ಜೈಸಲ್ಮೇರ್(ರಾಜಸ್ಥಾನ):ಇಂದು 74ನೇ ರಾಷ್ಟ್ರೀಯ ಸೇನಾ ದಿನ. ಈ ಅಂಗವಾಗಿ ಸಂಪೂರ್ಣವಾಗಿ ಖಾದಿಯಿಂದ ತಯಾರಿಸಲ್ಪಟ್ಟಿರುವ ಜಗತ್ತಿನ ಅತಿದೊಡ್ಡ ತ್ರಿವರ್ಣ ಧ್ವಜ ಭಾರತೀಯ ಸೇನೆಯಿಂದ ಅನಾವರಣಗೊಂಡಿದೆ. ರಾಜಸ್ಥಾನದ ಜೈಸಲ್ಮೇರ್ ಯುದ್ಧ ವಸ್ತು ಸಂಗ್ರಹಾಲಯದಲ್ಲಿ ಇದನ್ನು ಹಾರಿಸಲಾಗಿದೆ.
ಆರೋಹಣಗೊಂಡಿರುವ ತ್ರಿವರ್ಣ ಧ್ವಜ ಒಟ್ಟು 225 ಅಡಿ ಉದ್ದ, 150 ಅಡಿ ಅಗಲವಿದ್ದು, ಒಂದು ಟನ್ ತೂಕವಿದೆ. ಈ ಧ್ವಜ ಸುಮಾರು 37 ಸಾವಿರದ 500 ಚದರ್ ಅಡಿ ವಿಸ್ತಾರ ಹೊಂದಿದೆ. ಖಾದಿ ಗ್ರಾಮೋದ್ಯೋಗ ಆಯೋಗ(Khadi Village Industries Commission) ಇದನ್ನ ನಿರ್ಮಾಣ ಮಾಡಿದೆ ಎಂದು ತಿಳಿದುಬಂದಿದೆ.
ರಾಜಸ್ಥಾನದ ಜೈಸಲ್ಮೇರ್ ರೈಲು ನಿಲ್ದಾಣ ಮತ್ತು ವಾರ್ ಮ್ಯೂಸಿಯಂನಲ್ಲಿ ಈಗಾಗಲೇ ಭಾರತದ ಅತಿದೊಡ್ಡ ತ್ರಿವರ್ಣ ಧ್ವಜಗಳು ಹಾರಾಟ ನಡೆಸಿವೆ. ಆದರೆ, ವಾರ್ ಮ್ಯೂಸಿಯಂನಲ್ಲಿ ಅನಾವರಣಗೊಂಡಿರುವ ವಿಶ್ವದ ಅತಿದೊಡ್ಡ ತ್ರಿವರ್ಣ ಧ್ವಜ ಇದಾಗಿದೆ.