ಕರ್ನಾಟಕ

karnataka

ETV Bharat / bharat

ವಿಶ್ವ ಛಾಯಾಗ್ರಹಣ ದಿನ: ನೆನಪುಗಳನ್ನು ಹಿಡಿದಿಡುವ ಕಲೆ ಫೋಟೋಗ್ರಫಿ - History of Photography

ಇಂದು ವಿಶ್ವ ಛಾಯಗ್ರಹಣ ದಿನ. ಕಲೆ, ವಿಜ್ಞಾನಗಳ ಸಮ್ಮಿಳನವಾಗಿರುವ ಫೋಟೋಗ್ರಫಿ ಇಂದು ಕೋಟ್ಯಂತರ ಜನರಿಗೆ ಜೀವನಾಧಾರವೂ ಹೌದು.

World Photography Day 2021
ವಿಶ್ಬ ಛಾಯಾಗ್ರಹಣ ದಿನ

By

Published : Aug 19, 2021, 11:53 AM IST

ವಿಶ್ವ ಛಾಯಾಗ್ರಹಣ ದಿನ (World Photography Day) ವು ಛಾಯಾಗ್ರಹಣ ಕಲೆಯ ಶ್ರೀಮಂತ ಇತಿಹಾಸವನ್ನು ನೆನಪಿಸುತ್ತದೆ. ಛಾಯಾಗ್ರಹಣ ಕಲೆ, ವಿಜ್ಞಾನ ಮತ್ತು ಇತಿಹಾಸವನ್ನು ಅರಿಯಲು ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿ ವರ್ಷ ಆಗಸ್ಟ್ 19 ರಂದು ಆಚರಿಸಲಾಗುತ್ತದೆ.

ಈ ದಿನದ ಉದ್ದೇಶವು ಹೆಚ್ಚು ಹೆಚ್ಚು ಛಾಯಾಗ್ರಾಹಕರು, ಪರಿಣಿತರನ್ನು ಬೆಳೆಸುವುದು ಮತ್ತು ಕಲೆ ಮತ್ತು ತಂತ್ರಜ್ಞಾನದ ಉತ್ತಮ ಮಿಶ್ರಣವಾಗಿರುವ ವೃತ್ತಿಯ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುವುದೇ ಆಗಿದೆ.

ಛಾಯಾಗ್ರಹಣದ ಇತಿಹಾಸ (History of Photography)

ವಿಶ್ವ ಛಾಯಾಗ್ರಹಣ ದಿನದ ಇತಿಹಾಸವನ್ನು ಒಮ್ಮೆ ತಿರುವಿ ಹಾಕೋಣ. ಜಗತ್ತಿನಲ್ಲಿ ಮೊದಲ ಛಾಯಾಗ್ರಹಣ 1837ರಲ್ಲಿ ಡಾಗೆರೋಟೈಪ್ ಛಾಯಾಚಿತ್ರ (Daguerreotype photographic) ಪ್ರಕ್ರಿಯೆಯನ್ನು ಫ್ರೆಂಚ್‌ನ ಲೂಯಿಸ್ ಡಾಗುರೆ ಮತ್ತು ಜೋಸೆಫ್ ನೈಸೆಫೋರ್ ನೀಪ್ಸ್ ಅಭಿವೃದ್ಧಿಪಡಿಸಿದರು.
ಮೊಟ್ಟ ಮೊದಲ ಬಾರಿಗೆ 1837 ರಲ್ಲಿ ಡಾಗೆರೋಟೈಪ್ ಛಾಯಾಚಿತ್ರ ಪ್ರಕ್ರಿಯೆಯನ್ನು ಫ್ರೆಂಚ್‌ನ ಲೂಯಿಸ್ ಡಾಗುರೆ ಮತ್ತು ಜೋಸೆಫ್ ನೈಸೆಫೋರ್ ನೀಪ್ಸ್ ಅಭಿವೃದ್ಧಿಪಡಿಸಿದರು. ಇದಾಗಿ ಕೇವಲ ಎರಡು ವರ್ಷಗಳ ನಂತರ, ಫ್ರೆಂಚ್ ಅಕಾಡೆಮಿ ಆಫ್ ಸೈನ್ಸಸ್ ಡಾಗುರೋಟೈಪ್ ಪ್ರಕ್ರಿಯೆಯನ್ನು ಘೋಷಿಸಿತು. ಆದರೂ, ಇದು ಮೊದಲ ಶಾಶ್ವತ ಛಾಯಾಚಿತ್ರವಾಗಲಿಲ್ಲ.

ನಂತರ ಅದೇ ವರ್ಷ ಆಗಸ್ಟ್ 19 ರಂದು, ಫ್ರೆಂಚ್ ಸರ್ಕಾರವು ಈ ಆವಿಷ್ಕಾರವನ್ನು ಜಗತ್ತಿಗೆ ಉಚಿತ ಉಡುಗೊರೆಯಾಗಿ ಘೋಷಿಸಿತು. ಈ ನೆನಪಿಗಾಗಿ ವಿಶ್ವ ಛಾಯಾಗ್ರಹಣ ದಿನವನ್ನು ಪ್ರತಿವರ್ಷ ಆಗಸ್ಟ್ 19 ರಂದು ಆಚರಿಸಿಕೊಂಡು ಬರಲಾಗ್ತಿದೆ.

ಕಲೆ, ಹವ್ಯಾಸ, ಪ್ರತಿಭೆ (Art, Passion and Talent)

ಛಾಯಾಗ್ರಹಣ ಅಥವಾ ಫೋಟೋಗ್ರಫಿ ಸಂದರ್ಭಗಳನ್ನು, ನೆನಪುಗಳನ್ನು ಶೇಖರಿಸಿಡುವ ಒಂದು ಕಲೆ. ಫೋಟೋಗ್ರಪಿ ಅದೊಂದು ವೃತ್ತಿ, ಕಲೆ, ಹವ್ಯಾಸ, ಪ್ರತಿಭೆ, ಸೂಕ್ಮ ಸಂವೇಧನೆ ಎಲ್ಲವೂ ಹೌದು. ಈ ಹಿಂದೆಯೆಲ್ಲ ಕ್ಯಾಮರಾ ಹೊಂದಿರುವವರು ಮಾತ್ರ ಫೋಟೋ ತೆಗೆಯಲು ಅವಕಾಶವಿತ್ತು. ಆದರೆ ಈಗ, ಸ್ಮಾರ್ಟ್​ ಫೋನ್ ಕ್ರಾಂತಿಯಿಂದಾಗಿ ಎಲ್ಲರೂ ಫೋಟೋಗ್ರಾಫರ್​ಗಳಾಗಿ ಮಾರ್ಪಟ್ಟಿದ್ದಾರೆ. ಇದಕ್ಕೆ ಇನ್​ಸ್ಟಾಗ್ರಾನಂತಹ ಫೋಟೋ ಓರಿಯೆಂಟೆಡ್ ಆ್ಯಪ್​ಗಳು ಇನ್ನಷ್ಟು ಮೆರುಗನ್ನು ನೀಡಿವೆ.

ಫೋಟೋಗ್ರಫಿ ಉದ್ದಿಮೆ (Photography Business)

ಇಂದು ಫೋಟೋಗ್ರಫಿ ಅನ್ನುವುದು ದೊಡ್ಡ ಉದ್ದಿಮೆ. ಲಕ್ಷಾಂತರ ಯುವ ಜನರು ಫೋಟೋಗ್ರಫಿಯಿಂದಲೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಇಂದಿನ ಯುಗದಲ್ಲಿ ಫೋಟೋಗ್ರಫಿ ಎಂದರೆ, ಅದು ಕೇವಲ ಫೋಟೋ ತೆಗೆಯುವುದು ಮಾತ್ರವಲ್ಲ. ಮದುವೆ, ಸಭೆ ಸಮಾರಂಭಗಳ ವಿಡಿಯೋಗಳನ್ನು ಸೆರೆ ಹಿಡಿದು, ಅದನ್ನು ಸುಂದರವಾಗಿ ಕಟ್ಟಿಕೊಡುವ ಒಂದು ಕಲೆಯೂ ಇಂದು ವೆಡ್ಡಿಂಗ್ ಫೋಟೋಗ್ರಫಿ ಎಂಬ ಹೆಸರಿನಲ್ಲಿ ದೊಡ್ಡ ಉದ್ದಿಮೆಯಾಗಿ ಬೆಳೆದು ನಿಂತಿದೆ.

ABOUT THE AUTHOR

...view details