ಕರ್ನಾಟಕ

karnataka

ವಿಶ್ವದ ಅತಿ ಉದ್ದದ ಹಲ್ಲು ಹೊರತೆಗೆದ ವೈದ್ಯರು !.. ಏನಿದು ಘಟನೆ?

By

Published : Oct 3, 2022, 5:21 PM IST

ಶನಿವಾರ ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ರೋಗಿಯೊಬ್ಬರ ಬಾಯಿಯಿಂದ ವಿಶ್ವದ ಅತಿ ಉದ್ದದ ಹಲ್ಲನ್ನು ಹೊರತೆಗೆಯಲಾಗಿದೆ. ಹಲ್ಲಿನ ಉದ್ದ 37.5 ಮಿಮೀ ಎಂದು ವೈದ್ಯರು ತಿಳಿಸಿದ್ದಾರೆ.

Worlds longest teeth extracted from a patients
ವಿಶ್ವದ ಅತಿ ಉದ್ದದ ಹಲ್ಲು ಹೊರತೆಗೆದ ವೈದ್ಯರು

ಶ್ರೀನಗರ: ಮಧ್ಯ ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಬೀರ್ವಾ ಉಪಜಿಲ್ಲಾ ಆಸ್ಪತ್ರೆಯ ವೈದ್ಯರು ಇಲ್ಲಿನ ವ್ಯಕ್ತಿಯೊಬ್ಬರ ಬಾಯಿಯಿಂದ, ವಿಶ್ವದ ಅತಿ ಉದ್ದದ ಹಲ್ಲನ್ನು ಹೊರತೆಗೆದಿದ್ದಾರೆ. ಹಲ್ಲಿನ ಉದ್ದ 37.5 ಮಿಮೀ ಎಂದು ವೈದ್ಯರು ತಿಳಿಸಿದ್ದಾರೆ.

ಈ ವ್ಯಕ್ತಿ ಈಗಾಗಲೇ ಹಲ್ಲುನೋವಿನಿಂದ ಬಳಲುತ್ತಿದ್ದರು. ಪರೀಕ್ಷೆ ಮಾಡಿದ ನಂತರ ಹಲ್ಲನ್ನು ತೆಗೆಸುವಂತೆ ಸೂಚಿಸಲಾಯಿತು. ಅಲ್ಲದೇ ಅದು ವಿಶ್ವದ ಅತೀ ಉದ್ದದ ಹಲ್ಲು ಎಂದು ಆಸ್ಪತ್ರೆಯ ದಂತ ಶಸ್ತ್ರಚಿಕಿತ್ಸಕ ಡಾ. ಇಮ್ತಿಯಾಜ್ ಅಹ್ಮದ್ ಬಂಡಾಯ್ ಹೇಳಿದ್ದಾರೆ.

ವಿಶ್ವದ ಅತಿ ಉದ್ದದ ಹಲ್ಲು ಹೊರತೆಗೆದ ವೈದ್ಯರು

ಈ ವ್ಯಕ್ತಿ ಕಳೆದ 10 ರಿಂದ 15 ದಿನಗಳಿಂದ ಹಲ್ಲುನೋವಿನಿಂದ ಬಳಲುತ್ತಿದ್ದರು. ಎಕ್ಸ್-ರೇ ಮಾಡಿಸಿದಾಗ ವೈದ್ಯರು ಹಲ್ಲನ್ನು ತೆಗೆಯಬೇಕು ಎಂದು ಸೂಚಿಸಿದ್ದಾರೆ. ಬಳಿಕ ಸುಮಾರು 1 ಗಂಟೆ 30 ನಿಮಿಷದ ಯಶಸ್ವಿ ಶಸ್ತ್ರಚಿಕಿತ್ಸೆ ನಂತರ ಹಲ್ಲನ್ನು ತೆಗೆಯಲಾಗಿದೆ. ರೋಗಿಯು ಆರೋಗ್ಯವಾಗಿದ್ದು, ಶೀಘ್ರದಲ್ಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ:ಅಪರೂಪದ ಶಸ್ತ್ರಚಿಕಿತ್ಸೆ..ಹೃದಯದೊಳಗೆ ಪ್ರವೇಶಿಸಿದ್ದ ಕಿಮೋಥೆರಪಿ ಸಾಧನ ಹೊರತೆಗೆದ ವೈದ್ಯರು

ಬುಕ್ ಆಫ್ ವರ್ಲ್ಡ್ ರೆಕಾರ್ಡ್​ನಲ್ಲಿ, ಇಲ್ಲಿಯವರೆಗೆ ಹೊರತೆಗೆಯಲಾದ ಉದ್ದನೆಯ ಹಲ್ಲು 37.2 ಮಿಮೀ ಇದೆ. ಆದರೆ ಇದೀಗ ಹೊರತೆಗೆದ ಹಲ್ಲು 37.5 ಮಿಮೀಗಿಂತ ಹೆಚ್ಚು ಉದ್ದವಿದೆ. ಆದ್ದರಿಂದ ಇದು ವಿಶ್ವದಲ್ಲಿಯೇ ಅತ್ಯಂತ ಉದ್ದವಾದ ಹಲ್ಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.


ABOUT THE AUTHOR

...view details