ಕರ್ನಾಟಕ

karnataka

By

Published : May 18, 2021, 8:03 AM IST

ETV Bharat / bharat

Covid World Update: ಜಗದಗಲ 16.42 ಕೋಟಿ ಕೇಸ್, 34 ಲಕ್ಷ ಜನರು ಸಾವು

ಜಗತ್ತನ್ನೇ ಸಂಕಷ್ಟ, ನಿರ್ಬಂಧಗಳ ಜೀವನಕ್ಕೆ ದೂಡಿದ ಕೋವಿಡ್​-19 ಎಂಬ ಮಹಾಮಾರಿ ಇಲ್ಲಿಯವರೆಗೆ ಒಟ್ಟು 16,42,62,338 ಮಂದಿಗೆ ಅಂಟಿದ್ದು, 34,03,994 ಜನರನ್ನು ಬಲಿಪಡೆದುಕೊಂಡಿದೆ.

Worldover corona cases and deaths
ಗ್ಲೋಬಲ್​ ಕೋವಿಡ್​ 19 ಟ್ರ್ಯಾಕರ್​

ಹೈದರಾಬಾದ್​:ವಿದ್ಯಾರ್ಥಿಗಳ ಭವಿಷ್ಯ, ಪ್ರೀತಿಪಾತ್ರರ ಜೀವ, ಉದ್ಯೋಗ, ಕಡುಬಡವರ ಒಪ್ಪೊತ್ತಿನ ಊಟ, ಸಹಜ ಜೀವನವನ್ನೇ ಕಸಿದುಕೊಂಡ ಹೆಮ್ಮಾರಿ ಕೊರೊನಾ ಜಗತ್ತಿಗೆ ಕಾಲಿಟ್ಟು ಒಂದೂವರೆ ವರ್ಷ ಕಳೆದಿದೆ. ಶರವೇಗದಲ್ಲಿ ವಿಶ್ವದ 220 ರಾಷ್ಟ್ರಗಳನ್ನು ಆವರಿಸಿ, ವೈದ್ಯಕೀಯ ಕ್ಷೇತ್ರಕ್ಕೆ ಕೋವಿಡ್​ ಸವಾಲೆಸೆದಿದೆ.

16.42 ಕೋಟಿ ಸೋಂಕಿತರು.. 34 ಲಕ್ಷ ಜನರು​ ಸಾವು

2019ರ ಡಿಸೆಂಬರ್​ನಲ್ಲಿ ಚೀನಾದಲ್ಲಿ ಹುಟ್ಟಿದ ಮಹಾಮಾರಿಗೆ ಇಲ್ಲಿಯವರೆಗೆ ಪ್ರಪಂಚದಾದ್ಯಂತ ಒಳಗಾಗಿದ್ದು ಬರೋಬ್ಬರಿ 16,42,62,338 ಮಂದಿ ಎಂದರೆ ನಂಬಲೇ ಬೇಕು. ಇವರಲ್ಲಿ ವೈರಸ್​​ಗೆ ತುತ್ತಾದ 34,03,994 ಜನರು ತಮ್ಮ ಉಸಿರು ನಿಲ್ಲಿಸಿದ್ದಾರೆ. 16.42 ಕೋಟಿ ಸೋಂಕಿತರಲ್ಲಿ 14,29,79,061 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಅಮೆರಿಕದಲ್ಲಿ ಕಡಿಮೆಯಾದ ಸಾವು ನೋವು

ಆರಂಭದಿಂದಲೂ ಕೋವಿಡ್​ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಇದೀಗ ಸಾವು-ನೋವು ಕಡಿಮೆಯಾಗಿ ಸಹಜ ಸ್ಥಿತಿಯತ್ತ ದೇಶ ಮರಳುತ್ತಿದೆ. ಶಾಲೆಗಳಲ್ಲಿ ಹೊರತುಪಡಿಸಿ ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡವರು ರಾಷ್ಟ್ರದೊಳಗೆ ಎಲ್ಲಿಬೇಕಾದರೂ ಮಾಸ್ಕ್​ ಇಲ್ಲದೇ, ದೈಹಿಕ ಅಂತರ ಕಾಯ್ದುಕೊಳ್ಳದೇ ತಿರುಗಾಡಲು ತನ್ನ ಪ್ರಜೆಗಳಿಗೆ ದೊಡ್ಡಣ್ಣ ಅನುಮತಿ ನೀಡಿದ್ದಾರೆ. ಯುಸ್​ನಲ್ಲಿ ದಿನವೊಂದರಲ್ಲಿ ಇದೀಗ 20 ಸಾವಿರ ಸನಿಹ ಕೇಸ್​ಗಳು ಪತ್ತೆಯಾಗುತ್ತಿದ್ದು, 400 ಸನಿಹ ಸಾವು ವರದಿಯಾಗುತ್ತಿದೆ.

ಇದನ್ನೂ ಓದಿ: ಸಂಪೂರ್ಣವಾಗಿ ಲಸಿಕೆ ಪಡೆದವರು ಮಾಸ್ಕ್​​ ಧರಿಸಬೇಕಿಲ್ಲ- ಅಮೆರಿಕ

ಭಾರತದಲ್ಲಿ ಸರ್ಕಾರ, ಜನರ ನಿರ್ಲಕ್ಷ್ಯ ಪರಿಣಾಮ ಸೋಂಕು ಹೆಚ್ಚಳ

ಕಳೆದ ವರ್ಷದ ಕಠಿಣ ಲಾಕ್​ಡೌನ್, ಕೋವಿಡ್​ ಮಾರ್ಗಸೂಚಿಗಳ ಪಾಲನೆಯಿಂದಾಗಿ ಭಾರತದಲ್ಲಿ ಹತೋಟಿಗೆ ಬಂದಿದ್ದ ಕೊರೊನಾ ಇದೀಗ ಅಬ್ಬರಿಸುತ್ತಿದೆ. ದೇಶದಲ್ಲಿ ದಿನವೊಂದರಲ್ಲಿ ವರದಿಯಾಗುತ್ತಿದ್ದ ಒಂದು ಲಕ್ಷ ಸನಿಹ ಕೇಸ್​, ಸಾವಿರ ಸಾವುಗಳು 2021ರ ಫೆಬ್ರವರಿಯಲ್ಲಿ 20 ಸಾವಿರ ಕೇಸ್​, 200ಕ್ಕೂ ಕಡಿಮೆ ಸಾವಿಗೆ ಇಳಿಕೆಯಾಗಿತ್ತು. ಕೊರೊನಾವನ್ನು ಹೊಡೆದೋಡಿಸಿದ್ದೇವೆ ಎಂದು ಬೀಗಿದ ಭಾರತದಲ್ಲಿ ಸರ್ಕಾರ ಹಾಗೂ ಜನರ ನಿರ್ಲಕ್ಷ್ಯ, ರಾಜಕೀಯ ರ್ಯಾಲಿಗಳು, ಧಾರ್ಮಿಕ ಸಮಾರಂಭಗಳ ಪ್ರತಿಫಲವಾಗಿ ಇದೀಗ 24 ಗಂಟೆಗಳಲ್ಲಿ 3-4 ಲಕ್ಷ ಸೋಂಕಿತರು ಪತ್ತೆಯಾಗುತ್ತಿದ್ದು, 4 ಸಾವಿರ ಜನರು ಬಲಿಯಾಗುತ್ತಿದ್ದಾರೆ. ವಿಶ್ವದ ಯಾವುದೇ ಕೋವಿಡ್​ ಪೀಡಿತ ರಾಷ್ಟ್ರದಲ್ಲೂ ಕೂಡ ಇಷ್ಟೊಂದು ದೈನಂದಿನ ಸಾವು-ನೋವು ವರದಿಯಾಗಿರಲಿಲ್ಲ. ಇನ್ನು ವಿದೇಶಗಳಿಗೆ ಲಸಿಕೆ ರಫ್ತು ಮಾಡಿ, ಇದೀಗ ತನ್ನ ಜನರಿಗೆ ಲಸಿಕೆ ಪೂರೈಸಲಾಗದೆ ನಿಧಾನಗತಿಯಲ್ಲಿ ಭಾರತ ವ್ಯಾಕ್ಸಿನೇಷನ್​ ನಡೆಸುತ್ತಿದೆ.

ಪ್ರಪಂಚದ ಕೋವಿಡ್​ ಕೇಸ್​ಗಳ ಸಂಖ್ಯೆಯಲ್ಲಿ ಮೂರನೇ ಹಾಗೂ ಮೃತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್​ನಲ್ಲಿ ದಿನನಿತ್ಯ 33 ಸಾವಿರ ಪ್ರಕರಣಗಳು ಹಾಗೂ ಸಾವಿರ ಸಾವು ವರದಿಯಾಗುತ್ತಿದೆ. ಅಮೆರಿಕ, ಭಾರತ, ಬ್ರೆಜಿಲ್​, ಫ್ರಾನ್ಸ್​, ರಷ್ಯಾ, ಬ್ರಿಟನ್​, ಇಟಲಿ, ಮೆಕ್ಸಿಕೋ- ಇವು ಒಂದು ಲಕ್ಷಕ್ಕೂ ಅಧಿಕ ಜನರನ್ನು ಕೋವಿಡ್​ಗೆ ಕಳೆದುಕೊಂಡ ರಾಷ್ಟ್ರಗಳಾಗಿವೆ.

ಚೀನಾದಲ್ಲಿ ಮೊದಲು ಕೊರೊನಾ ಜನ್ಮ ತಾಳಿದ್ದರೂ ಅಲ್ಲಿ ಈವರೆಗೆ 90,847 ಕೊರೊನಾ ಪ್ರಕರಣಗಳು ದಾಖಲಾಗಿದ್ದು, 4,636 ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ವಿಶ್ವದ ಟಾಪ್​-10 ಕೋವಿಡ್​ ಪೀಡಿತ ದೇಶಗಳ ಮಾಹಿತಿ

ರಾಷ್ಟ್ರ ಕೋವಿಡ್​ ಪ್ರಕರಣಗಳು ಮೃತರ ಸಂಖ್ಯೆ
ಅಮೆರಿಕ 3,37,47,222 6,00,529
ಭಾರತ 2,52,27,970 2,78,751
ಬ್ರೆಜಿಲ್​ 1,56,61,106 4,36,862
ಫ್ರಾನ್ಸ್​ 58,81,137 1,07,812
ಟರ್ಕಿ 51,27,548 44,983
ರಷ್ಯಾ 49,49,573 1,16,211
ಯುಕೆ 44,52,756 1,27,684
ಇಟಲಿ 41,62,576 1,24,296
ಸ್ಪೇನ್​ 36,15,860 79,432
ಜರ್ಮನಿ 36,08,292 86,870

ABOUT THE AUTHOR

...view details