ಪ್ರತಿ ವರ್ಷ ಏಪ್ರಿಲ್ ಕೊನೆಯ ವಾರದಲ್ಲಿ (24-30) ವಿಶ್ವ ರೋಗನಿರೋಧಕ ವಾರವಾಗಿ ಆಚರಿಸಿಕೊಂಡು ಬರಲಾಗುತ್ತದೆ. ಎಲ್ಲಾ ವಯಸ್ಸಿನ ಜನರನ್ನು ರೋಗದ ವಿರುದ್ಧ ರಕ್ಷಿಸಲು ಲಸಿಕೆಗಳ ಬಳಕೆ ಉತ್ತೇಜಿಸುವ ಉದ್ದೇಶದಿಂದ ಇಂತಹ ಕಾರ್ಯ ಕ್ರಮ ಜಗತಿನಾದ್ಯಂತೆ ನಡೆಯುತ್ತಿದೆ.
ವಿಶ್ವ ಇಮ್ಯುನೈಸೇಷನ್ ವೀಕ್ 2021ರ ವರ್ಷವನ್ನು ‘ಲಸಿಕೆಗಳು ನಮ್ಮನ್ನು ಹತ್ತಿರವಾಗಿಸುತ್ತವೆ’ ಎಂಬ ವ್ಯಾಖ್ಯದಡಿ ಆಚರಿಸಲಾಗುತ್ತಿದೆ. ಕೋವಿಡ್ ಸೋಂಕಿನ ಸಾಮಾಜಿಕ ಅಂತರದ ಜನರನ್ನು ಒಟ್ಟುಗೂಡಿಸುವಲ್ಲಿ ವ್ಯಾಕ್ಸಿನೇಷನ್‌ನ ಮಹತ್ವ ಉತ್ತೇಜಿಸುವ ಹಾಗೂ ಜೀವನದುದ್ದಕ್ಕೂ ಎಲ್ಲರ ಆರೋಗ್ಯ ಮತ್ತು ಯೋಗಕ್ಷೇಮ ಸುಧಾರಿಸಲು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಸಂದೇಶ ಸಾರಲಾಗುತ್ತಿದೆ.
'ಲಸಿಕೆಗಳು ನಮ್ಮನ್ನು ಹತ್ತಿರವಾಗಿಸಿವೆ ಹಾಗೂ ಮತ್ತೆ ನಮ್ಮನ್ನು ಸಮೀಪಕ್ಕೆ ಕರೆ ತರಲಿವೆ'
200 ವರ್ಷಗಳಿಂದ ಲಸಿಕೆಗಳು ಜೀವಗಳಿಗೆ ಅಪಾಯಕಾರಿ ಹಾಗೂ ನಮ್ಮ ಬೆಳವಣಿಗೆಗೆ ಅಡಿಯಾದ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿವೆ. ಅವುಗಳ ಸಹಾಯದಿಂದಾಗಿ ಸಿಡುಬು ಮತ್ತು ಪೋಲಿಯೊದಂತಹ ರೋಗಗಳನ್ನು ಗೆದ್ದಿದ್ದೇವೆ. ಈ ರೋಗಗಳು ನೂರಾರು ಮಿಲಿಯನ್ ಜೀವಗಳನ್ನು ಬಲಿತೆಗೆದುಕೊಂಡಿವೆ. ಲಸಿಕೆಗಳು ಸಾವನ್ನೂ ದೂರ ತಳ್ಳಿ ನಾವು ಒಟ್ಟಿಗೆ ಬಾಳುವ ಪ್ರಪಂಚದ ಹಾದಿಯಲ್ಲಿ ಮುನ್ನಡೆಯಲು ನೆರವಾಗಿವೆ.
ಲಸಿಕೆಗಳು ಸದಾ ಮುಂದುವರಿಯುತ್ತಲೇ ಇರುತ್ತವೆ. ಟಿಬಿ ಮತ್ತು ಗರ್ಭಕಂಠಕದ ಕ್ಯಾನ್ಸರ್ನಿಂದ ಮುಕ್ತವಾದ ಜಗತ್ತಿಗೆ ನಮ್ಮನ್ನು ಹತ್ತಿರ ತರಲಿವೆ. ದಡಾರದಂತಹ ಬಾಲ್ಯದ ಕಾಯಿಲೆಗಳಿಂದ ಬಳಲುತ್ತಿದ್ದವರನ್ನು ಕಾಪಾಡಲಿವೆ. ಹೂಡಿಕೆ ಮತ್ತು ನವಿನ ಸಂಶೋಧನೆಯು ಲಸಿಕೆ ಅಭಿವೃದ್ಧಿಗೆ ಅದ್ಭುತವಾದ ವಿಧಾನಗಳನ್ನು ಶಕ್ತಗೊಳಿಸುತ್ತಿದೆ. ಇದು ರೋಗನಿರೋಧಕ ವಿಜ್ಞಾನವನ್ನು ಶಾಶ್ವತವಾಗಿ ಬದಲಾಯಿಸುತ್ತಿದೆ. ಆರೋಗ್ಯಕರ ಭವಿಷ್ಯದತ್ತ ನಮ್ಮನ್ನು ಹತ್ತಿರಕ್ಕೆ ತರುತ್ತದೆ.
ಭಾರತದಲ್ಲಿ ಯುನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಂ: ಭಾರತದಲ್ಲಿ ರೋಗನಿರೋಧಕ ಕಾರ್ಯಕ್ರಮವನ್ನು 1978ರಲ್ಲಿ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ‘ಯುನಿವರ್ಸಲ್ ಪ್ರೋಗ್ರಾಂ ಆಫ್ ಇಮ್ಯುನೈಸೇಷನ್’ (ಇಪಿಐ) ಪರಿಚಯಿಸಿತು. 1985ರಲ್ಲಿ ಈ ಕಾರ್ಯಕ್ರಮವನ್ನು ‘ಯುನಿವರ್ಸಲ್ ಇಮ್ಯುನೈಸೇಷನ್ ಪ್ರೋಗ್ರಾಂ’ (ಯುಐಪಿ) ಎಂದು ಮಾರ್ಪಡಿಸಿತು. 1989-90ರ ವೇಳೆಗೆ ದೇಶದ ಎಲ್ಲ ಜಿಲ್ಲೆಗಳನ್ನು ಒಳಗೊಳ್ಳಲು ಹಂತಹಂತವಾಗಿ ಜಾರಿಗೆ ತರಲು ವಿಶ್ವದ ಅತಿದೊಡ್ಡ ಆರೋಗ್ಯ ಕಾರ್ಯಕ್ರಮಗಳಲ್ಲಿ ಇದು ಕೂಡ ಒಂದಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರ್ಕಾರ ಯುನಿವರ್ಸಲ್ ಇಮ್ಯುನೈಸೇನ್ ಕಾರ್ಯಕ್ರಮದ ಮೂಲಕ ಶಿಶುಗಳು, ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಿಗೆ ಹಲವು ಲಸಿಕೆಗಳನ್ನು ಒದಗಿಸುತ್ತದೆ.
ರೋಗ ನಿರೋಧಕತೆ: ರೋಗನಿರೋಧಕತೆಯು ವ್ಯಕ್ತಿಯನ್ನು ಸಾಂಕ್ರಾಮಿಕ ಕಾಯಿಲೆ ವಿರುದ್ಧ ಹೋರಾಡಲು ಪ್ರತಿ ಕಾಯಗಳನ್ನು ಸೃಷ್ಟಿಸುವ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಇದನ್ನು ಲಸಿಕೆ ನೀಡಿಕೆ ಮೂಲಕ ಅಭಿವೃದ್ಧಿಪಡಿಸಲಾಗುತ್ತದೆ. ಲಸಿಕೆ ಹಾಕಿಸಿಕೊಂಡ ನಂತರ ಸೋಂಕು ಅಥವಾ ರೋಗದಿಂದ ವ್ಯಕ್ತಿಯನ್ನು ರಕ್ಷಿಸಲು ದೇಹವು ತಾನೇ ರೋಗನಿರೋಧಕ ಶಕ್ತಿ ಉತ್ತೇಜಿಸಿಕೊಳ್ಳುತ್ತದೆ.
ಮಿಷನ್ ಇಂದ್ರಧನುಷ್: ಮಿಷನ್ ಇಂದ್ರಧನುಷ್ (ಎಂಐ) 2014ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ಮಕ್ಕಳಿಗೆ ಸಂಪೂರ್ಣ ರೋಗನಿರೋಧಕ ವ್ಯಾಪ್ತಿಯನ್ನು ಶೇ 90ಕ್ಕೆ ಹೆಚ್ಚಿಸುವ ಗುರಿ ಹೊಂದಿದೆ.
ಯುಐಪಿ ಅಡಿಯಲ್ಲಿ ವ್ಯಾಕ್ಸಿನೇಷನ್ ಮೂಲಕ ರಕ್ಷಿಸಲ್ಪಟ್ಟ ರೋಗಗಳು
1. ಡಿಫ್ತಿರಿಯಾ