ಹೈದರಾಬಾದ್(ತೆಲಂಗಾಣ):ಜಗತ್ತಿನ ಜನಸಂಖ್ಯೆಯು ಇದೇ ನವೆಂಬರ್ 15ರ ವೇಳೆಗೆ ಎಂಟು ಶತಕೋಟಿಯ ಗಡಿಯನ್ನು ತಲುಪಲಿದೆ. ವಿಶ್ವಸಂಸ್ಥೆಯ ಪ್ರಕಾರ, ವಿಶ್ವ ಜನಸಂಖ್ಯೆಯು ಕೇವಲ 11 ವರ್ಷಗಳಲ್ಲಿ ಒಂದು ಶತಕೋಟಿ ಹೆಚ್ಚಳವಾಗಲಿದೆ. 2011ರಲ್ಲಿ ಪ್ರಪಂಚವು ಏಳು ಶತಕೋಟಿ ಜನಸಂಖ್ಯೆಯನ್ನು ತಲುಪಿತ್ತು.
ವಿಶ್ವಸಂಸ್ಥೆಯ ಪ್ರಕಾರ, ಪ್ರಸ್ತುತ (2015-2020) ಒಟ್ಟು ಜನನ ಸಂಖ್ಯೆಯು ಜಾಗತಿಕವಾಗಿ ವರ್ಷಕ್ಕೆ 140 ಮಿಲಿಯನ್ ಆಗಿದ್ದು, 2040 - 2045 ರ ಅವಧಿಯಲ್ಲಿ ವಷಕ್ಕೆ 141 ಮಿಲಿಯನ್‌ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಸಾವಿನ ಒಟ್ಟು ಸಂಖ್ಯೆಯು ಪ್ರಸ್ತುತ ವರ್ಷಕ್ಕೆ 57 ಮಿಲಿಯನ್ ಆಗಿದ್ದು, ವರ್ಷಕ್ಕೆ 121 ಮಿಲಿಯನ್ ವರೆಗೆ ಸ್ಥಿರವಾಗಿ ಬೆಳೆಯುವ ನಿರೀಕ್ಷೆಯಿದೆ.
1804 ರಲ್ಲಿ ಕೈಗಾರಿಕಾ ಕ್ರಾಂತಿಯ ನಂತರ ಜಗತ್ತಿನಲ್ಲಿ ಸಂಭವಿಸಿದ ಪ್ರಮುಖ ಬದಲಾವಣೆಯಿಂದಾಗಿ ವಿಶ್ವದ ಜನಸಂಖ್ಯೆಯು ಮೊದಲ ಬಾರಿಗೆ ಒಂದು ಶತಕೋಟಿಯನ್ನು ತಲುಪಿತ್ತು. ಅಲ್ಲಿಂದ 123 ವರ್ಷಗಳ ನಂತರ ಎಂದರೆ 1927ರಲ್ಲಿ ಎರಡು ಶತಕೋಟಿ ಗಡಿಯನ್ನು ತಲುಪಿತ್ತು.
ಆದರೆ, 1960ರಲ್ಲಿ ಮೂರು ಶತಕೋಟಿಯನ್ನು ತಲುಪಲು ಕೇವಲ 33 ವರ್ಷಗಳನ್ನು ತೆಗೆದುಕೊಂಡಿತ್ತು. ಇದಾದ ಬಳಿಕ ಕೇವಲ 14 ವರ್ಷಗಳಲ್ಲೇ 1974ರಲ್ಲಿ ನಾಲ್ಕು ಶತಕೋಟಿಗೆ ಜನ ಸಂಖ್ಯೆ ತಲುಪಿತ್ತು. ಇದರ ನಂತರ ಇನ್ನೂ ವೇಗವಾಗಿ ಎಂದರೆ 13 ವರ್ಷಗಳಲ್ಲಿ 1987 ರಲ್ಲಿ ಐದು ಶತಕೋಟಿ ಗಡಿ ದಾಡಿತ್ತು.
ಅಲ್ಲಿಂದ ಅತಿ ಕಡಿ ಅವಧಿಯಲ್ಲೇ ಪ್ರತಿ ಶತಕೋಟಿಯನ್ನು ಜನ ಸಂಖ್ಯೆ ತಲುಪುತ್ತಿದೆ. 1999ರಲ್ಲಿ ಆರು ಶತಕೋಟಿ ಮತ್ತು 2011 ರಲ್ಲಿ ಏಳು ಶತಕೋಟಿ ತಲುಪಲು ತಲಾ 12 ವರ್ಷಗಳು ಮಾತ್ರ ತೆಗೆದುಕೊಂಡಿತ್ತು. ಈಗ 2022 ರಲ್ಲಿ ಏಳರಿಂದ ಎಂಟು ಶತಕೋಟಿ ಬೆಳೆಯಲು ಕೇವಲ 11 ವರ್ಷಗಳನ್ನು ತೆಗೆದುಕೊಂಡಿದೆ.
ಭೂಗೋಳದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯು ಮನುಷ್ಯ ಸಾಧಿಸಿದ ಗಮನಾರ್ಹ ಪ್ರಗತಿಯನ್ನು ಸೂಚಿಸುತ್ತದೆ ಎಂದು ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಪ್ರತಿಕ್ರಿಯಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅದರಲ್ಲೂ ವೈದ್ಯಕೀಯ ಕ್ಷೇತ್ರದಲ್ಲಿ ನಾವು ಸಾಧಿಸಿರುವ ಬೆಳವಣಿಗೆಯಿಂದ ಮಾನವನ ಆಯಸ್ಸು ಹೆಚ್ಚಿ ಶಿಶು ಮರಣ ಪ್ರಮಾಣ ಕಡಿಮೆಯಾಗಿದೆ. ಸುಸ್ಥಿರ ಗುರಿಗಳೊಂದಿಗೆ ಭೂಗೋಳವನ್ನು ರಕ್ಷಿಸಲು ಎಲ್ಲ ಮಾನವರು ಸಾಮಾನ್ಯ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಾವಿನಲ್ಲೂ ಸಾರ್ಥಕತೆ.. 18 ತಿಂಗಳ ಮಗುವಿನ ಅಂಗಾಂಗ ದಾನ ಮಾಡಿದ ಪೋಷಕರು: ಇಬ್ಬರಿಗೆ ಮರು ಜೀವ