ಜುಂಜುನು (ರಾಜಸ್ಥಾನ): ಕುಸ್ತಿಯ ಅಂತಿಮ ಪಂದ್ಯದಲ್ಲಿ ಸೋತ ನಂತರ ಖ್ಯಾತ ಕುಸ್ತಿಪಟು ಬಬಿತಾ ಪೋಗಟ್ ಅವರ ಸೋದರ ಸಂಬಂಧಿ ಹರಿಯಾಣದ ಬಲಾಲಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಮಾರ್ಚ್ 15 ರಂದು ರಾತ್ರಿ 11 ಗಂಟೆಗೆ ಬಲಾಲಿ ಗ್ರಾಮದಲ್ಲಿರುವ ನಿವಾಸದಲ್ಲಿ ಕುಸ್ತಿಪಟು ರಿತಿಕಾ ತಾನು ನಿದ್ರಿಸುವ ಕೋಣೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದಕ್ಕೂ ಮುನ್ನ ರಾಜಸ್ಥಾನದ ಭರತ್ಪುರದಲ್ಲಿ ಆಯೋಜಿಸಲಾಗಿದ್ದ ಕುಸ್ತಿ ಪಂದ್ಯದಲ್ಲಿ ಈಕೆ ಸೋತಿದ್ದರು ಎಂದು ತಿಳಿದು ಬಂದಿದೆ.