ಲಿದ್ದ ಕುಸ್ತಿಪಟುಗಳ ಸಖತ್ ಹೆಜ್ಜೆ ಹಾಕಿ ಸಂಭ್ರಮಿಸಿದರು. ಈ ಕುಸ್ತಿಪಟುಗಳ ಡ್ಯಾನ್ಸ್ ನೆರೆದಿದ್ದ ಜನ ತಮ್ಮ - ತಮ್ಮ ಮೊಬೈಲ್ಗಳಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಈಗ ಇದು ಸಖತ್ ವೈರಲ್ ಆಗ್ತಿದೆ.
ಖೇಸರಿ ಲಾಲ್ ಹಾಡಿಗೆ ಕುಸ್ತಿಪಟು ಡ್ಯಾನ್ಸ್: ಮಾಧೇಪುರದಲ್ಲಿ ನಡೆದ ಕುಸ್ತಿ ಸ್ಪರ್ಧೆಯಲ್ಲಿ ಭೋಜ್‌ಪುರಿ ಗಾಯಕ ಖೇಸರಿ ಲಾಲ್ ಲಾಲೂ ಪ್ರಸಾದ್‌ಗೆ ಸಂಬಂಧಿಸಿದ ಹಾಡೊಂದನ್ನು ಹಾಡುತ್ತಿದ್ದರು. ಹಾಡು ಪ್ರಾರಂಭವಾಗುತ್ತಿದ್ದಂತೆ ಅಖಾಡದಲ್ಲಿದ್ದ ಕುಸ್ತಿಪಟು ಡ್ಯಾನ್ಸ್ ಮಾಡಲು ಶುರು ಮಾಡಿದ್ದಾರೆ. ಈ ವೇಳೆ, ನೂರಾರು ಜನರು ಕುಸ್ತಿಪಟುಗಳ ಡ್ಯಾನ್ಸ್ ನೋಡಿ ಆನಂದಿಸಿದರು. ಈ ಹಾಡಿನಲ್ಲಿ ತೇಜಸ್ವಿ ಯಾದವ್ ಬಗ್ಗೆಯೂ ಚರ್ಚೆಯಾಗಿದೆ. ಈ ವಿಡಿಯೋವನ್ನು ರಾಷ್ಟ್ರೀಯ ಜನತಾ ದಳ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಓದಿ:ಛತ್ರ ಬುಕ್ ಮಾಡಿ ಬರುತ್ತಿದ್ದಾಗಲೇ ಟ್ರಾನ್ಸ್ಫಾರ್ಮರ್ ಸ್ಫೋಟ: ಚಿಕಿತ್ಸೆ ಫಲಿಸದೇ ಅಪ್ಪ, ಮಗಳು ಸಾವು