ಹೈದರಾಬಾದ್: ಜಗತ್ತಿನ ಕೋವಿಡ್‌ಪೀಡಿತ 218 ರಾಷ್ಟ್ರಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 20 ಮಿಲಿಯನ್ (2,06,17,346) ಗಡಿ ದಾಟಿದೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ವರದಿ ಮಾಡಿದೆ. 3,56,445 ಜನರು ಸೋಂಕು ತಗುಲಿ ಪ್ರಾಣ ತೆತ್ತಿದ್ದಾರೆ.
ಪ್ರಪಂಚದಾದ್ಯಂತ ಈವರೆಗೆ ಬರೋಬ್ಬರಿ 8,43,82,650 ಜನರಿಗೆ ವೈರಸ್ ಅಂಟಿದೆ. 18,35,39 ಸೋಂಕಿತರು ಮೃತಪಟ್ಟಿದ್ದರೆ, 2,76,73,862 ಮಂದಿ ಗುಣಮುಖರಾಗಿದ್ದಾರೆ. ಈ ಅಂಕಿಅಂಶಗಳ ಶೇ.23 ರಷ್ಟು ಪಾಲು ಅಮೆರಿಕದ್ದಾಗಿದೆ.
ಇನ್ನು ಕೇಸ್ಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈವರೆಗೆ 1,03,05,788 ಕೇಸ್ಗಳು ಪತ್ತೆಯಾಗಿದ್ದು, 1,49,212 ಜನರು ವೈರಸ್ಗೆ ಬಲಿಯಾಗಿದ್ದಾರೆ. ಮೂರನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 77,00,578 ಪ್ರಕರಣಗಳು ಹಾಗೂ 1,95,441 ಸಾವುಗಳು ವರದಿಯಾಗಿದೆ. 4ನೇ ಸ್ಥಾನದಲ್ಲಿರುವ ರಷ್ಯಾದಲ್ಲಿ 31,86,336 ಕೇಸ್ಗಳಿದ್ದು, 57,555 ಜನರು ಸಾವನ್ನಪ್ಪಿದ್ದಾರೆ.