ಹೈದರಾಬಾದ್: ನಾವು ಕ್ರಿಸ್ಮಸ್, ಹೊಸವರ್ಷದ ಹೊಸ್ತಿಲಲ್ಲಿ ಇದ್ದು, ಈ ಬಗ್ಗೆ ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, "ಕೊರೊನಾ ನಮ್ಮ ಆಚರಣೆಗಳ ವಿಧಾನವನ್ನು ಬದಲಾಯಿಸಿದೆ. ಇದರರ್ಥ ನಾವು ಆಚರಿಸಲು ಸಾಧ್ಯವಿಲ್ಲ ಎಂದಲ್ಲ. ಆದರೆ ಜನಸಂದಣಿಯನ್ನು ತಪ್ಪಿಸಿ, ಮಾರ್ಗದರ್ಶನಗಳನ್ನು ಅನುಸರಿಸಿ ಪ್ರೀತಿಪಾತ್ರರೊಂದಿಗೆ ಸುರಕ್ಷಿತವಾಗಿ ಆಚರಿಸಿ" ಎಂದು ಹೇಳಿದ್ದಾರೆ.
ವಿಶ್ವದಾದ್ಯಂತ ಬರೋಬ್ಬರಿ 6,74,02,219 ಜನರಿಗೆ ಕಿಲ್ಲರ್ ಕೊರೊನಾ ವೈರಸ್ ಅಂಟಿದ್ದು, 15,41,897 ಸೋಂಕಿತರು ಮೃತಪಟ್ಟಿದ್ದಾರೆ. ಆದರೆ ಸೋಂಕಿತರ ಪೈಕಿ 4,65,89,492 ಮಂದಿ ಗುಣಮುಖರಾಗಿದ್ದಾರೆ. ಕೊರೊನಾ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 1,51,59,529 ಇದ್ದು, ಮೃತರ ಸಂಖ್ಯೆ 2,88,906ಕ್ಕೆ ಏರಿಕೆಯಾಗಿದೆ.