ಚಾರ್ಖಿ ದಾದ್ರಿ ( ಹರಿಯಾಣ): ಕುಸ್ತಿಪಟು ಭಜರಂಗ್ ಪುನಿಯಾ ಅವರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾಬೀರ್ ಪೆಹಲ್ವಾನ್ ಅವರ ಮೂರನೇ ಮಗಳು ಸಂಗೀತಾ ಫೋಗಾಟ್ ಜೊತೆ ವಿವಾಹವಾಗಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಭಜರಂಗ್ ಪುನಿಯಾ - Sangeeta Phogat
ಕುಸ್ತಿಪಟು ಭಜರಂಗ್ ಪುನಿಯಾ ಅವರು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಮಹಾಬೀರ್ ಪೆಹಲ್ವಾನ್ ಅವರ ಮೂರನೇ ಮಗಳು ಸಂಗೀತಾ ಫೋಗಾಟ್ ಅವರನ್ನ ಸರಳವಾಗಿ ವಿವಾಹವಾಗಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಭಜರಂಗ್ ಪುನಿಯಾ
ಇಬ್ಬರು ತಮ್ಮ ಕುಟುಂಬದವರ ಸಮ್ಮುಖದಲ್ಲಿ ಸರಳವಾಗಿ ವಿವಾಹ ಮಾಡಿಕೊಂಡರು. ಈ ವಿವಾಹ ಕಾರ್ಯಕ್ರಮದಲ್ಲಿ ಹೊಸ ದಂಪತಿಗಳು ಸಸಿ ನೆಡುವ ಮೂಲಕ ಪರಿಸರವನ್ನು ಉಳಿಸಲು ಕರೆ ನೀಡಿದರು. ಕುಟುಂಬದ ಸಾಂಪ್ರದಾಯಿಕ ಪದ್ಧತಿಯಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನೊಂದು ವಿಶೇಷವೆಂದರೆ ಭಜರಂಗ್ ಪೂನಿಯಾ ವರದಕ್ಷಿಣೆ ಇಲ್ಲದೇ ಮದುವೆಯಾಗುವ ಮೂಲಕ ಮುಂಬರುವ ಪೀಳಿಗೆಗೆ ಮಾದರಿಯಾಗಿದ್ದು ವಿಶೇಷವಾಗಿತ್ತು.