ಕರ್ನಾಟಕ

karnataka

ETV Bharat / bharat

ಇಂದು ವಿಶ್ವ ಹುಲಿ ದಿನಾಚರಣೆ: ನಾಡಿನ ರಾಜನಿಂದ 'ಕಾಡಿನ ರಾಜ'ನಿಗೆ ಬೇಕಿದೆ ರಕ್ಷಣೆ

ವಿಶ್ವದಲ್ಲಿ ಹುಲಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಕಳವಳದ ಸಂಗತಿ. ಹುಲಿಗಳನ್ನು ಸಂರಕ್ಷಿಸುವುದು ಮತ್ತು ಅವುಗಳ ಆವಾಸಸ್ಥಾನ ವಿಸ್ತರಿಸುವುದು ಸದ್ಯದ ಅಗತ್ಯ. ಇಂದು ವಿಶ್ವ ಹುಲಿ ದಿನಾಚರಣೆ ಆಚರಿಸಲಾಗುತ್ತಿದ್ದು, ಇದರ ಬಗ್ಗೆ ಒಂದಿಷ್ಟು ತಿಳಿಯೋಣ.

Today is World Tiger Day; 70% of the world's tigers are in India
ಇಂದು ವಿಶ್ವ ಹುಲಿ ದಿನಾಚರಣೆ; ನಾಡಿನ ರಾಜನಿಂದ 'ಕಾಡಿನ ರಾಜ'ನಿಗೆ ಬೇಕಿದೆ ರಕ್ಷಣೆ

By

Published : Jul 29, 2022, 11:41 AM IST

ಅಂತಾರಾಷ್ಟ್ರೀಯ ಹುಲಿ ದಿನವನ್ನು ಪ್ರತಿ ವರ್ಷ ಜುಲೈ 29 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಹುಲಿಗಳ ಸಂರಕ್ಷಣೆಯ ಮಹತ್ವದ ಬಗ್ಗೆ ಜನರಿಗೆ, ಸಂಘ-ಸಂಸ್ಥೆಗಳಿಗೆ ಮತ್ತು ಸರ್ಕಾರಗಳಿಗೆ ಜಾಗೃತಿ ಮೂಡಿಸುವುದು ಈ ದಿನಾಚರಣೆಯ ಉದ್ದೇಶ. ವಿಶ್ವ ವನ್ಯಜೀವಿ ನಿಧಿಯ (World Wildlife Fund) ಪ್ರಕಾರ, ಕಳೆದ 150 ವರ್ಷಗಳಲ್ಲಿ ಹುಲಿಗಳ ಜನಸಂಖ್ಯೆಯು ಸರಿಸುಮಾರು 95 ಪ್ರತಿಶತದಷ್ಟು ಕಡಿಮೆಯಾಗಿದೆ. ಆದ್ದರಿಂದ, ಈ ದಿನವು ಕಾಡಿನ ರಾಜ ಹುಲಿಗಳನ್ನು ಉಳಿಸಲು ತಕ್ಷಣಕ್ಕೆ ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲರಿಗೂ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಅಕ್ರಮ ಬೇಟೆ, ವನ್ಯಜೀವಿ ವ್ಯಾಪಾರ, ಮಾನವ-ವನ್ಯಜೀವಿ ಸಂಘರ್ಷ ಮತ್ತು ಹುಲಿಗಳ ಆವಾಸಸ್ಥಾನಗಳನ್ನು ಹಾಳು ಮಾಡುವುದರ ವಿರುದ್ಧ ಎಲ್ಲ ದೇಶಗಳು ಕ್ರಮ ಕೈಗೊಂಡರೆ ನಾವು ಈ ಹುಲಿಗಳನ್ನು ಅಳಿವಿನಿಂದ ಪಾರು ಮಾಡಬಹುದು.

ಇತಿಹಾಸ ಮತ್ತು ಮಹತ್ವವೇನು?:ಕಳೆದ ಶತಮಾನದಲ್ಲಿ ಶೇ 97 ರಷ್ಟು ಹುಲಿಗಳು ಕಣ್ಮರೆಯಾಗಿದ್ದು, ಕೇವಲ ಸುಮಾರು 3,000 ಹುಲಿಗಳು ಮಾತ್ರ ಜಗತ್ತಿನಲ್ಲಿ ಉಳಿದಿವೆ ಎಂಬುದು ಪತ್ತೆಯಾದ ನಂತರ 2010 ರಲ್ಲಿ ಅಂತಾರರಾಷ್ಟ್ರೀಯ ಹುಲಿ ದಿನ ಆಚರಿಸುವುದನ್ನು ಪರಿಚಯಿಸಲಾಯಿತು. ಹುಲಿಗಳು ವಿನಾಶದ ಅಂಚಿನಲ್ಲಿರುವುದನ್ನು ಮನಗಂಡ ವಿಶ್ವದ ಹಲವಾರು ದೇಶಗಳು ರಷ್ಯಾದ ಸೇಂಟ್ ಪೀಟರ್ಸ್ ಬರ್ಗ್ ಹುಲಿ ಶೃಂಗಸಭೆಯಲ್ಲಿ ಹುಲಿಗಳ ಸಂರಕ್ಷಣೆಗಾಗಿ ಒಪ್ಪಂದವೊಂದಕ್ಕೆ ಸಹಿ ಹಾಕಿದವು.

ಹುಲಿಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಮತ್ತು ವಿಸ್ತರಿಸುವ ಉದ್ದೇಶಗಳಿಂದ ಈ ದಿನ ಆಚರಿಸಲಾಗುತ್ತದೆ. ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್, ಇಂಟರ್ ನ್ಯಾಷನಲ್ ಫಂಡ್ ಫಾರ್ ಎನಿಮಲ್ ವೆಲ್ಫೇರ್, ಮತ್ತು ಸ್ಮಿತ್ ಸೋನಿಯನ್ ಇನ್ ಸ್ಟಿಟ್ಯೂಷನ್ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಮಟ್ಟದ ಸಂಸ್ಥೆಗಳು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸುತ್ತವೆ.

ವಿಶ್ವದ ಶೇ 70 ರಷ್ಟು ಹುಲಿ ಭಾರತದಲ್ಲಿ:ವಿಶ್ವ ವನ್ಯಜೀವಿ ನಿಧಿಯ ಪ್ರಕಾರ ಪ್ರಸ್ತುತ ವಿಶ್ವದಲ್ಲಿ ಕೇವಲ 3,900 ಹುಲಿಗಳು ಮಾತ್ರ ಇವೆ. ಇನ್ನು ವಿಶ್ವದಲ್ಲಿ ಈಗಿರುವ ಒಟ್ಟು ಹುಲಿಗಳ ಪೈಕಿ ಸುಮಾರು ಶೇ 70 ರಷ್ಟು ಭಾರತದಲ್ಲೇ ಇರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ.

ಅಂತಾರಾಷ್ಟ್ರೀಯ ಹುಲಿ ದಿನ 2022: ಥೀಮ್"ಹುಲಿಗಳ ಉಳಿವು ನಮ್ಮ ಕೈಯಲ್ಲಿದೆ" (Their survival is in our hands) ಎಂಬುದು ಕಳೆದ ವರ್ಷದ ಥೀಮ್ ಆಗಿತ್ತು. ಆದಾಗ್ಯೂ, ಈ ವರ್ಷದ ಅಂತರರಾಷ್ಟ್ರೀಯ ಹುಲಿ ದಿನದ ಥೀಮ್ ಅನ್ನು ಇನ್ನೂ ಘೋಷಿಸಲಾಗಿಲ್ಲ.

ಭಾರತದಲ್ಲಿ ಪ್ರಾಜೆಕ್ಟ್​ ಟೈಗರ್​:1973 ರಲ್ಲಿ ಹುಲಿಗಳನ್ನು ಸಂರಕ್ಷಿಸುವ ಹೊಸ ಕಲ್ಪನೆಯೊಂದಿಗೆ ಪ್ರಾಜೆಕ್ಟ್ ಟೈಗರ್ ಎಂಬ ಯೋಜನೆಯನ್ನು ಭಾರತದಲ್ಲಿ ಜಾರಿಗೊಳಿಸಲಾಯಿತು. ಪ್ರಾಜೆಕ್ಟ್​ ಟೈಗರ್ ಪ್ರಾರಂಭವಾದಾಗಿನಿಂದ ದೇಶದಲ್ಲಿ 9 ಹುಲಿ ಸಂರಕ್ಷಿತ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ. ಕಾಲಾಂತರದಲ್ಲಿ ಹುಲಿ ಸಂರಕ್ಷಿತ ಪ್ರದೇಶಗಳ ವ್ಯಾಪ್ತಿಯು ನಿರೀಕ್ಷೆಗೂ ಮೀರಿ ಬೆಳೆದಿರುವುದು ಆಶಾದಾಯಕ ಸಂಗತಿಯಾಗಿದೆ.

ABOUT THE AUTHOR

...view details