ಕರ್ನಾಟಕ

karnataka

ಪಾಕ್‌, ಚೀನಾದಿಂದ ಈಗ ಆತಂಕವಿಲ್ಲದಿದ್ರೂ ಸೇನೆ ಸನ್ನದ್ಧ:  ಐಎಎಫ್‌ ಮುಖ್ಯಸ್ಥ ಚೌಧರಿ

By

Published : Oct 6, 2021, 10:06 PM IST

ಚೀನಾ ಹಾಗೂ ಪಾಕಿಸ್ತಾನ ಹಿಂದೆಂಗಿಂತಲೂ ಹೆಚ್ಚು ಆಪ್ತವಾಗುತ್ತಿರುವುದರಿಂದ ಭಾರತಕ್ಕೆ ಹೆಚ್ಚಿನ ಆತಂಕವೇನೂ ಇಲ್ಲ. ಆದರೂ, ಉಭಯ ದೇಶಗಳನ್ನು ಎದುರಿಸಲು ನಮ್ಮ ಸೇನೆ ಸನ್ನದ್ಧವಾಗಿದೆ ಎಂದು ಭಾರತೀಯ ವಾಯು ಸೇನೆ ನೂತನ ಮುಖ್ಯಸ್ಥ ವಿವೇಕ್‌ ರಾಮ್‌ ಚೌಧರಿ ತಿಳಿಸಿದ್ದಾರೆ.

Worry is China accessing West s military tech thru Pak, says IAF chief
ಪಾಕ್‌, ಚೀನಾ ಮತ್ತಷ್ಟು ಆಪ್ತತೆಯಿಂದ ಹೆಚ್ಚಿನ ಆತಂಕವಿಲ್ಲದಿದ್ರೂ ಸೇನೆ ಸನ್ನದ್ಧ - ಐಎಎಫ್‌ ಮುಖ್ಯಸ್ಥ ಚೌಧರಿ

ನವದೆಹಲಿ: ಚೀನಾ ಮತ್ತು ಪಾಕಿಸ್ತಾನದ ಸಂಬಂಧದಿಂದ ಹೆಚ್ಚಿನ ಆತಂಕ ಇಲ್ಲದಿದ್ದರೂ ಭಾರತವು ಎರಡೂ ದೇಶಗಳನ್ನು ಎದುರಿಸಲು ಸನ್ನದ್ಧವಾಗಿದೆ ಎಂದು ಐಎಎಫ್‌ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಹೇಳಿದ್ದಾರೆ.

ಮುಂಬರುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಹಾಗೂ ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಅವರು, ಹಿಂದಿನ ಸಂಘರ್ಷ ಆಗಿದ್ದರೆ ಹೆಚ್ಚಿನ ಕಾಳಜಿ ವಹಿಸಬೇಕಿತ್ತು. ಪಾಶ್ಚಿಮಾತ್ಯ ಮಿಲಿಟರಿ ತಂತ್ರಜ್ಞಾನ ಮತ್ತು ತಂತ್ರಗಳು ಪಾಕ್‌ ಮೂಲಕ ಚೀನಾದ ಕೈಗೆ ಸೇರುವ ಸಾಧ್ಯತೆಗಳಿವೆ. ಇದು ಸಂಪೂರ್ಣವಾಗಿ ಎರಡು ಪಾಲುದಾರ ರಾಷ್ಟ್ರಗಳ ನಡುವಿನ ಸಂಬಂಧವಾಗಿದೆ. ಇದರಿಂದ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ.

ದಶಕಗಳಿಂದ ಪಾಕಿಸ್ತಾನವು ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಅಮೆರಿಕವನ್ನು ಪಾಲುದಾರಿಕೆಯಾಗಿ ಮಾಡಿಕೊಂಡಿತ್ತು. ಅಮೆರಿಕ ಮತ್ತು ಪಶ್ಚಿಮ ರಾಷ್ಟ್ರಗಳ ನೆರವಿನಿಂದ ತನ್ನ ಸೇನೆಯನ್ನು ಸಜ್ಜುಗೊಳಿಸಿತ್ತು. ತಾಲಿಬಾನ್, ಅಲ್ ಖೈದಾ ಮತ್ತು ಹಕ್ಕಾನಿ ಭಯೋತ್ಪಾದಕ ಜಾಲಕ್ಕೆ ಪಾಕಿಸ್ತಾನದ ಗುಪ್ತ ಬೆಂಬಲ ಇದ್ದರೂ ಸಂಘರ್ಷ ಪೀಡಿತ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಅನಿವಾರ್ಯತೆ ಮತ್ತು ಪ್ರಭಾವದಿಂದಾಗಿ ಅಮೆರಿಕ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು ಪಾಕಿಸ್ತಾನವನ್ನು ಸಹಿಸಿಕೊಂಡಿದ್ದವು ಎಂದು ಹೇಳಿದ್ದಾರೆ.

ABOUT THE AUTHOR

...view details