ಕಾಶ್ಮೀರ:ಗುಲ್ಮಾರ್ಗ್ ಭಾರತದ ಅತ್ಯಂತ ಪ್ರಸಿದ್ಧ ಸ್ಕೀಯಿಂಗ್ ತಾಣಗಳಲ್ಲಿ ಒಂದಾಗಿದೆ. ಚಳಿಗಾಲದ ಸಮಯದಲ್ಲಿ ಗುಲ್ಮಾರ್ಗ್ ಕಣಿವೆಯು ಹಿಮದಿಂದ ತುಂಬಿದ್ದು, ಇಳಿಜಾರುಗಳಲ್ಲಿ ಸ್ಕೀಯಿಂಗ್‌ನ ಅದ್ಭುತ ಅನುಭವವನ್ನು ಪಡೆಯಲು ಹೆಚ್ಚಾಗಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಅತಿ ಹೆಚ್ಚು ಕೇಬಲ್ ಕಾರುಗಳನ್ನು ಹೊಂದಿರುವ ವಿಶ್ವದ ಎರಡನೇ ಸ್ಥಳವಾಗಿರುವ ಗುಲ್ಮಾರ್ಗ್, ಭೂಮಿಯ ಮೇಲಿನ ಸ್ವರ್ಗ ಎಂದು ಖ್ಯಾತಿ ಪಡೆದಿದೆ. ಈಗ ಈ ಗುಲ್ಮಾರ್ಗ್ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಮಾನ್ಯವಾಗಿ ನೀವು ಮರ, ಕಲ್ಲು, ಮಣ್ಣಿನಿಂದ ನಿರ್ಮಿತ ಮನೆ, ರೆಸ್ಟೋರೆಂಟ್, ಹೋಟೆಲ್‌ಗಳನ್ನು ನೋಡಿರ್ತೀರಾ.. ಆದರೆ, ಕಣಿವೆ ರಾಜ್ಯದಲ್ಲಿ ಸ್ವಲ್ಪ ಡಿಫ್ರೆಂಟಾಗಿ ಹಿಮದಿಂದಲೇ ಕೆಫೆಯೊಂದನ್ನ ನಿರ್ಮಿಸಲಾಗಿದೆ. ಹಿಮಾಲಯದ ಗುಲ್ಮಾರ್ಗ್ ಶ್ರೇಣಿಯಲ್ಲಿ 44.5 ಅಡಿ ಅಗಲ ಹಾಗೂ 37.5 ಅಡಿ ಎತ್ತರದ ಕೆಫೆ ನಿರ್ಮಿಸಲಾಗಿದ್ದು, ಈಗ ಪ್ರಪಂಚದ ಅತೀ ದೊಡ್ಡ ಹಿಮ ಕೆಫೆ ಎಂಬ ಬಿರುದು ಪಡೆಯುತ್ತಿದೆ.
ಜಮ್ಮು-ಕಾಶ್ಮೀರದಲ್ಲಿದೆ ಪ್ರಪಂಚದ ಅತೀ ದೊಡ್ಡ ಇಗ್ಲೂ ಕೆಫೆ ಈ ಇಗ್ಲೂ ಕೆಫೆಯನ್ನು ಸುಮಾರು 64 ದಿನಗಳವರೆಗೆ 25 ಜನರ ತಂಡ ಹಗಲು-ರಾತ್ರಿ ನಿರ್ಮಿಸಿದೆ. ಟೇಬಲ್, ಕುರ್ಚಿಗಳನ್ನು ಹಿಮದಿಂದ ತಯಾರಿಸಲಾಗಿದೆ. ಒಳಾಂಗಣವನ್ನು ಕಾಶ್ಮೀರಿ ಕಲಾಕೃತಿಗಳಿಂದ ಅಲಂಕೃತಗೊಳಿಸಲಾಗಿದೆ.
ಓದಿ:ರಾಜ್ಯಸಭೆಯಲ್ಲಿ ಗಾನ ಕೋಗಿಲೆಗೆ ನಮನ: ಮೌನಾಚರಣೆ ಬಳಿಕ 1ಗಂಟೆ ಕಲಾಪ ಮುಂದೂಡಿಕೆ
ಇಗ್ಲೂ ಸೃಷ್ಟಿಕರ್ತ ಸೈಯದ್ ವಾಸಿಂ ಶಾ, ಇದು ಹಿಮದ ರೀತಿಯ ವಿಶ್ವದ ಅತಿದೊಡ್ಡ ಕೆಫೆ ಎಂದು ಹೇಳಿಕೊಂಡರು. ಕೆಲವು ವರ್ಷಗಳ ಹಿಂದೆ ನಾನು ಈ ರೀತಿಯ ಕೆಫೆಯನ್ನು ಸ್ವಿಟ್ಜರ್ಲೆಂಡ್‌ನಲ್ಲಿ ನೋಡಿದ್ದೇನೆ. ಅಲ್ಲಿ ಅವರು ಮಲಗುವ ಸೌಲಭ್ಯಗಳನ್ನು ಹೊಂದಿರುವ ಹೋಟೆಲ್‌ಗಳನ್ನು ಹೊಂದಿದ್ದಾರೆ. ಗುಲ್ಮಾರ್ಗ್ ಬಹಳಷ್ಟು ಹಿಮ ಬೀಳುವ ಪ್ರದೇಶ. ನಾವು ಏಕೆ ಇಲ್ಲಿ ಈ ರೀತಿಯ ಹೋಟೆಲ್ ಅಥವಾ ಕೆಫೆ ಪ್ರಾರಂಭಿಸಬಾರದು ಎಂಬ ಆಲೋಚನೆ ಹುಟ್ಟಿಕೊಂಡಿತು ಅಂತಾ ಶಾ ಹೇಳಿದರು.
ಜಮ್ಮು- ಕಾಶ್ಮೀರದಲ್ಲಿದೆ ಪ್ರಪಂಚದ ಅತೀ ದೊಡ್ಡ ಇಗ್ಲೂ ಕೆಫೆ ಶಾ ಕಳೆದ ವರ್ಷವೂ ಇಗ್ಲೂ ಕೆಫೆ ನಿರ್ಮಿಸಿದ್ದರು. ಅದು ಏಷ್ಯಾದ ಅತಿದೊಡ್ಡ ಕೆಫೆ ಎಂದು ಹೇಳಿಕೊಂಡಿದ್ದರು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಅತಿದೊಡ್ಡ ಇಗ್ಲೂ ಕೆಫೆ ಸ್ವಿಟ್ಜರ್ಲೆಂಡ್‌ನಲ್ಲಿದೆ ಮತ್ತು ಅದರ ಎತ್ತರ 33.8 ಅಡಿ ಮತ್ತು ಅಗಲ 42.4 ಅಡಿಗಳಷ್ಟಿದೆ. ಆದರೆ ಇದು ಅದಕ್ಕಿಂತ ದೊಡ್ಡದಾಗಿದೆ ಎಂದು ಶಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿದೆ ಪ್ರಪಂಚದ ಅತೀ ದೊಡ್ಡ ಇಗ್ಲೂ ಕೆಫೆ ಕಳೆದ ವರ್ಷದ ಕೆಫೆಯಲ್ಲಿ ನಾಲ್ಕು ಟೇಬಲ್‌ಗಳಿದ್ದು, ಒಂದೇ ಬಾರಿಗೆ 16 ಮಂದಿ ಊಟ ಮಾಡಬಹುದಿತ್ತು. ಆದರೆ ಈ ವರ್ಷ 10 ಟೇಬಲ್‌ಗಳನ್ನು ಹಾಕಲಾಗಿದ್ದು, ಒಂದೇ ಬಾರಿಗೆ ನಲವತ್ತು ಜನರು ಊಟ ಮಾಡಬಹುದಾಗಿದೆ. ಈ ಹೋಟೆಲ್ ಅನ್ನು ಮೆಟ್ಟಿಲು ಸಹಿತ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ. ಇದು ಐದು ಅಡಿ ದಪ್ಪ ಹೊಂದಿದ್ದು, ಮಾರ್ಚ್ 15 ರವರೆಗೆ ನಿಲ್ಲುತ್ತದೆ ಎಂದು ನಾವು ಭಾವಿಸಿದ್ದೇವೆ. ನಂತರ ನಾವು ಅದನ್ನು ಸಾರ್ವಜನಿಕರಿಗೆ ಮುಚ್ಚುತ್ತೇವೆ ಅಂತಾ ಶಾ ಹೇಳಿದರು.
ಸ್ಥಳೀಯ ಜನರಿಗೆ ಮತ್ತು ರೆಸಾರ್ಟ್‌ನಲ್ಲಿ ಬರುವ ಪ್ರವಾಸಿಗರಿಗೆ ಇಗ್ಲೂ ಕೆಫೆ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.